ವರದಿ:ಸಚಿನ ಕಾಂಬ್ಳೆ. ಕಾಗವಾಡ
ಕಾಗವಾಡ : ಮತಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯ ಬಸವರಾಜ್ ಬೊಮ್ಮಾಯಿ ಇವರಿಂದ ೨೦೦ ಕೋಟಿ ರೂ.ಅನುದಾನ ಮಂಜೂರು ಗೊಳಿಸಿಕೊಂಡಿದ್ದೇನೆ. ಎಲ್ಲ ರಸ್ತೆಗಳು ಒಳ್ಳೆಯ ಗುಣಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ ಸ್ಥಳೀಯ ಗ್ರಾಮಸ್ಥರು ರಸ್ತೆ ನಿರ್ಮಿಸುವುದರಲ್ಲಿ ತಾವು ಗಮನ ಹರಿಸಬೇಕೆಂದು ಶಾಸಕ ಶ್ರೀಮಂತ ಪಾಟೀಲರು ಕರೆ ನೀಡಿದರು.
ಶುಕ್ರವಾರರಂದು ಕಾಗವಾಡ ತಾಲೂಕಿನ ಕಾತ್ರಾಳ-ಬನಜವಾಡ ರಸ್ತೆಗೆ ೧.೨೦ ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. ಅದರೊಂದಿಗೆ ರಾಷ್ಟ್ರೀಯ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಕಾತ್ರಾಳ ಗ್ರಾಮದ ಪ್ರತಿಯೊಂದು ಮನೆಗೆ ನಲ್ಲಿಗಳ ಮುಖಾಂತರ ನೀರು ಪೂರೈಸುವ ಯೋಜನೆಗೆ ಶಾಸಕರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮತ್ತು ಕಾತ್ರಾಳ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗಾಗಿ ಕಟ್ಟಿಸಿದ ಶಾಲಾ ಕೋಣೆಯನ್ನ ಉದ್ಘಾಟಿಸಿದರು.

ನಂತರ ಶಾಸಕ ಶ್ರೀಮಂತ ಪಾಟೀಲ್ ಮಾತನಾಡಿ, ಕಾಗವಾಡ ಮತಕ್ಷೇತ್ರದಲ್ಲಿ ೨೦೦ ಕೋಟಿ ರೂ ವಿಶೇಷ ಅನುದಾನ ಮಂಜೂರು ಉಳಿಸಿಕೊಂಡಿದ್ದು ರಸ್ತೆ ಅಭಿವೃದ್ಧಿ ಕಾಮಗಾರಿಗಳು ಕೈಗೊಂಡಿದ್ದೇನೆ ಎಲ್ಲ ಕಾಮಗಾರಿಗಳು ಗುಣಮಟ್ಟದಲ್ಲಿ ಇದ್ದಿದ್ದ ಬಗ್ಗೆ ಸ್ಥಳೀಯರು ಖಾತ್ರಿಪಡಿಸಿಕೊಳ್ಳಿರಿ ಇದರಲ್ಲಿ ಏನೋ ತಪ್ಪು ತಡೆ ಆದರೆ ಕೂಡಲೇ ನನ್ನನ್ನು ಸಂಪರ್ಕಿಸಿ ಎಂದು ಸಾರ್ವಜನಿಕ ರಿಗೆ ಕರೆ ನೀಡಿದರು.ಕಾರ‍್ಯಕ್ರಮದಲ್ಲಿ ಮೋಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೂತಾಳಿ ಥರಥರೆ ವಹಿಸಿಕೊಂಡಿದ್ದರು. ಸಮಾರಂಭದಲ್ಲಿ ಐನಾಪುರ್ ಕೆ ಆರ್ ಈ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಾದಾ ಪಾಟೀಲ್, ಎಸ್ ಡಿ ಎಂ ಸಿ ಅಧ್ಯಕ್ಷ ರವಿ ಕಾಂಬಳೆ, ಗುತ್ತಿಗೆದಾರರಾದ ಶಂಕರ್ ಮಗನ್ನವರ್, ಅಭಿಯಂತರದ ಅಮರ್ ಮೇತ್ರಿ, ರತನ ಪಾಟೀಲ್ ಮುಖ್ಯೋಪಾಧ್ಯಾಯ ಸಂಜಯ್ ಕೋಳಿ, ಬಸು ಮುದವಿ, ಪಿಂಟು ಮುಂಜೆ, ಗುತ್ತಿಗೆದಾರರ ಸುನಿಲ್ ಅವಟಿ ಸೇರಿದಂತೆ ಅನೇಕರು ಇದ್ದರು.