ಹಳ್ಳ ಹಿಡಿದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಗ್ರಾಮಕ್ಕೆ ಬಾರದ ಅಧಿಕಾರಿಗಳು ಗ್ರಾಮಸ್ಥರ ಆಕ್ರೋಶ

Share the Post Now

ವರದಿ:ಸಚಿನ ಕಾಂಬ್ಳೆ ಕಾಗವಾಡ

ಕಾಗವಾಡ: ರಾಜ್ಯದಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಉತ್ತಮವಾದ ಕಾರ್ಯಕ್ರಮವಾದ ಜಿಲ್ಲಾಧಿಕಾರಿ ನಡೆ ಹಳಿ ಕಡೆ ಕಾರ್ಯಕ್ರಮವನ್ನು ತಿಂಗಳ ಮೂರನೇ ಶನಿವಾರದಂದು ಎಲ್ಲ ಅಧಿಕಾರಿಗಳು ಒಂದು ಗ್ರಾಮದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿಲಾಗುತ್ತಿತ್ತು.ಆದರೆ ಇತ್ತೀಚಿಗೆ ಆ ಯೋಜನೆ ಹೆಸರಿಗೆ ಮಾತ್ರ ಸೀಮಿತವಾಗಿದೆ ಎಂದು ಭಾಸವಾಗುತ್ತಿದೆ.ಈ ಕಾರ್ಯಕ್ರಮ ಇತ್ತೀಚಿನ ಸಹಿಗೆ ಮಾತ್ರ ಸೀಮಿತವಾದ ಕಾರ್ಯಕ್ರಮವಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಅನೇಕ ಕಡೆಗಳಲ್ಲಿ ಮುಖ್ಯ ಅಧಿಕಾರಿಗಳು ಇರದೇ ತಮ್ಮ ಸಿಬ್ಬಂದಿಗಳನ್ನ ಕಳುಹಿಸಿ ಅಹವಾಲು ಸ್ವೀಕರಿಸುವ ಪದ್ದತಿ ರೂಢಿಯಲ್ಲಿ ಚಾಲ್ತಿಗೆ ಬರುತ್ತಿದೆ.ಜನರ ಸಮಸ್ಯೆ ಆಲಿಸಲು ಮುಖ್ಯ ಜವಾಬ್ದಾರಿ ತಾಲ್ಲೂಕಾ ದಂಡಾಧಿಕಾರಿಗಳು ಹೊಣೆ ಹೊರಬೇಕಾಗುತ್ತದೆ ಅನೇಕ ಸಲ ಅವರ ಗೈರ ಹಾಜರಿಯಲ್ಲಿ ಕಾರ್ಯಕ್ರಮಗಳು ಜರುಗಿದ್ದುಂಟು ಅವರಷ್ಟೇ ಅಲ್ಲದೇ ವಿವಿಧ ಇಲಾಖೆಗಳ ಅಧಿಕಾರಿಗಳು ಸಹ ಇದೆ ವರ್ತನೆ ತೋರುತ್ತಿರುವದು ಇತ್ತೀಚಿಗೆ ಗಮನಕ್ಕೆ ಬರುತ್ತಿದೆ.

ಇವತ್ತು ಕಾಗವಾಡ ತಾಲೂಕಿನ ಮಂಗಾವತಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಸರದಿಯಾಗುತ್ತು ಆದರೆ ಮಂಗಾವತಿ ಗ್ರಾಮದ ಜನರ ಸಮಸ್ಯೆಗಳು ಬಹಳ ಗಂಭೀರ ಸಮಸ್ಯೆಗಳಿದ್ದು ಅಲ್ಲಿ ದಂಡಾಧಿಕಾರಿ,ವಿವಿಧ ಇಲಾಖೆಯ ಮುಖ್ಯ ಅಧಿಕಾರಿಗಳು ಬರದೇ ಇದ್ದದರಿಂದ ಗ್ರಾಮಸ್ಥರು ಆಕ್ರೋಶಗೊಂಡು ನಮ್ಮ ಸಮಸ್ಯೆಯನ್ನ ಕೇಳಬೇಕಾದ ಹಿರಿಯ ಅಧಿಕಾರಿಗಳೇ ಬಂದಿಲ್ಲ ಕೇವಲ ಸಿಬ್ಬಂದಿಗಳು ಮಾತ್ರ ಆಗಮಿಸಿದ್ದೀರಿ ಹೀಗಾಗಿ ನಮ್ಮ ಗ್ರಾಮಕ್ಕೆ ಎಲ್ಲ ಇಲಾಖೆಯ ಮುಖ್ಯ ಅಧಿಕಾರಿಗಳು ಬರುವವರೆಗೂ ಈ ಕಾರ್ಯಕ್ರಮ ರದ್ದು ಮಾಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಎಲ್ಲ ಗ್ರಾಮಸ್ಥರು ಸೇರಿ ಸಹಿ ಮಾಡುವ ಮೂಲಕ ಕಾರ್ಯಕ್ರಮ ರದ್ದು ಪಡಿಸಬೇಕೆಂದು ಮನವಿ ಅರ್ಪಿಸಿದರು.

ಮಂಗಾವತಿಯಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಯಾವುದೇ ಅರ್ಜಿ ಬರದೇ ಇದ್ದುದರಿಂದ ಯಶಸ್ವಿಯಾಗಲಿಲ್ಲ ಎಂಬುದು ಕಂಡು ಬಂತು.ಇನ್ನಾದರೂ ಜನರ ಸಮಸ್ಯೆ ಅರಿಯಲು ಎಲ್ಲ ಅಧಿಕಾರಿಗಳು ಕಾರ್ಯಕ್ರಮಕ್ಕೆ ಭಾಗವಹಿಸಿ ಜನರ ಅಹವಾಲು ಸ್ವೀಕರಿಸಿ ನ್ಯಾಯ ಕೊಡಿಸುತ್ತಾರಾ ಎಂದು ಕಾಯ್ದು ನೋಡಬೇಕಿದೆ‌.

Leave a Comment

Your email address will not be published. Required fields are marked *

error: Content is protected !!