ಕಾಗವಾಡದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಿದ್ದ:ಶಾಸಕರು ಶ್ರೀಮಂತ ಪಾಟೀಲ್

Share the Post Now

ವರದಿ:ಸಚಿನ ಕಾಂಬ್ಳೆ. ಕಾಗವಾಡ

ಕಾಗವಾಡ: ತಾಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರಾಣಿ ಚೆನ್ನಮ್ಮ ಅವರ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭವ್ಯಮೂರ್ತಿ ಯನ್ನು ಪ್ರತಿಷ್ಠಾಪಿಸುವ ಕುರಿತು ಕವಲಗುಡ್ಡ ಹಾಗೂ ಹಣಮಾಪುರ ಸಿದ್ಧಸಿರಿ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರ ನೇತೃತ್ವದಲ್ಲಿ ಕಾಗವಾಡ ಮತಕ್ಷೇತ್ರದ ಶಾಸಕರಾದ ಶ್ರೀಮಂತ ಪಾಟೀಲ ಅವರು ಕುರುಬರ ಸಮಾಜದ ಬಾಂಧವರ ಸಭೆಯನ್ನು ಕರೆದು, ತಾಲೂಕಿನಲ್ಲಿ ಒಂದು ಒಳ್ಳೆಯ ಸ್ಥಳವನ್ನು ನಿಯೋಜಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಶಾಸಕರು ಸ್ವಂತ ಅವರ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ 10 ಲಕ್ಷರೂ. ಗಳ ಚಕ್ ವನ್ನು ಕವಲಗುಡ್ಡ ಸಿದ್ದಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರ ನೇತೃತ್ವದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಶಾಸಕರು ಸಮಾಜದ ಬಾಂಧವರ ಉಪಸ್ಥಿತಿಯಲ್ಲಿ ಮಹಾರಾಜರಿಗೆ ಚೆಕ್ ವಿತರಿಸಿದರು.

ಈ ಸಮಯದಲ್ಲಿ ಶಾಸಕರು ಮಾತನಾಡಿ, ನಮ್ಮ ಕಾಗವಾಡ ತಾಲೂಕಿನಲ್ಲಿ ಮಹಾನ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅವರ ಮೂರ್ತಿ ಪ್ರತಿಷ್ಠಾಪಿಸುವ ಉದ್ದೇಶದಿಂದ ಪರಮ ಪೂಜ್ಯಶ್ರೀಗಳನ್ನು ಹಾಗೂ ಸಮಾಜ ಬಾಂಧವರನ್ನು ಕರೆದು ಅವರೊಂದಿಗೆ ಚರ್ಚಿಸಿ ಸಾರ್ವಜನಿಕವಾಗಿ ಉತ್ತಮವಾದ ಭವ್ಯ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ನಾವು ಸದಾಸಿದ್ದರಿದ್ದು, ನಮ್ಮ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ 10 ಲಕ್ಷ ರೂ. ಗಳ ಚಕ್ ವನ್ನು ಮಹಾರಾಜರಿಗೆ ನೀಡಲಾಗಿದ್ದು, ಮಹಾರಾಜರು ಹಾಗೂ ಸಮಾಜದ ಬಾಂಧವರು ಸೂಚಿಸಿದ ಸ್ಥಳದಲ್ಲಿ ಸುಂದರವಾದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅವರ ಮೂರ್ತಿಯನ್ನು ನಾವು ನೀವೆಲ್ಲರೂ ಸೇರಿ ಪ್ರತಿಷ್ಠಾಪಿಸೋಣ ಅದೇ ರೀತಿ ನಮ್ಮ ಹಾಲುಮತ ಸಮಾಜದ ಬಾಂಧವರಿಗೆ ಸಭೆ – ಸಮಾರಂಭವನ್ನು ಮಾಡಲು ಅನುಕೂಲವಾಗಲಿ ಎಂದು ನಾವು ಈಗಾಗಲೇ ನಮ್ಮ ರಾಜ್ಯ ಸರ್ಕಾರದ ವತಿಯಿಂದ ಸುಮಾರು 3 ಕೋಟಿ ರೂ.ವೆಚ್ಚದ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಲು ಅನುದಾನವನ್ನು ಮಂಜೂರು ಗೊಳಿಸಿದ್ದು, ಸಮಾಜದ ಬಾಂಧವರು ಹಾಗೂ ಮಹಾರಾಜರು ಒಂದು ಒಳ್ಳೆಯ ಸ್ಥಳವನ್ನು ಆಯ್ಕೆ ಮಾಡಿ, ಶೀಘ್ರದಲ್ಲಿ ಈ ನಮ್ಮ ಸಮಾಜದ ಬಾಂಧವರಿಗೆ ಸಮುದಾಯ ಭವನವನ್ನು ನಿರ್ಮಿಸಿ ಅನುಕೂಲ ಕಲ್ಪಿಸಲಾಗುವುದೆಂದರು.

ಈ ಸಮಯದಲ್ಲಿ ಕವಲಗುಡ್ಡ ಸಿದ್ದಸಿರಿ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಮಾತನಾಡಿ, ಕಾಗವಾಡ ಮತಕ್ಷೇತ್ರದ ಶಾಸಕರು ಈಗಾಗಲೇ ಕಾಗವಾಡ ಮತಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ, ಈ ಭಾಗದ ಅಭಿವೃದ್ಧಿಯ ಹರಿಕಾರರು ಬರದ ನಾಡಿನ ಭಗೀರಥ ರಾಗಿದ್ದಾರೆ ಎಂದರು. ಶಾಸಕರು ಎಲ್ಲ ಸಮಾಜದವರ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸುತ್ತಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸುವ ಗುರಿ ಹೊಂದಿದ್ದು, ನಮ್ಮನ್ನೂ ಹಾಗೂ ನಮ್ಮ ಸಮಾಜದ ಬಾಂಧವರನ್ನು ಕರೆದು ನೀವೆಲ್ಲರೂ ಒಟ್ಟಿಗೆ ಸೇರಿ ನೀವು ಸೂಚಿಸಿದ ಸ್ಥಳದಲ್ಲಿ ಭವ್ಯವಾದ ಮೂರ್ತಿಯನ್ನು ಪ್ರತಿಷ್ಠಾಪಿಸೋಣ ಎಂದು ಹೇಳಿ ಶಾಸಕರು ಅವರ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ 10 ಲಕ್ಷ ರೂ. ಗಳ ಚಕ್ ವನ್ನು ವಿತರಿಸಿದ್ದು ಶಾಸಕರಿಗೆ ನಮ್ಮ ಸಮಾಜದ ವತಿಯಿಂದ ಅಭಿನಂದನೆ ಸಲ್ಲಿಸೋಣ ಎಂದರು. ಅದೇ ರೀತಿ ಶಾಸಕರು ನಮ್ಮ ಸಮಾಜದ ಬಾಂಧವರಿಗೆ ಸಭೆ – ಸಮಾರಂಭಗಳನ್ನು ಮಾಡಲು ಅನುಕೂಲವಾಗಲಿ ಎಂದು ಈಗಾಗಲೇ ರಾಜ್ಯ ಸರ್ಕಾರದ ಕಡೆಯಿಂದ ಸುಮಾರು 3 ಕೋಟಿ ರೂ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಿಸಲು, ಅನುದಾನವನ್ನು ಮಂಜೂರು ಗೊಳಿಸಿದ್ದು, ಸಮಾಜದ ಬಾಂಧವರು ಸೂಚಿಸಿದ ಸೂಕ್ತಸ್ಥಳದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದೆಂದು ಹೇಳಿದ್ದು ಶಾಸಕರಿಗೆ ನಮ್ಮ ಸಮಾಜದ ಮೇಲಿನ ಪ್ರೀತಿಗೆ ಅಭಿನಂದನೆಗಳನ್ನು ಸಲ್ಲಿಸಿ, ನಾವೆಲ್ಲರೂ ಅವರ ಈ ಸಮಾಜ ಸೇವೆಗೆ ಬೆಂಬಲವಾಗಿರೋಣ ಎಂದರು.

ಈ ಸಮಯದಲ್ಲಿ ಹಾಲುಮತ ಸಮಾಜದ ಬಾಂಧವರು ಮಾತನಾಡಿ ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಕ್ಷೇತ್ರದಲ್ಲಿ ಎಲ್ಲ ಸಮಾಜದ ಬಾಂಧವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ನಮ್ಮ ಕುರುಬರ ಸಮಾಜದ ಬಾಂಧವರಿಗೆ ಕೊಡುಗೆಯನ್ನು ನೀಡುವ ಉದ್ದೇಶದಿಂದ ನಮ್ಮ ಸಮಾಜದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸುವ ಉದ್ದೇಶದಿಂದ ನಮ್ಮ ಸಮಾಜದ ಸ್ವಾಮೀಜಿ ಹಾಗೂ ನಮ್ಮ ಸಮಾಜದ ಬಾಂಧವರೆಲ್ಲರನ್ನು ಕರೆದು ಅವರೊಂದಿಗೆ ಚರ್ಚಿಸಿ, ಸಮಾಜದ ಬಾಂಧವರೆಲ್ಲರೂ ಸೇರಿ ಸೂಚಿಸಿದ ಸ್ಥಳದಲ್ಲಿ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸದಾ ಸಿದ್ದರಿದ್ದು, ಶಾಸಕರು ಅವರ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ 10 ಲಕ್ಷ ರೂ. ಗಳ ಚಕ್ ವನ್ನು ಮಹಾರಾಜರಿಗೆ ನೀಡಿದ್ದು, ಅದೇ ರೀತಿ ನಮ್ಮ ಸಮಾಜದ ಬಾಂಧವರಿಗೆ ಸಮಾರಂಭಗಳನ್ನು ಮಾಡಲು ಅನುಕೂಲವಾಗಲಿ ಎಂದು ಸಮುದಾಯ ಭವನವನ್ನು ನಿರ್ಮಿಸಲು ಸುಮಾರು 3 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಮಂಜೂರು ಗೊಳಿಸಿದ್ದೇನೆ ಎಂದು ಶಾಸಕರು ಹೇಳಿದ್ದು ಸಮಸ್ತ ನಮ್ಮ ಕುರುಬರ ಸಮಾಜದ ಬಾಂಧವರ ವತಿಯಿಂದ ಶಾಸಕರಿಗೆ ಹಾಗೂ ಯುವ ನಾಯಕರಿಗೆ ನಾವೆಲ್ಲರೂ ಅಭಿನಂದನೆಗಳನ್ನು ಸಲ್ಲಿಸಿ, ನಿಮ್ಮ ಈ ಸಮಾಜ ಸೇವೆಗೆ ನಾವೆಲ್ಲರೂ ನಿಮ್ಮೊಂದಿಗೆ ಸದಾ ಬೆಂಬಲವಾಗಿದ್ದೇವೆ ಎಂದರು.

ಈ ಸಮಯದಲ್ಲಿ ಕಾಗವಾಡ ಮತಕ್ಷೇತ್ರದ ಯುವ ನಾಯಕರಾದ ಶ್ರೀನಿವಾಸ ಶ್ರೀಮಂತ ಪಾಟೀಲ್ ಅವರು ಹಾಗೂ ಕ್ಷೇತ್ರದ ಹಲವು ಗ್ರಾಮಗಳಿಂದ ಆಗಮಿಸಿದ ಸಮಾಜ ಮುಖಂಡರು ಹಾಗೂ ಬಾಂಧವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!