*ಅಖಿಲ ಕರ್ನಾಟಕ ಮಾಳಿ / ಮಾಲಗಾರ ಸಮಾಜದ ರಾಜ್ಯಮಟ್ಟದ ದ್ವಿತೀಯ ಬೃಹತ್ ಸಮಾವೇಶದ ಯಶಸ್ವಿಗೆ 8 ಲಕ್ಷ ರೂಪಾಯಿ ದೇಣಿಗೆ ನೀಡಿದ ಶಾಸಕ ಶ್ರೀಮಂತ ಪಾಟೀಲ್

Share the Post Now

ವರದಿ:ಸಚಿನ ಕಾಂಬ್ಳೆ ಕಾಗವಾಡ

ಕಾಗವಾಡ:ಮುಗಳಖೋಡದಲ್ಲಿ ದಿನಾಂಕ -26/12/2022 ರಂದು ನಡೆಯಲಿರುವ ಅಖಿಲ ಕರ್ನಾಟಕ ಮಾಳಿ / ಮಾಲಗಾರ ಸಮಾಜದ ರಾಜ್ಯಮಟ್ಟದ ದ್ವಿತೀಯ ಬೃಹತ್ ಸಮಾವೇಶವು ನಡೆಯಲಿದ್ದು, ಈ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು, ಸಚಿವರು, ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದು, ಈ ಸಮಾರಂಭಕ್ಕೆ ನಮ್ಮ ಕ್ಷೇತ್ರದಿಂದ ಮಾಳಿ / ಮಾಲಗಾರ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಆದುದರಿಂದ ಈ ಸಮಾಜದ ಬಾಂಧವರು ಕಾಗವಾಡ ಮತಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀಮಂತ ಪಾಟೀಲ ಅವರನ್ನು ಭೇಟಿಯಾಗಿ ಈ ಸಮಾರಂಭಕ್ಕೆ ಆಮಂತ್ರಣ ನೀಡಿದ್ದಾಗ ಶಾಸಕರು ಸ್ವ ಇಚ್ಛೆಯಿಂದ ಈ ಸಮಾಜದ ಬಾಂಧವರ ಕಾರ್ಯಕ್ರಮಕ್ಕೆ ಆಗಮಿಸುತ್ತೇನೆ ಎಂದು ಹೇಳಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶಾಸಕರು ಅವರ ಶ್ರೀಮಂತ ಪಾಟೀಲ ಫೌಂಡೇಶನ ವತಿಯಿಂದ ಸುಮಾರು 8 ಲಕ್ಷ ರೂ. ಗಳ ಸಹಾಯಧನವನ್ನು ನೀಡಿ ನಾವು ಸದಾ ನಿಮ್ಮ ಸಮಾಜದ ಬಾಂಧವರೊಂದಿಗಿದ್ದೇವೆ. ನಾವು ನೀವೆಲ್ಲರೂ ಸೇರಿ ಈ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

ಈ ಸಮಯದಲ್ಲಿ ಮಾಳಿ ಹಾಗೂ ಮಾಲಗಾರ ಸಮಾಜದ ಬಾಂಧವರು, ಮಾತನಾಡಿ ನಮ್ಮ ಕಾಗವಾಡ ಮತಕ್ಷೇತ್ರದ ಶಾಸಕರನ್ನು ನಮ್ಮ ಸಮಾಜದ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದಾಗ, ಶಾಸಕರು ಸ್ವ ಇಚ್ಛೆಯಿಂದ ಈ ಬೃಹತ್ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿ, ಶಾಸಕರು ಈ ನಮ್ಮ ಸಮಾಜದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅವರ ಶ್ರೀಮಂತ ಪಾಟೀಲ್ ಫೌಂಡೇಶನ್ ವತಿಯಿಂದ ಸುಮಾರು 8 ಲಕ್ಷ ರೂಗಳ ಸಹಾಯಧವನ್ನು ನೀಡಿ, ನಾವು ನೀವು ಎಲ್ಲರೂ ಸೇರಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದ್ದು ಸಮಸ್ತ ನಮ್ಮ ಮಾಳಿ ಹಾಗೂ ಮಾಲಗಾರ ಸಮಾಜದ ಬಾಂಧವರು ಶಾಸಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಮಯದಲ್ಲಿ ಮಾಳಿ ಹಾಗೂ ಮಾಲಗಾರ ಸಮಾಜದ ಬಾಂಧವರು, ಸ್ಥಳೀಯ ಹಲವಾರು ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!