ಕೃಷ್ಣಾ ನದಿಯಲ್ಲಿ ಹರಿದ ಬರುವ ನೀರಿನ ಪ್ರಮಾಣ ಹೆಚ್ಚಿದ್ದು ನೆರೆಹಾವಳಿ ಬರುವ ಭೀತಿಯಿಂದ ಜಿಲ್ಲಾ ನೋಡಲು ಅಧಿಕಾರಿಗಳು ಕಾಗವಾಡ ತಹಶೀಲ್ದಾರರು ಸೇರಿ ವಿಶೇಷ ಸಭೆ ಮಹಾರಾಷ್ಟ್ರದ ಕೊಂಕಣ ಶ್ರೀನಿಯಲ್ಲಿ ಸುರಿತ್ತಿರುವ ಭಾರಿ ಮಳೆಯಿಂದ ಕೃಷ್ಣಾ ನದಿಯಲ್ಲಿ ಸುಮಾರು ಒಂದುವರೆ ಲಕ್ಷ ಕ್ಯೂ ಸೆಕ್ಸ್ ನೀರು ಹರಿದು ಬರುತ್ತಿದ್ದರಿಂದ ಉಗಾರ್-ಕುಡಚಿ ಮಧ್ಯದ ಸೇತುವೆ ಮಂಗಳವಾರ ಬೆಳಗಿನ ವರಿಗೆ ಜಲಾವೃತ್ತು ಗೊಳ್ಳುವ ಬೀದಿ ವೆತ್ತವಾಗುತ್ತಿದೆ. ಬೆಳಗಾವಿಯ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಹಾಗೂ ಕಾಗವಾಡ ತಾಲೂಕಿನ ನೋಡಲ್ ಅಧಿಕಾರಿಗಳಾದ ಬಸವರಾಜ ಕುರಿಹುಳ್ಳಿ, ಕಾಗವಾಡ ತಹಸಿಲ್ದಾರ್ ರಾಜೇಶ್ ಬುರ್ಲಿ ಪರಿಶೀಲನೆ ಮಾಡಿ ಸ್ಥಳೀಯ ಸಾರ್ವಜನಿಕರೊಂದಿಗೆ ಸಂದರ್ಶನ ಮಾಡಿ ಪ್ರವಾಹ ಬಗ್ಗೆ ಚರ್ಚೆ ಮಾಡಿದರು.
ಮಂಗಳವಾರ ಬೆಳಿಗ್ಗೆಯಿಂದ ಕಾಗವಾಡ ತಹಸಿಲ್ಲರ್ ರಾಜೇಶ್ ಬುರ್ಲಿ ಇವರು ಕೃಷ್ಣಾ ನದಿ ಪ್ರವಾದ ಮಾಹಿತಿ ಪಡೆದು ಭೇಟಿ ನೀಡಿ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು.
ಕಾಗವಾಡ ಪ್ರವಾಸಿ ಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಹಾಗೂ ಕಾಗವಾಡ ತಾಲೂಕಿನ ನೋಡಲ್ ಅಧಿಕಾರಿಗಳಾದ ಬಸವರಾಜ್ ಕುರಿಹುಳ್ಳಿ ಹಾಗೂ ತಹಸಿಲ್ದಾರ್ ರಾಜೇಶ್ ಬುರ್ಲಿ ಇವರು ತಾಲೂಕಿನ ಎಲ್ಲಾ ನೋಡಲ ಅಧಿಕಾರಿಗಳು, ಪಿಡಿಓ, ಗ್ರಾಮ ಲೆಕ್ಕಾಧಿಕಾರಿ, ಇವರೊಂದಿಗೆ ಸಭೆ ಸೇರಿ ನೆರೆಹಾವಳಿ ಹೇಗೆ ಎದುರಿಸಬಹುದು ಎಂಬದಕ್ಕೆ ಕುಲಂಕುಶವಾಗಿ ಚರ್ಚೆ ಮಾಡೋದೊಂದಿಗೆ ಅನೇಕ ಸೂಚನೆಗಳು ನೀಡಿದರು,
ಕಾಗವಾಡ ತಾಲೂಕಿನ ಗಂಗಾವತಿ, ಜುಗುಳ, ಶಹಾಪುರ್, ಮುಳವಾಡ, ಕುಸನಾಳ, ಕೃಷ್ಣಾ- ಕಿತ್ತೂರ್, ಬನಿಜವಾಡ, ಕಾತ್ರಾಳ ಈ ಎಂಟು ಗ್ರಾಮಗಳಲ್ಲಿ ಎಲ್ಲ ನೋಡಲು ಅಧಿಕಾರಿಗಳ ಸಭೆ ಎಲ್ಲಿ ಪಾಲ್ಗೊಂಡಿದ್ದರು, ನೆರೆ ಹಾವಳಿ ಬಂದಲ್ಲಿ ಜನ-ಜಾನುವಾರಗಳು ಸ್ಥಳಾಂತರ ಗೊಳಿಸಿ ಕಾಳಜಿ ಕೇಂದ್ರ ಪ್ರಾರಂಭಿಸಿ ಎಲ್ಲ ಸೇವೆ ನೀಡುವ ಬಗ್ಗೆ ಮಾಹಿತಿ ನೀಡಿದರು,
ಕೃಷ್ಣಾ ನದಿಯಲ್ಲಿ ಸದ್ಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೋಲಿಸಿದರೆ, ಯಾವುದೇ ಭೀತಿ ಇಲ್ಲ ಆದರೆ ಸುಮಾರು 2 ಲಕ್ಷಕ್ಕೆ ಸೆಕ್ಸ್ ನೀರು ಹರಿಯಲು ಪ್ರಾರಂಭಿಸಿದಾಗ ನೆರೆಹಾವಳಿ ಸಮಸ್ಯೆ ಬರಬಹುದು, ಆದರೂ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಸಿಲ್ದಾರ್ ರಾಜೇಶ್ ಬುರ್ಲಿ ಹೇಳಿದರು.
ಕಾಗವಾಡ ತಾಲೂಕಿನ ನೋಡಲು ಅಧಿಕಾರಿಗಳು ಹಾಗೂ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಸವರಾಜ್ ಕುರಿಹುಳ್ಳಿ ಮಾತನಾಡಿ ಕಾಗವಾಡ ತಾಲೂಕಿನಲ್ಲಿ ಎಂಟು ಗ್ರಾಮ ಸಂಪೂರ್ಣ ಬಾಧಿತ, ಆರು ಗ್ರಾಮ ಭಾಗಶಾ ನೀರಿನ ಬಾದೆತ ವಾಗಲಿದೆ ಈ ಎಲ್ಲ ಗ್ರಾಮಗಳಿಗೆ ಮುನ್ನೆಚ್ಚರಿಕೆಯಾಗಿ ನೋಡಲ್ ಅಧಿಕಾರಿಗಳು ನೇಮಕಾತಿ ಮಾಡಲಾಗಿದ್ದು ಅವಶ್ಯಕತೆ ಇದ್ದಲ್ಲಿ ಗಂಜಿ ಕೇಂದ್ರಗಳು ಪ್ರಾರಂಭಿಸುವ ವ್ಯವಸ್ಥೆ ಮಾಡಲಾಗಿದೆ, ಸದ್ಯಕ್ಕೆ ಕೃಷ್ಣಾ ನದಿಯಲ್ಲಿ ಹರಿದು ಬರುವ ನೀರಿನ ಪ್ರಮಾಣ ಗಮನಿಸಿದರೆ ಯಾವುದೇ ಭಯ ಸದ್ಯಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೃಷ್ಣಾ ನದಿ ತೀರದ ಮೊಳವಾಳ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ನದಿಯಲ್ಲಿ ಬೋಟ್ ಮುಖಾಂತರ ನದಿಯಲ್ಲಿ ಸಂಚರಿಸಿ ನೀರಿನ ಪ್ರಮಾಣದ ಮಾಹಿತಿ ಪಡೆದರು, ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸ್ಥಳೀಯರ ಸಭೆ ಕರೆದು ಕುಂದು ಕೊರತೆಗಳು ಆಲಿಸಿದರು, ಈ ವೇಳೆ ಮೊಳವಾಡ ಗ್ರಾಮದ ಹಿರಿಯರಾದ ಅಶೋಕ್ ನಂದನಿ, ಶುಭಾಷ್ ಅಮಿತ್ ಪಾಟೀಲ್,ಅಥಣಿ, ಚಿದಾನಂದ ಅಥಣಿ, ಇನ್ನುಳಿದ ಗ್ರಾಮ ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.
ಕಾಗವಾಡದಲ್ಲಿ ಹಮ್ಮಿಕೊಂಡ ಅಧಿಕಾರಿಗಳ ಸಭೆಯಲ್ಲಿ ಕಾಗವಾಡ ಬಿಇಒ ಎಂ. ಆರ್. ಮುಂಜಿ, ಸಿ ಡಿ ಪಿ ಓ ಸಂಜೀವ್ ಕುಮಾರ್ ಸದಲಗೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಬಸವರಾಜ್ ಯಾದವಾಡ, ತಾಲೂಕ ಪಂಚಾಯತಿ ಅಧಿಕಾರಿ ಗೋಪಾಲ್ ಮಾಳಿ, ಜೀಪಂ ಅಭಿಯಂತರದ ಅಮರ್ ಮೇತ್ರಿ, ಉಪತಹಸಿಲ್ದಾರ್ ಅನ್ನಾಸಾಹೇಬ್ ಕೋರೆ, ಸೇರಿದಂತೆ ಇನ್ನುಳಿದ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.