ಭಟ್ಕಳ : ಭಟ್ಕಳದ ಮುಟ್ಟಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕೆಂಪು ಮಣ್ಣನ್ನು ಸಾಗಾಟಮಾಡುತ್ತಿದ್ದ ವಾಹನವನ್ನು ಸಾರ್ವಜನಿಕರ ಮಾಹಿತಿ ಆದರದ ಮೇಲೆ ತಹಶಿಲ್ದಾರ ಸುಮಂತ ಬಿಇ ಇವರು ದಾಳಿ ನಡೆಸಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಮಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಅನೇಕದಿನಗಳಿಂದ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಕೆಂಪು ಕಲ್ಲು ಹಾಗೂ ಮಣ್ಣನ್ನು ಸಾಗಾಟ ಮಾಡುತ್ತಿದ್ದು , ಸದ್ರಿ ವಾಹನಗಳು ಶಾಲೆಗೆ ಸಾಗುವ ಮಕ್ಕಳ ಬಗ್ಗೆ ಕಾಳಜಿ ತೊರದೆ ಅಜಾಗುರಕತೆಯಿಂದ ವಾಹನ ಚಲಾಯಿಸುವ ಬಗ್ಗೆ ತಲೂಕಾಡತಳಿಕ್ಕೆ ದೂರು ಬರುತ್ತಿದ್ದ ಹಿನ್ನೆಲೆಯಲ್ಲಿ ಇಂದು ತಹಶೀಲ್ದಾರರು ತಮ್ಮಸಿಂಬದಿಗಳೊಂದಿಗೆ ಆಗಮಿಸಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ ಮತ್ತು ಈ ಸಂಭಂದ ವಾಹನವನ್ನು ಗ್ರಾಮಿಣ ಪೋಲಿಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ವರದಿ ರವಿ ಬಿ ಕಾಂಬಳೆ