ವರದಿ:ಸಚಿನ ಕಾಂಬ್ಳೆ.
ಅಥಣಿ :ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಆಂತರಿಕ ಯುದ್ದಗಳು ನಡೆದಿವೆ ಅದರಿಂದಲೆ ಕಾಂಗ್ರೆಸ್ ಸೋಲುತ್ತದೆ ಜೆಡಿಎಸ್ ಗೆಲ್ಲಿಸುವುದೆ ನನ್ನ ಉದ್ದೆಶ ಕಾಂಗ್ರೆಸ್ ಸೋಲಿಸುವುದಲ್ಲ ಎಂದು ಅಥಣಿಯಲ್ಲಿ ಮಾಜಿ ಶಾಸಕ ಶಹಜಹಾಂನ ಡೊಂನಗರಗಾಂವ ಎಂದಿದ್ದಾರೆ.ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಅವರನ್ನ ಅಥಣಿ ಜೆಡಿಎಸ್ ಕಾರ್ಯಕರ್ತರು ಮುಖಂಡರು ಅವರನ್ನ ಆತ್ಮಿಯವಾಗಿ ಸ್ವಾಗತಿಸಿ ಗೌರವಿಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅಥಣಿ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಯುದ್ಧಗಳೆ ನಡೆದಿವೆ ವೈಯಕ್ತಿಕ ಪ್ರಚಾರ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ ವಿನಹ ಪಕ್ಷ ಬಲಬಡಿಸುತ್ತಿಲ್ಲಾ ಕಾಂಗ್ರೆಸ್ ತಾನಾಗಿಯೇ ಸೋಲುತ್ತದೆ ಕಾಂಗ್ರೆಸ್ ಸೋಲಿಸುವ ಪ್ರಶ್ನೆ ಇಲ್ಲಾ ಅಥಣಿ ಮತಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವು ಖಚಿತ ಎಂದರು.
ಇದೆ ಸಂದರ್ಭದಲ್ಲಿ ಮಾಜಿ ಶಾಸಕ ಕಲ್ಲಪ್ಪಾ ಮಗೆನ್ನವರ, ಜೆಡಿಎಸ್ ಬ್ಲ್ಯಾಕ್ ಅಧ್ಯಕ್ಷ ಅಣ್ಣಾರಾಯ ಹಾಲಳ್ಳಿ, ಮಲ್ಲಿಕಾರ್ಜುನ ಗುಂಜಿಗಾವಿ, ಶಿವಾನಂದ ಐಗಳಿ, ಮುರುಗೇಶ್ ನಾಯಿಕ, ಸೇರಿದಂತೆ ಹಲವರು ಉಪಸ್ಥಿತರಿದ್ದರು.