ನೊಂದ ಮನಸ್ಸಿಗೆ ಮುದ ನೀಡುವ ರಾಗ ಸಂಯೋಜನೆಯೇ ಸಂಗೀತ – ಟಿ ಎಸ್ ವಂಟಗೂಡಿ

Share the Post Now


ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಹಿಡಕಲ್‌ ಹಾಗೂ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್‌ ತಾಲೂಕಾ ಘಟಕ ರಾಯಬಾಗಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಕಾವ್ಯ ಗಾಯನ ಸ್ಪರ್ಧೆ ಸಮಾರಂಭ ಜರುಗಿತು. ಸಮಾರಂಭದ ಮುಖ್ಯ ಅಥಿತಿಗಳಾಗಿ ಮೂಡಲಗಿಯ ಆರ್ ಡಿ ಎಸ್ ಕಲಾ ವಾಣಿಯ ವಿಜ್ಞಾನ ಮತ್ತು ಸಮಾಜ ಕಾರ್ಯ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಸಾಹಿತಿ ಟಿ.ಎಸ್‌ ವಂಟಗೂಡಿ ಮಾತನಾಡಿ ಸಂಗೀತ ಮತ್ತು ಸಾಹಿತ್ಯ ಸರಸ್ವತಿ ದೇವಿಯ ನಯನಗಳಿದ್ದಂತೆ, ರಸಾನುಭವದ ಸುಂದರವಾದ ಅಭಿವ್ಯಕ್ತಿಯೇ ಸಾಹಿತ್ಯ ನೊಂದ ಬೆಂದ ಮನಸ್ಸಿಗೆ ಆನಂದವನ್ನುಂಟು ಮಾಡುವ ದಿವ್ಯ ಔಷಧವಿದ ಸಂಗೀತ.ಅಲ್ಲದೆ ನೊಂದ ಮನಸ್ಸಿಗೆ ಮುದ ನೀಡುವ ರಾಗ ಸಂಯೋಜನೆಯೇ ಸಂಗೀತವಾಗಿದೆ.ಸಂಗೀತಕ್ಕೆ ತಲೆದೂಗದ ಜೀವಿಗಳೇ ಇಲ್ಲ ಸಂಗೀತ ಲೋಕ ಗೆಲ್ಲುವ ಶಕ್ತಿ ಇದೆ ಎಂದು ಪ್ರಧ್ಯಾಪಕ ಸಾಹಿತಿ ಟಿ.ಎಸ್‌ ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು, ಪ್ರಧಾನ ಗುರು ಹಾಗೂ ಜನಪದ ಕಲಾವಿದ ಬಿ.ಎಲ್‌. ಘಂಟಿ ಕುವೆಂಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾವ್ಯ ಗಾಯನ ಸ್ಪರ್ಧೆಯಲ್ಲಿ ಸುದೀಪ್ ಕಾಮಾಣಿ ಪ್ರಥಮ ಸುವರ್ಣ ಮಾತ್ರ ದ್ವಿತೀಯ ಸಿದ್ಧಾರ್ಥ ಕಾಮಾಣಿ ತೃತಿಯ ಸ್ಥಾನ ಪಡೆದುಕೊಂಡು ಬಹುಮಾನ ಸ್ವೀಕರಿಸಿದರು, ಸತೀಶ ಮಾಳಿ ಸ್ವಾಗತಿಸಿದರು, ಯಲಪ್ಪ ಅವರ ನಿರೂಪಿಸಿದರು, ಪ್ರಥಮ ಅಕ್ಕೆನ್ನವರ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!