ಅವರು ಒಡೆಯುತ್ತಿದ್ದಾರೋ ಇಲ್ಲವೋ ನನಗಂತೂ ತಿಳಿದಿಲ್ಲ…ಕೆಡುಕು,ಸಿಡುಕುಗಳು ನಮ್ಮೊಳಗೆ ಇರುವಾಗ ದೂರುವದಾದರೂ ಯಾರನ್ನು ಬಿಡಿ…
ಶತ ಶತಮಾನದಿಂದ ನಮ್ಮ ಕಟ್ಟುವ ಪ್ರಯತ್ನಗಳನ್ನಷ್ಟೇ ಅಲ್ಲ ಭವಿಷ್ಯದ ಕನಸುಗಳನ್ನೂ ಕೊಲ್ಲುತ್ತಿದ್ದಾರೆ ಅವರು.
ನಾವು ಮೌನದಲ್ಲಿ
ಸಹಿಸುವದ ನೋಡಿ
ನಗುತ್ತಿದ್ದಾರೆ ಅವರು….
ಹೋರಾಟದಿಂದ ವಿಮುಖವಾಗುತ್ತಿವೆ ಹೊಸ ಮನಸುಗಳು
ಹುಡುಕಿದರೂ ಸಿಗುತ್ತಿಲ್ಲ ಸಮಾನ ಮನಸ್ಸುಗಳು..
ಹಿರಿಯರಿಗೆ ಗೌರವ ಕನಸಿನ ಮಾತಷ್ಟೇ ಬಿಡಿ
ಚಿಂತನೆಗಳ ಚಾವಡಿಯಲ್ಲಿ ಕಟ್ಟೆಗಳೇ ಖಾಲಿ ಈಗ
ಕಟ್ಟುವ ಮಾತನಾಡಿದವರಿಗೆ ವಯಸ್ಸಾಗಿದೆಯಂತೆ…
ಹೊಸಬರು ಬಂದರೂ ಹೋರಾಟಗಳು ದುಬಾರಿಯಾದ ಸಮಯವಿದು ಆರ್ಥಿಕ ಚೈತನ್ಯ ಮುಖಂಡರಿಗೂ ಇಲ್ಲ ಬಿಡಿ
ಗುಡುಗುವ ಧ್ವನಿಗಳೂ ಉಡುಗಿ ಹೋಗುತ್ತಿವೆ ಈಗೀಗ.ಪಾರದರ್ಶಕ ಹೋರಾಟಗಳು ಮಸಣ ಸೇರುತ್ತಿರುವಾಗ…
ಅಂಹಿಸೆಯ ಜೊತೆಗೆ ಕಿಚ್ಚು ರೊಚ್ಚುಗಳು ಬೇಕಿರುವ ಕಾಲವಿದು
ಗೆಲ್ಲುವದಿಲ್ಲ ಹೋರಾಟಗಳು ನಮ ನಡುವೆ ಗುಂಪುಗಳೇ ಮೂರಾಗಿ ಒಡೆಯುತ್ತಿರುವಾಗ…
ತಂತ್ರ-ಕುತಂತ್ರ
ಅನುಮಾನ ಅಪಮಾನಗಳೇ ಈಗೀಗ
ನ್ಯಾಯದ ಪರ ಕೂಗನ್ನೆ ಎಲ್ಲರೂ
ದಮನಿಸುತ್ತಿರುವಾಗ..
ನಮಗೇಕೆ ಇಲ್ಲದ
ಉಸಾಬರಿ ಎಂದು ದೂರ
ಸರಿಯುವವರೇ
ಹೆಚ್ಚಾಗಿದ್ದಾರೆ ಬಿಡಿ.
ದುರ್ಬೀನು ಹಚ್ಚಿ ಹುಡುಕಿದರೂ
ಪ್ರಾಮಾಣಿಕರು ಸಿಗದ ಕಾಲವಿದು.
ಕೊನೆಯ ಮಾತೊಂದೇ ನಿಮ್ಮ ಹೋರಾಟಕ್ಕೆ ಮತ್ಯಾರೋ ಧ್ವನಿಯಾಗಿತ್ತಾರೆಂದು ಕಾಯುತ್ತ ಕೂಡಬೇಡಿ ಸಾಧ್ಯವಾದರೆ ನಿಮ್ಮ ಸಮಸ್ಯೆಗಳಿಗೆ ನೀವೇ ಧ್ವನಿಯಾಗಿಬಿಡಿ..