ಆಧುನಿಕ ಯುಗದಲ್ಲಿ ಸಾರಾಯಿ ವ್ಯಸನಒಂದು ರೀತಿಯ ಫ್ಯಾಷನ್ ಆಗಿ ಪರಿಣಮಿಸಿದೆ:ಕಿರಣ.ಎಸ್

Share the Post Now

ವರದಿ:ಸಂಗಮೇಶ ಹಿರೇಮಠ

ಮುಗಳಖೋಡ: ಆಧುನಿಕ ಯುಗದಲ್ಲಿ ಸಾರಾಯಿ ವ್ಯಸನ ಒಂದು ರೀತಿಯ ಫ್ಯಾಷನ್ ಆಗಿ ಪರಿಣಮಿಸಿದೆ. ಇದರಿಂದ ಅನೇಕ ಕುಟುಂಬಗಳು ನಾಶವಾಗಿ ಹೋಗುತ್ತಿವೆ. ಅಂತಹ ಕುಟುಂಬಗಳ ಒಳತಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನ ಜಾಗೃತಿ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಮಧ್ಯವ್ಯರ್ಜನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರೀ ) ಹಾರೂಗೇರಿ ಸಂಸ್ಥೆಯ ಯೋಜನಾಧಿಕಾರಿ ಕಿರಣ ಎಸ್ ಹೇಳಿದರು.
ಜನೆವರಿ 4 ರಿಂದ 11 ರ ವರೆಗೆ ಮಧ್ಯ ವ್ಯರ್ಜನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಹಾರೋಗೇರಿ ಪಟ್ಟಣದ ಯುವ ಮುಖಂಡ ಯಲ್ಲಪ್ಪ ಶಿಂಗೆ ಮಾತನಾಡಿ, ಹಲವಾರು ಕುಟುಂಬಗಳು ಈ ಮಧ್ಯ ವ್ಯಸನವೆಂಬ ಪಿಡುಗಿನಿಂದ ಹೊರಬರದೆ ಪ್ರತಿನಿತ್ಯ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆಯನ್ನು ಅನುಭವಿಸುತ್ತಿವೆ. ಪ್ರತಿನಿತ್ಯ ಒಬ್ಬ ವ್ಯಕ್ತಿ ತಾನು ದುಡಿಮೆ ಮಾಡಿದ ಅರ್ಧದಷ್ಟು ಹಣವನ್ನು ತನ್ನ ಮಧ್ಯ ವ್ಯಸನಕ್ಕೆ ಖರ್ಚು ಮಾಡುತ್ತಾನೆ. ಇದರಿಂದ ಹಲವಾರು ಕುಟುಂಬಗಳು ಇಂದು ಬೀದಿಗೆ ಬಂದು ನಿಲ್ಲುವಂತಾಗಿದೆ. ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು, ಸಮಾಜದ ಒಳಿತಿಗಾಗಿ ಹಮ್ಮಿಕೊಳ್ಳುತ್ತಾ ಬರುತ್ತಿರುವ ಮಧ್ಯವ್ಯರ್ಜನ ಶಿಬಿರಗಳು ಇಂದು ಹಲವಾರು ಕುಟುಂಬಗಳಿಗೆ ಹೊಸಬೆಳಕಿನ ನಂದಾದೀಪವಾಗಿ ಬೆಳಗುತ್ತಿವೆ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರೀ ) ಹಾರೂಗೇರಿ ಸಂಸ್ಥೆಯ ಯೋಜನಾಧಿಕಾರಿ ಕಿರಣ ಎಸ್, ಪುರಸಭೆ ಸದಸ್ಯ ಹಾಲಪ್ಪ ಶೇಗುಣಸಿ, ಅನ್ನಪೂರ್ಣ ಎರಡತ್ತಿ, ಸಿದ್ದಯ್ಯ ಹಿರೇಮಠ, ಮುಗಳಖೋಡ ಸಿಎಸ್‌ಸಿ ಸಿಬ್ಬಂದಿ ಮಹೇಶ ಪಾಟೀಲ ರಾಜಕೀಯ ಯುವ ಮುಖಂಡ ಯಲ್ಲಪ್ಪ ಶಿಂಗೆ, ಮಹಾಂತೇಶ ಕುರಾಡೆ, ಚೇತನ ನಡುವಿನಕೇರಿ, ಶಿಕ್ಷಕ ಬಿ ಎಲ್ ಘಂಟಿ, ಹನುಮಂತ ನಡಿವಿನಕೇರಿ, ವಿಜಯ ನಡುವಿನಕೇರಿ ಭಾಗವಹಿಸಿದ್ದರು. ಮಂಜುನಾಥ ಸೂರ್ಯವಂಶಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!