ವರದಿ:ಸಂಗಮೇಶ ಹಿರೇಮಠ
ಮುಗಳಖೋಡ ಪಟ್ಟಣದಲ್ಲಿ ಜರುಗುತ್ತಿರುವ ಮಾಳಿ/ ಮಾಲಗಾರ ಸಮಾಜದ ರಾಜ್ಯಮಟ್ಟದ ದ್ವಿತೀಯ ಬೃಹತ್ ಸಮಾವೇಶದ ನಿಮಿತ್ಯ ಬೈಕ್ ರ್ಯಾಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..
ಮೆರವಣಿಗೆಯು ಮುಗಳಖೋಡ ಕ್ರಾಸ್ ದಿಂದ ಪ್ರಾರಂಭವಾಗಿ ಸುಮಾರು 2 ಗಂಟೆಗಳ ಕಾಲ ಡೊಳ್ಳು ಕುಣಿತ, ಹಲಿಗೆ ವಾದ, ಡಾಲ್ಬಿ, ಬ್ಯಾಂಜೋ ಸೇರಿದಂತೆ ವಿವಿಧ ಕಲಾ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬದಿಗಳಲ್ಲಿ ಸಂಚ್ಚರಿಸಿ ಕಾರ್ಯಕ್ರಮದ ಸ್ಥಳ ಬಿ.ಎನ.ಕೆ. ಶಾಲೆಯ ಆವರಣ ತಲುಪಿತು.
ಕಾರ್ಯಕ್ರಮಕ್ಕೆ ಸಮಾಜದ ಗುರುಗಳು ಹಾಗೂ ಮುಖಂಡರು ಸೇರಿ ಚಾಲನೆ ನೀಡಿದರು.
ಕುಂಬ, ಆರತಿಯೊಂದಿಗೆ ಸಮಾಜದ ಸುಮಂಗಲೆಯರು, ಮುಖಂಡರು, ಗೆಳೆಯರ ಬಳಗ, ಸಾರ್ವಜನಿಕರು ಸೇರಿದಂತೆ ಸುಮಾರು ೧೦ ಸಾವಿರಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಾರೂಗೇರಿ ಪೋಲಿಸ ಠಾಣೆಯ ವ್ಯಾಪ್ತಿಯಲ್ಲಿ ಎಲ್ಲ ಪೋಲಿಸ್ ಸಿಬ್ಬಂದಿಯವರು ಬಂಧುಬಸ್ತಿಯೊಳಗೆ ತೊಡಗಿಕೊಂಡಿದ್ದರು..