DIGITAL ಮಾಧ್ಯಮದಲ್ಲಿ ಹೊಸ ಮಿಂಚು:ಮಹಾನಾಯಕ ಸಂದೇಶ ಎಂಬ ವೆಬ್ ಸೈಟ್ ಇಂದು ಲೋಕಾರ್ಪಣೆ
ವಿಶಾಲ ಹೃದಯೀ ಕನ್ನಡ ನಾಡಿನ ಸಮಸ್ತ ಜನತೆಗೆ ನಮಸ್ಕಾರಗಳು
ನೀವು ಈಗಾಗಲೇ zee ಕನ್ನಡ ವಾಹಿನಿಯಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನದಾರಿತ ಧಾರವಾಹಿಯನ್ನು ವೀಕ್ಷಿಸುತ್ತಾ ಬಂದಿದಿರಿ ಅದು ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿಯಾಗಿ ಹೊರಹೊಮ್ಮುತ್ತಿದೆ ಇವತ್ತು ನಾವು ಬಾಬಾಸಾಹೇಬ್ ರ ಆದರ್ಶಗಳು,ಮಹಿಳೆಯರ ಸಮಾನತೆಗಾಗಿ ನಡೆದ ಹೋರಾಟಗಳು ಮತ್ತು ಹಿಂದುಳಿದವರ,ಹಾಗೂ ಬಡವರ ಪರ, ಹೋರಾಟದ ಹಾದಿಯಲ್ಲಿ ದ್ವನಿ ಇಲ್ಲದಿರುವವರ ಧ್ವನಿಯಾಗಿ ಡಾ ಬಿ ಆರ್ .ಅಂಬೇಡ್ಕರ್ ಅವರು ಹುಟ್ಟಿನಿಂದ ಕೊನೆಯವರೆಗೂ ನಡೆದ ಹೋರಾಟ ಹಾಗೂ ಸಂಘರ್ಷದ ಹಾದಿಯಲ್ಲಿ ತಮ್ಮ ಜೀವನವನ್ನು ಮುಡಿಪಾಗಿ ಇಟ್ಟಿರುವದನ್ನು ಅರಿಯಬೇಕಿದೆ. ಅವರ ಒಂದೇ ಒಂದು ಆಶಯ ಸಮಾನತೆಯ ಸಮಾಜಕ್ಕಾಗಿ ಇತ್ತು ಆದರಿಂದ ಬಂಧುಗಳೇ ನಾವುಗಳು ಅದೇ ಹೆಸರಿನ ಮಹಾನಾಯಕ ಸಂದೇಶ
ಎಂಬ ವೆಬ್ ಸೈಟ್ DIGITAL ಮಾಧ್ಯಮಕ್ಕೆ ಕಾಲಿಡುತ್ತಿದ್ದೇವೆ ಹಾಗೂ ಮಹಾನಾಯಕ ಸಂದೇಶ ಎಂಬ ದಿನ ಪತ್ರಿಕೆಗೆ ಭಾರತ ಸರಕಾರ ನೀಡುವ RNI ಪ್ರಮಾಣ ಪತ್ರ ಬಂದಿದ್ದು ಸದ್ಯದಲ್ಲಿ ಕನ್ನಡ ನಾಡಿನ ಪ್ರತಿ ಮನೆ ಮನೆಗೆ ಪತ್ರಿಕೆ ಬರಲಿದೆ ಎಂದು ಹೇಳಲು ಬಯಸುತ್ತೇನೆ ಹಾಗೆಯೇ ನಿಮ್ಮ ಆಶೀರ್ವಾದ ಬೆಂಬಲ ನಮ್ಮ ಮೇಲೆ ಇರಲಿ ಏನಾದರೂ ತಪ್ಪು ತಡೆಗಳು ಬಂದರೆ ಸಲಹೆ ಸೂಚನೆ ನೀಡುವದರ ಜೊತೆಗೆ ಅಂಬೇಡ್ಕರ್ ಅವರ ಚಿಂತನೆಗಳ ಕುರಿತಾದ ಲೆಖನ ಮತ್ತು ಕವಿತೆಗಳನ್ನು ನಮ್ಮ ಪತ್ರಿಕೆಗೆ ತಿಳಿಸಲು ಹಾಗೂ ನಿಮ್ಮ ಊರು ಗ್ರಾಮ ಅಥವಾ ಕೇರಿಯ ಸಮಸ್ಯೆಗಳನ್ನು ನಮಗೆ ವರದಿ ಮಾಡಲು ತಿಳಿಸುವ ಮೂಲಕ ಪರಿಹಾರ ಕಂಡುಕೊಳ್ಳಲು ನಾವು ಸಹಕರಿಸಲಿದ್ದೇವೆ ಎಂದು ತಿಳಿಸುತ್ತೇನೆ
ಇಂತಿ ನಿಮ್ಮ

ಕರೇಪ್ಪಾ (ದೀಪಕ)ಎಸ್ ಕಾಂಬಳೆ, EDITAR ಮಹಾನಾಯಕ ಸಂದೇಶ