ವರದಿ:ಸಚಿನ್ ಕಾಂಬ್ಳೆ. ಕಾಗವಾಡ
ಕಾಗವಾಡ : ಗಡಿಭಾಗದ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ ಹಾಗೂ ಲೋಕೋಪಯೋಗಿ ಇಲಾಖೆಯಡಿ ಇನ್ನುಳಿದ ರಸ್ತೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿ ನನಗೆ ಮಾಹಿತಿ ತಿಳಿಸಬೇಕೆಂದು ಶಾಸಕ ಶ್ರೀಮಂತ ಪಾಟೀಲ್ ಅಧಿಕಾರಿಗಳಿಗೆ ಆದೇಶ ಮಾಡಿದರು.
ಕೆಂಪವಾಡ ಸಕ್ಕರೆ ಕಾರ್ಖಾನೆಯ ತಮ್ಮ ಸ್ವಂತ ಕಛೇರಿಯಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯತ ಇಲಾಖೆಯ ರಸ್ತೆಗಳ ಮಾಹಿತಿಯನ್ನು ಪಡೆದುಕೊಂಡರು.ಕ್ಷೇತ್ರದಲ್ಲಿ ನಡೆದಿರುವ ರಸ್ತೆ ಕಾಮಗಾರಿಗಳು ಗುಣಮಟ್ಟದಾಗಬೇಕು ರಸ್ತೆ ಕಳಪೆ ಗುಣಮಟ್ಟ ಕಂಡುಬಂದರೆ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಂಡು ರಸ್ತೆ ಪುನರ್ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಶೇಷವಾಗಿ ಕರ್ನಾಟಕ-ಗಡಿ ಮಹಾರಾಷ್ಟ್ರ ಸಂಪರ್ಕ ರಸ್ತೆಯನ್ನು ಡಾಂಬರೀಕರಣ ಇಲ್ಲದೇ ಉಳಿಯಬಾರದು ಅಧಿಕಾರಿಗಳು ಕ್ಷೇತ್ರದ ಎಲ್ಲ ರಸ್ತೆಗಳನ್ನ ಪರಿಶೀಲನೆ ಮಾಡಬೇಕು .ನಾನು ಮುಕ್ತಾಯಗೊಂಡ ಎಲ್ಲ ಡಾಂಬರೀಕರಣ ರಸ್ತೆಗಳನ್ನ ಖುದ್ದಾಗಿ ಪರಿಶೀಲನೆ ಮಾಡುತ್ತೇನೆ.ರಸ್ತೆ.ನೀರು,ಶಿಕ್ಷಣ ಇವುಗಳಿಗೆ ನಾನು ಮೊದಲ ಆದ್ಯತೆ ನೀಡಿದ್ದೇನೆ ಎಂದರು.
ಗಡಿಭಾಗದ ತೋಟಪಟ್ಟಿ ರಸ್ತೆಗಳು ಸೇರಿದಂತೆ ಎಲ್ಲ ರಸ್ತೆಗಳು ಡಾಂಬರೀಕರಣ ಮುಕ್ತಾಯ ಹಂತದಲ್ಲಿವೆ ಎಂದು ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕ್ಷೇತ್ರದ ಯಾವದೇ ಕೆಲಸದಲ್ಲಿ ಬೇಜವಾಬ್ದಾರಿ ಕಂಡು ಬಂದರೆ ನಾನು ಕ್ರಮ ಕೈಗೊಳ್ಳಲು ಹಿಂದೆ ಸರಿಯುವದಿಲ್ಲ.ನನ್ನ ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ಉತ್ತಮ ಗುಣಮಟ್ಟದಿಂದ ನಡೆಯುತ್ತಿವೆ ಕಾಗವಾಡ ಕ್ಷೇತ್ರವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ನಾನು ಕೊಟ್ಟ ಮಾತಿನಂತೆ ನಡೆದಿದ್ದೇನೆ ಆ ಕಾರಣ ಜನ ನನ್ನ ಬೆನ್ನುಲುಬಾಗಿ ನಿಂತಿದ್ದಾರೆ.ಮಾತಿಗಿಂತ ಕೃತಿ ಹೆಚ್ಚು ಎಂಬ ನಾಣ್ಣುಡಿಯಂತೆ ನಾನು ಕಾರ್ಯ ಮಾಡುತ್ತಿದ್ದೇನೆ.ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವದು ನನ್ನ ಗುರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಅಭಿಯಂತರರು ವೀರಣ್ಣ ವಾಲಿ,ಲೋಕೋಪಯೋಗಿ ವಲಯ ಅಭಿಯಂತರರು ಆರ್.ಪಿ.ಅವತಾಡೆ,ಕಿರಿಯ ವಲಯ ಅಭಿಯಂತರರು ಮಲ್ಲಿಕಾರ್ಜುನ ಮಗದುಮ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.