ವರದಿ :ರವಿ ಬಿ ಕಾಂಬಳೆ ಬೆಳಗಾವಿ
ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೋರ್ವ ಬುಧವಾರದಂದು ಸಂಜೆ ನೇಣಿಗೆ ಶರಣಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನೇಣಿಗೆ ಶರಣಾಗಿರುವ ವಿಚಾರಣಾಧೀನ ಖೈದಿ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಮೋದಿನಅಲಿ ಗೊಟೆ (24) ಎಂದು ತಿಳಿದುಬಂದಿದೆ.
ಮೋದಿನಅಲಿ ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದನು. ಕಳೆದ 15 ದಿನಗಳ ಹಿಂದಷ್ಟೇ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಗೋಕಾಕ ಉಪ ಕಾರಾಗೃಹಕ್ಕೆ ಆತನನ್ನು ಕರೆತರಲಾಗಿತ್ತು. ಬುಧವಾರ ಸಂಜೆ ಉಪಕಾರಾಗೃಹದ ಸೇಲ್‌ನ ಹೊರಭಾಗದಲ್ಲಿರುವ ಕಟ್ಟಿಗೆಯ ಜಂತಿಗೆ ಬೇಡಸೀಟ್’ನಿಂದ ನೇಣು ಬಿಗಿದುಕೊಂಡಿದ್ದಾನೆ ಎನ್ನಲಾಗಿದೆ.