ವರದಿ:ಸಚಿನ ಕಾಂಬ್ಳೆ.
ಅಥಣಿ:ಗ್ರಾಮಕ್ಕೆ ಅವಶ್ಯವಾಗಿ ಬೇಕಾಗಿದ್ದ ರಸ್ತೆ ಕಳೆದ 20 ವರ್ಷಗಳಿಂದ ಅಭಿವೃದ್ದಿಯಾಗಿಲ್ಲ, ರಸ್ತೆ ನಿರ್ಮಾಣಕ್ಕಾಗಿ ಶಾಸಕರು ಎರಡೂ ಸಲ ಕಾಮಗಾರಿ ಪೂಜೆ ಮಾಡಿದರೂ ನಿರ್ಮಾಣವಾಗಿಲ್ಲ, ಶೀಘ್ರ ರಸ್ತೆ ನಿರ್ಮಿಸಿ ಎಂದು ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮಸ್ಥರು ರಸ್ತೆಯ ಮೇಲೆ ಚಹಾ ಮಾಡಿ ಕುಡಿದು ಆಕ್ರೋಶ ಹೊರಹಾಕಿದರು.ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದಲ್ಲಿ ಮಹಿಷವಾಡಗಿಯಿಂದ ಝಿರೋ ಪಾಯಿಂಟ್ ಹಾಗೂ ಮಹಿಷವಾಡಗಿಯಿಂದ ಸವದಿ ಗ್ರಾಮದವರೆಗೆ ಸುಮಾರು 5 ಕಿ.ಮೀ ರಸ್ತೆ ನಿರ್ಮಾಣಕ್ಕಾಗಿ ಮಹಿಷವಾಡಗಿ ಗ್ರಾಮಸ್ಥರು ಹದಗೆಟ್ಟ ರಸ್ತೆ ಮೇಲೆ ಚಹಾ ಮಾಡಿ ಎಲ್ಲರಿಗೂ ಹಂಚಿ, ಹದಗೆಟ್ಟ ಶಾಸಕರು ಕುಲಗೆಟ್ಟ ಸರಕಾರ ಎಂದು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಕಾಂಗ್ರೇಸ್ ಮುಖಂಡ ಗಜಾನನ ಮಂಗಸೂಳಿ ಅವರು 20 ವರ್ಷಗಳಿಂದ ಈ ಗ್ರಾಮಕ್ಕೆ ರಸ್ತೆ ನಿರ್ಮಾಣವಾಗಿಲ್ಲ ಎಂದರೆ ಶಾಸಕರು ಏನು ಮಾಡುತ್ತಿದ್ದಾರೆ? ಇದು ಅವರಿಗೆ ನಾಚಿಕೆಯಾಗುವುದಿಲ್ಲವೇ, ಶಾಸಕರಾಗಿ ಆಯ್ಕೆಯಾದ ನಂತರ ಕುಮಠಳ್ಳಿ ಅವರು ಈ ಗ್ರಾಮಕ್ಕೆ ಒಂದೇ ಬಾರಿ ಆಗಮಿಸಿದ್ದು ದುರದೃಷ್ಠಕರ, ಶಾಸಕರೇ ಅಷ್ಟು ಕೋಟಿ ಇಷ್ಟು ಕೋಟಿ ಅನುದಾನ ತಂದೇ ಎಂದು ಹೇಳುವುದನ್ನು ಬಿಟ್ಟು ರಸ್ತೆ ನಿರ್ಮಾಣ ಮಾಡಿ ಎಂದು ಆಗ್ರಹಿಸಿದರು.
ಅನಂತರ ಗ್ರಾಮಸ್ಥರಾದ ಅಶೋಕ ಮುಗ್ಗನ್ನವರ ಅವರು ಮಾತನಾಡಿ ,ಪ್ರವಾಹ ಬಂದಾಗ ಗ್ರಾಮದಿಂದ ಹೊರ ಹೋಗಲು ತೀರಾ ಅತ್ಯವಶ್ಯಕವಾದ ರಸ್ತೆ ನಿರ್ಮಾಣ ಆಗದೇ ಇರುವುದರಿಂದ ಎಲ್ಲ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಸತ್ಯಪ್ಪಾ ಬಾಗ್ಯನ್ನವರ,ಶ್ರೀಕಾಂತ ಪುಜಾರಿ ,ಶಿವು ಗುಡಾಪುರ,ಸುನೀಲ ಸಂಕ,ರೇಖಾ ಪಾಟೀಲ,ಮಹಾದೇವಿ ಹೋಳಿಕಟ್ಟಿ, ಅನಿಲ್ ನಂದಗಾಂವ, ಸಾಗರ ಮುಗ್ಗನ್ನವರ, ಸುರೇಂದ್ರ ಸಿದ್ದವ್ವಗೋಳ, ನೇಮಿನಾಥ ನಂದಗಾಂವ, ತಿಪ್ಪಣ್ಣ ನಂದಗಾಂವ, ಮಹಾವೀರ ಅಜ್ಜಪ್ಪಗೋಳ, ವಿಜಯ ತೇರದಾಳ ಇದ್ದರು.