ವರದಿ:ಸಚಿನ ಕಾಂಬ್ಳೆ ಕಾಗವಾಡ
ಕಾಗವಾಡ ಪಟ್ಟಣದ ತಹಶಿಲ್ದಾರ ಕಛೇರಿಯ ಮುಂಬಾಗ ನೆರೆಹಾವಳಿಗೆ ತುತ್ತಾಗಿ ಮನೆ ಕಳೆದುಕೊಂಡಿರುವ ಶಹಪೂರ ಗ್ರಾಮಸ್ಥರು ನ್ಯಾಯ ದೊರಕಿಕೊಳ್ಳಲು ನಿನ್ನೆಯಿಂದ ನಿರಾಶ್ರಿತರು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ
ಪ್ರತಿಭಟನಾ ನಿರತ ಸ್ಥಳಕ್ಕೆ ಮಾಜಿ ಶಾಸಕ ರಾಜು ಕಾಗೆ ಅವರು ಇಂದು ಭೇಟಿ ನೀಡಿ ಸಂತ್ರಸ್ತರಿಗೆ ಒಂದಿಷ್ಟು ಭರವಸೆ ಮಾತುಗಳನ್ನಾಡಿದರು.ಅವರು ಮಾತನಾಡುತ್ತಾ, ೨೦೧೯ರ ಪ್ರಬಾಹದಲ್ಲಿ ಮನೆ ಕಳೆದುಕೊಂಡಿದ್ದರು ಆದರೆ ಸರ್ಕಾರ ಇವತ್ತಿನವರೆಗೂ ಅವರಿಗೆ ಸರಿಯಾದ ಪರಿಹಾರ ನೀಡಿಲ್ಲ ಇದು ಅಧಿಕಾರಿಗಳ ಎಡಟ್ಟಿನಿಂದಾಗಿ ಆದ ಕೆಲಸ ಅಂತ ಮೇಲ್ನೋಟಕ್ಕೆ ಕಂಡು ಬಂದಿದೆ.ಈ ಸಮಸ್ಯೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾತನಾಡುವಂತೆ ನಮ್ಮ ನಾಯಕರಾದ ಸಿದ್ದರಾಮಯ್ಯ ಸಾಹೇಬರಿಗೆ ಮನವರಿಕೆ ಮಾಡಿದ್ದೇನೆ ಇವತ್ತು ಮತ್ತೆ ಬೆಳಗಾವಿ ಹೋಗಿ ಮುಖ್ಯಮಂತ್ರಿಯವರನ್ನ ಭೇಟಿಯಾಗಿ ಈ ಬಗ್ಗೆ ಗಮನ ಸೆಳೆಯುತ್ತೇನೆ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ದೊರಯುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ವೇಳೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು ವಿಜಯ ಅಕಿವಾಟೆ,ಗ್ರಾಮ ಪಂಚಾಯತ ಸದಸ್ಯರಾದ ಉಮೇಶಗೌಡ ಪಾಟೀಲ್ ಸೇರಿದಂತೆ ಅನೇಕರು ಇದ್ದರು.