ನೂತನ ಸಭಾಪತಿಗಳಾದ ಹೊರಟ್ಟಿಯವರಿಗೆ ಸನ್ಮಾನ

Share the Post Now


ಕರ್ನಾಟಕ ವಿಧಾನ ಪರಿಷತ್ ಗೆ ಮೂರನೇ ಬಾರಿ ಸಭಾಪತಿಗಳಾಗಿ ಅವಿರೋಧ ಆಯ್ಕೆಯಾದ ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿಯವರಿಗೆ, ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ- ಕಾಲೇಜುಗಳ ಆಡಳಿತ ಮಂಡಳಿಗಳು ಮತ್ತು ನೌಕರರ ಒಕ್ಕೂಟದಿಂದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಡಿ.ಬಿ.ನದಾಫ ರವರು ಬೆಳಗಾವಿಯ ಸುವರ್ಣ ಸೌಧದಲ್ಲಿ ಹೃತ್ಪೂರ್ವಕವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಶ್ರೀ ಎಸ್.ಎಸ್. ಮಠದ ಹಾಗೂ ಶ್ರೀ ಎಂ.ಎ. ಕೋರಿಶೆಟ್ಟಿ, ಸಲೀಮ ಕಿತ್ತೂರ ಹಾಗೂ ಮಾರುತಿ ಅಜ್ಜಾನಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!