ವರದಿ:ರಾಕೇಶ ಮೈಗೂರ ಅಥಣಿ
ಅಥಣಿ: ಪಟ್ಟಣದ ಪುರಸಭೆಯ 27 ಎಲ್ಲ ವಾರ್ಡಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದಿಂದ ಇಲ್ಲಿಯವರೆಗೆ 121 ಕೋಟಿ ರೂಪಾಯಿಗಳ ಅನುದಾನ ತರುವ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ಶಾಸಕ ಹಾಗೂ ರಾಜ್ಯ ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ ಕುಮಠಳ್ಳಿ ಹೇಳಿದರು.
ಅವರು ರವಿವಾರ ಪಟ್ಟಣದ ಕನಕ ನಗರದಲ್ಲಿ ಸು. 5 ಲಕ್ಷ ರೂಪಾಯಿ ವೆಚ್ಚದ ಬುದ್ಧ ವಿಹಾರ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಪಟ್ಟಣದ ವ್ಯಾಪ್ತಿಯಲ್ಲಿ ವಿವಿಧ ಸಮುದಾಯಗಳ ಭವನ ನಿರ್ಮಾಣಕ್ಕಾಗಿ ಸು. 4 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಸು. 54 ಕೋಟಿ ರೂ ವೆಚ್ಚದಲ್ಲಿ ಕೊಳಗೇರಿ ಅಭಿವೃದ್ಧಿ ನಿಗಮದಿಂದ ಮನೆಗಳನ್ನು ನಿರ್ಮಿಸಲಾಗುತ್ತಿದೆ.
ಈ ವೇಳೆ ಪುರಸಭೆ ಸದಸ್ಯರಾದ ರಾವಸಾಬ ಐಹೊಳೆ, ಕಲ್ಲೇಶ ಮಡ್ಡಿ, ತಿಪ್ಪಣ್ಣ ಭಜಂತ್ರಿ, ಬುದ್ಧ ವಿಹಾರ ಕಮೀಟಿ ಅಧ್ಯಕ್ಷ ಶಿವಾನಂದ ದೊಡ್ಡಮನಿ, ಉಪಾಧ್ಯಕ್ಷ ಬಾಹುಸಾಬ ದೊಡ್ಡಮನಿ, ಸೋಮನಿಂಗ ನಿಡೋಣಿ, ಆರ್. ಡಿ ದೊಡ್ಡಮನಿ, ಪರಶುರಾಮ ಚುಬಚ್ಚಿ, ತುಕಾರಾಮ ಕಾಂಬಳೆ, ಶಾಮರಾವ ಕಾಂಬಳೆ, ದಿಲೀಪ ನಿಡೋಣಿ, ಸಿ. ಡಿ ವಾಘಮೋರೆ, ಎಸ್. ಬಿ ಕಾಂಬಳೆ, ಮುಖಂಡರಾದ ಡಾ. ಅನಿಲ ಸೌದಾಗರ, ನಿಂಗಪ್ಪ ನಂದೇಶ್ವರ, ಶಶಿಕಾಂತ ಸಾಳವೆ, ಬೀರಪ್ಪ ಯಂಕಂಚ್ಚಿ, ಮಹಾಂತೇಶ ಬಾಡಗಿ, ಅನಿಲ ಭಜಂತ್ರಿ, ವಿನಯ ಪಾಟೀಲ, ಉಮೇಶ ಶಿವಶರಣ, ಡಾ. ಎಸ್. ಡಿ ಸಿಂಗೆ, ಗುತ್ತಗೆದಾರ ಮುತ್ತಣ್ಣ ಜಮಖಂಡಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.