ವರದಿ:ಸಚಿನ ಕಾಂಬ್ಳೆ
ಅಥಣಿ:ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಥಣಿ ಘಟಕದ ಸಹಯೋಗದಲ್ಲಿ ಡಿ.18 ರವಿವಾರದಂದು ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಮೇಲೆ ರಸಪ್ರಶ್ನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಈ ರಸಪ್ರಶ್ನೆ ಕಾರ್ಯಕ್ರಮವು ಪ್ರಾಥಮಿಕ,ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳ ಬುದ್ದಿಮಟ್ಟಕ್ಕೆ ತಕ್ಕಂತೆ ಪ್ರಶ್ನೆಗಳನ್ನು ತಯಾರಿಸಲಾಗಿದೆ.ಈ ರಸಪ್ರಶ್ನೆ ಕಾರ್ಯಕ್ರಮಕ್ಕೆ ಬಹುಮಾನಗಳನ್ನು ನೀಡಲಾಗುತ್ತದೆ.ಪ್ರಾಥಮೀಕ ವಿಭಾಗ- 1 ನೇ ರಿಂದ 7ನೇ ತರಗತಿಯವರೆಗೆ,ಪ್ರೌಢಶಾಲಾ ವಿಭಾಗ-8 ರಿಂದ 10ನೇ ತರಗತಿ ಮತ್ತು ಕಾಲೇಜು ವಿಭಾಗ-೧೧ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಭಾಗವಹಿಸಬಹುದು.
ಅದೇ ರೀತಿ ಪ್ರಾಥಮಿಕ ವಿಭಾಗದ ಪರೀಕ್ಷೆ ಸಮಯ ಬೆಳಿಗ್ಗೆ 10 :30 ರಿಂದ 11:30,ಪ್ರೌಢಶಾಲಾ ವಿಭಾಗದ ಪರೀಕ್ಷೆ ಮಧ್ಯಾಹ್ನ ೧೨:೩೦ ರಿಂದ ೦೧:೩೦,ಮತ್ತು ಕಾಲೇಜು ವಿಭಾಗದ ಪರೀಕ್ಷೆಯು ಮಧ್ಯಾಹ್ನ 3:೦೦ ರಿಂದ 4:3೦ ಸಮಯದಲ್ಲಿ ನಡೆಯಲಿವೆ.ಈ ಎಲ್ಲ ಪರೀಕ್ಷೆಗಳು ಎ.ಕೆ.ಹೈಸ್ಕೂಲ್ ಅಥಣಿಯಲ್ಲಿ ಜರುಗಲಿವೆ.
ಪರೀಕ್ಷೆಗೆ ಹೆಸರು ನೊಂದಾಯಿಸುವವರು ದಿನಾಂಕ 16-12-2022 ರೊಳಗಾಗಿ ಹೆಸರನ್ನ ನೊಂದಾಯಿಸಬೇಕು.ಹೆಸರು ನೊಂದಾಯಿಸಲು-9743967118,9740752123,9743738761,9964588558,7090304079,8748005119 ಈ ದೂರವಾಣಿಗೆ ಕರೆ ಮಾಡಿ ನೊಂದಾಯಿಸಿಕೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.