ವರದಿ:ಸಚಿನ ಕಾಂಬ್ಳೆ.
ಅಥಣಿ : ಅಥಣಿಯ ಹಿರಿಯ ಮುಖಂಡ ಎಸ್.ಕೆ .ಬುಟಾಳಿ ಅವರು ಕೊಡುಗೆಯಾಗಿ ನೀಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು
ಲೋಕಾರ್ಪಣೆಗೊಳಿಸಿದರು.
ಪಟ್ಟಣದ ವಿಜಯಪೂರ ರಸ್ತೆಗೆ ಹೊಂದಿಕೊಂಡ ಮೂರ್ತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿದ್ದರಾಮಯ್ಯನವರು, ರಾಯಣ್ಣನ ದೇಶಪ್ರೇಮ, ರಾಜನಿಷ್ಠೆಯನ್ನು ನಮ್ಮ ಯುವಜನತೆ ಮೈಗೂಡಿಕೊಳ್ಳಬೇಕು, ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಕೊಡುಗೆಯನ್ನಾಗಿ ನೀಡಿದ ಎಸ್ ಕೆ ಬುಟಾಳಿ ಅವರ ಕೊಡುಗೆ ಈ ನಾಡಿಗೆ ದೊಡ್ಡದು ಎಂದರು.
ಅವರು ಮುಂದೆ ಮಾತನಾಡುತ್ತಾ,ಮಹಾಜನ ವರದಿ ಪ್ರಕಾರ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಮಹಾರಾಷ್ಟ್ರಕ್ಕೆ ಒಂದಿಂಚೂ ಜಾಗ ಬಿಟ್ಟು ಕೊಡುವದಿಲ್ಲ. ಮಹಾಜನ ವರದಿಯೇ ಅಂತೀಮ ಸರ್ಕಾರ ಒಳ್ಳೆಯ ವಕೀಲರನ್ನ ನೇಮಿಸಿ ಮಹಾರಾಷ್ಟ್ರದ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ವಜಾಗೊಳ್ಳುವ ಹಾಗೆ ನೋಡಿಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದರು.ಅದೇ ರೀತಿ ಈ ಭಾಗದಲ್ಲಿ ರೈತರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಆದರೆ ಸರ್ಕಾರ ರೈತರಿಗೆ ಯಾವದೇ ಬೆಳೆ ಪರಿಹಾರ ನೀಡದೇ ಮೋಸ ಮಾಡುತ್ತಿದೆ ಅದಷ್ಡೇ ಅಲ್ಲದೇ ಕಬ್ಬು ಮತ್ತು ದ್ರಾಕ್ಷಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ.ಇದ್ಯಾವುದರ ಕಡೆಗೆ ಸರ್ಕಾರ ಗಮನ ನೀಡುತ್ತಿಲ್ಲ.ರೈತರ ಬೆಳೆಗಳಿಗೆ ನೀರು ಹಾಯಿಸಲು ಕೇವಲ ಮೂರು ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದೆ.ಅಲ್ಲದೇ ೨೦೧೯ ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡು ಸಂಪೂರ್ಣ ಮನೆಗಳು ಬಿದ್ದರೂ ಸಹ ಸಿ ಶ್ರೆಣಿಯಲ್ಲಿ ಹಾಕಿ ಕುಟುಂಬಗಳಿಗೆ ಅನ್ಯಾಯ ಮಾಡಲಾಗಿದೆ ಇದನ್ನ ನಾನು ನಾಳೆ ಅಧಿವೇಶನ ಸಂದರ್ಭದಲ್ಲಿ ಚರ್ಚೆಗೆ ತರುವದಾಗಿ ಹೇಳಿದರು.
ರಾಜು ಕಾಗೆ ಮಾತನಾಡಿ,ಈ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ .ರೈತರ ಪಂಪಸೆಟ್ ಗೆ ಕೇವಲ ಮೂರು ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದ್ದಾರೆ.ರೈತರು ಬೆಳೆದ ಬೆಳೆಗಳಿಗೆ ನೀರು ಹಾಯುತ್ತಿಲ್ಲ ಇದರಿಂದಾಗಿ ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತ ಪರಿಸ್ಥಿತಿ ಉಂಟಾಗಿದೆ.ಅದಷ್ಟೇ ಅಲ್ಲದೇ ಪ್ರವಾಹ ಪೀಡಿತ ಗ್ರಾಮಗಳಾದ ಜುಗುಳ,ಮಂಗಾವತಿ,ಶಹಾಪೂರ ಗ್ರಾಮಸ್ಥರು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ.ಅವರ ಸಮಸ್ಯೆ ಪರಿಹರಿಸಲು ಸರ್ಕಾರ ವಿಫಲವಾಗಿದೆ ಆ ಗ್ರಾಮಸ್ಥರ ಕಾಗವಾಡ ತಹಶಿಲ್ದಾರ ಕಛೇರಿ ಮುಂದೆ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ ಮತ್ತು ಬಸವೇಶ್ವರ ಏತ ನೀರಾವರಿ ಕಾಮಗಾರಿ ಪ್ರಾರಂಭವಾಗಿ ಐದು ವರ್ಷ ಕಳೆದರೂ ರೈತರಿಗೆ ನೀರು ಒದಗಿಸಿಲ್ಲ ಈ ಎಲ್ಲ ಸಮಸ್ಯೆಗಳನ್ನು ಈ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಗಿಸಬೇಕೆಂದು ಹೇಳಿದರು.
ಸತೀಶ ಜಾರಕಿಹೊಳಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ಅಥಣಿ ತಾಲೂಕಿನ ಬಹುದಿನಗಳ ಕನಸು ನನಸಾಗಿದೆ ಎಂದು ಭಾವಿಸಸುವೆ ಈ ಪ್ರತಿಮೆಯನ್ನು ನಮ್ಮ ನಾಯಕರು ಸಿದ್ದರಾಮಯ್ಯನವರ ಅಮೃತ ಹಸ್ತದಿಂದ ನೆರವೇರಿದ್ದು ಇನ್ನಷ್ಟು ಖುಷಿ ತಂದಿದೆ ಎಂದರು.
ಈ ವೇಳೆ ಚನ್ನಬಸವ ಮಹಾಸ್ವಾಮಿಗಳು, ಅಮರೇಶ್ವರ ಮಹಾಸ್ವಾಮಿಗಳು ,ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಕೆಪಿಸಿಸಿ ಪ್ರಚಾರ ಸಮೀತಿ ಅಧ್ಯಕ್ಷ ಎಂ ಬಿ. ಪಾಟೀಲ,ಮಾಜಿ ಸಚಿವ ವೀರಕುಮಾರ ಪಾಟೀಲ್,ಮಾಜಿ ಶಾಸಕ ರಾಜು ಕಾಗೆ,ರಾವಸಾಬ ಬೆವನೂರ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ,ದಿಗ್ವಿಜಯಪವಾರ ದೇಸಾಯಿ,ಮಹಾವೀರ ಮೋಹಿತೆ, ಮುಖಂಡ , ಬಸವರಾಜ ಬುಟಾಳಿ, ಓಂಪ್ರಕಾಶ ಪಾಟೀಲ್,ಉಮೇಶಗೌಡ ಪಾಟೀಲ್,ಚಿದಾನಂದ ಮುಕಣಿ,ನಿಶಾಂತ ದಳವಾಯಿ, ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದರು.