ವರದಿ:ಸಚಿನ ಕಾಂಬ್ಳೆ ಕಾಗವಾಡ
ಕಾಗವಾಡ : ಪಟ್ಟಣದ ಚೆನ್ನಮ್ಮಾ ಸರ್ಕಲ್ನಲ್ಲಿ ಕಾಗವಾಡ ತಾಲೂಕಾ ದಲಿತ ಸಮುದಾಯ ಆಯೋಜಿಸಿದ್ದ ಸಂವಿಧಾನ ಅಪ್ಪಿಕೊಳ್ಳಿ, ಮನುಸ್ಮೃತಿಗೆ ಕೊಳ್ಳಿ ಇಡಿ ಕಾರ್ಯಕ್ರಮ ರವಿವಾರ ದಿ. ೨೫ ರಂದು ಜರುಗಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಆದೇಶದಂತೆ ಕಾಗವಾಡ ತಾಲೂಕಿನ ಎಲ್ಲ ದಲಿತ ಸಂಘಟನೆಗಳು ಒಂದುಗೂಡಿ, ಕಾಗವಾಡ ಪಟ್ಟಣದ ಚೆನ್ನಮ್ಮಾ ಸರ್ಕಲ್ನಲ್ಲಿ ಮನುಸ್ಮೃತಿ ಗ್ರಂಥವನ್ನು ದಹಿಸಿದರು.
ಈ ಸಮಯದಲ್ಲಿ ದಲಿತ ಮುಖಂಡರಾದ ಸಂಜಯ ತಳವಳಕರ ಮಾತನಾಡಿ, ೧೯೨೭ ಡಿ. ೨೫ ರಂದು ಮಹಾರಾಷ್ಟ್ರದ ಕೊಲಾಬಾ ಜಿಲ್ಲೆಯ ಮಹಾಡ ನಗರದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರರು ಅಸಮಾನತೆಯ ಪ್ರತೀಕವಾದ ಮನುಸ್ಮೃತಿ ಗೃಂಥವನ್ನು ಸುಟ್ಟು, ಅಮಾನವೀಯ ಮೌಲ್ಯಗಳಿಗೆ ಇಂಡಿಯಾದಲ್ಲಿ ಜಾಗವಿರಬಾರದು ಎಂದು ಸಾರಿ ಹೇಳಿದ ದಿನ ಇದಾಗಿದೆ. ಡಾ. ಬಾಬಾಸಾಹೇಬ ಅಂಬೇಡ್ಕರರ ವೈಚಾರಿಕ ಶಕ್ತಿ, ಅದನ್ನು ಕಾರ್ಯರೂಪಕ್ಕೆ ತಂದ ಅವರ ಧೈರ್ಯ, ಕೆಚ್ಚೆದೆಯನ್ನು ನೆನಿಸಿಕೊಂಡರೇ ಹೆಮ್ಮೆ ಎನಿಸುತ್ತದೆ. ಇದೇ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರರು ಭಾರತದ ಎಲ್ಲ ಮಹಿಳೆಯರಿಗೆ ಸ್ಥಾನ ಮಾನ ನೀಡಿ, ಗೌರವಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.ಎಂದರಲ್ಲದೇ ಕಾಗವಾಡ ತಾಲೂಕಿನ ಎಲ್ಲ ದಲಿತ ಸಮುದಾಯವು ಮನುಸ್ಮೃತಿಯನ್ನು ವಿರೋಧಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಅನೇಕ ದಲಿತ ಮುಖಂಡರು ಮಾತನಾಡಿದರು. ನಂತರ ಚೆನ್ನಮ್ಮಾ ಸರ್ಕಲ್ನಲ್ಲಿ ಮಾನವ ಸರಪಳಿ ನಿರ್ಮಿಸಿ, ಅಂಬೇಡ್ಕರ್ ಅವರಿಗೆ ಜೈ ಘೋಷ ಮಾಡಿದರು.
ಈ ಸಮಯದಲ್ಲಿ ದಲಿತ ಮುಖಂಡರಾದ ಸಂಜಯ ತಳವಳಕರ,ಶ್ರೀಕಾಂತ ತಳವಾರ,ರವಿ ಕಾಂಬಳೆ,ಪ್ರಕಾಶ ದೊಂಡಾರೆ, ಕುಮಾರ ಬನಸೋಡ, ಸಚೀನ ಪೂಜಾರಿ, ಪ್ರಕಾಶ ಕಾಂಬಳೆ, ಬಾಳಾಸಾಬ ಕಾಂಬಳೆ, ಗೌತಮ ಕಾಂಬಳೆ, ಜಯಪಾಲ ಬಡಿಗೇರ, ಉದಯ ಖೋಡೆ, ವಿಶಾಲ ಧೊಂಡಾರೆ, ಅಮೀತ ದಿಕ್ಷಾಂತ, ಜನಾರ್ಧನ ಧೊಂಡಾರೆ, ರಾಹೂಲ ಕಾಂಬಳೆ, ಬಂಟಿ ಕಾಳೆ, ದೀಪಕ ಕಾಂಬಳೆ, ಪರವೀಣ ಚೌಹಾನ, ಬಾಳಕೃಷ್ಣ ಭಜಂತ್ರಿ ಮಹಾಂತೇಶ ಬನಸೋಡೆ,ಸೇರಿದಂತೆ ತಾಲೂಕಿನ ಎಲ್ಲ ದಲಿತ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.