ವರದಿ:ಶಶಿಧರ ಕೊಕಟನೂರ
ರಾಯಬಾಗ:ತಾಲೂಕಿನ ಮುಗಳಖೋಡ ಪಟ್ಟಣದ ಚನ್ನ ಬಸವೇಶ್ವರ ವಿದ್ಯಾವರ್ಧಕ ಸಂಘದ ಬಿ.ಎನ್.ಕೆ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ನಡೆಯಲಿರುವ ಅಖಿಲ ಕರ್ನಾಟಕ ಮಾಳಿ,ಮಾಲಗಾರ ಸಮಾಜದ ರಾಜ್ಯ ಮಟ್ಟದ ದ್ವಿತೀಯ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮತ್ತು ಪತ್ರಿಕಾಗೋಷ್ಠಿ ನಡೆಯಿತು.
ಮಾಳಿ,ಮಾಲಗಾರ ಸಮಾಜದ ನಿಯೋಗ ಸಮಿತಿ ಅಧ್ಯಕ್ಷರಾದ ಡಾ. ಸಿ ಬಿ ಕುಲಿಗೋಡ ಅವರು ರಾಜ್ಯ ಮಟ್ಟದ ಅಖಿಲ ಕರ್ನಾಟಕ ಮಾಳಿ,ಮಾಲಗಾರ ಸಮಾಜದ ಸಮಾವೇಶಕ್ಕೆ ಸೋಮವಾರ ದಿನದಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಸಚಿವರು,ಶಾಸಕರು ಆಗಮಿಸುತ್ತಿದ್ದಾರೆ ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು ಇನ್ನೂ ಮಾಳಿ,ಮಾಲಗಾರ ಸಮಾಜವು ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಈ ಸಮಾಜ ಅಭಿವೃದ್ಧಿ ಆಗಬೇಕಾದರೆ ಸರ್ಕಾರ ನಿಗಮವನ್ನು ಸ್ಥಾಪಿಸಿ ಪ್ರತಿ ಜಿಲ್ಲೆಗೆ ಒಂದು ಬಾಲಕ ಮತ್ತು ಬಾಲಕಿಯರ ವಸತಿ ಶಾಲೆಯನ್ನು ಸ್ಥಾಪಿಸಬೇಕೆಂದು ಮನವಿ ಮಾಡಲಿದ್ದೆವೆ ಎಂದು ಹೇಳಿದರು.
ಅಖಿಲ ಕರ್ನಾಟಕ ಮಾಳಿ ಸಮಾಜದ ರಾಜ್ಯಾಧ್ಯಕ್ಷರಾದ ಕಾಡು ಮಾಳಿ ಅವರು ಮಾತನಾಡಿ ಮಾಳಿ ಮವತ್ತು ಮೂರು ವರ್ಷಗಳ ನಂತರ ಈ ಭಾಗದಲ್ಲಿ ಸಮಾವೇಶ ನಡೆಯುತ್ತಿದ್ದು ಮಾಳಿ ಸಮಾಜವು ಹಿಂದುಳಿದ ಸಾಮಜವಾಗಿದ್ದು ತರಕಾರಿ ಮಾರುವ ಮೂಲಕ ಜನ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಸರ್ಕಾರ ನಮಗೆ ಕೋಡುತ್ತಿರುವ 2A ಮಿಸಲಾತಿಯಲ್ಲಿ ಬಹಳಷ್ಟು ಗೊಂದಲಗಳಿದ್ದು ಅವುಗಳನ್ನೂ ನಿವಾರಿಸಿ ನಮ್ಮಗೆ ಪರಿಶಿಷ್ಟ ಪಂಗಡದ ಮಿಸಲಾತಿಯಲ್ಲಿ ಸೇರಿಸಬೇಕೆಂದು ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ತಯಾರಿ ವಿಕ್ಷೀಶಿಸಿ ಕುಡಚಿ ಶಾಸಕ ಪಿ ರಾಜೀವ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಆರ್ ಎಚ್ ಭಗವಾನ, ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಮಾಜದ ಮುಖಂಡರಾದ ಮುರಗೆಪ್ಪಾ ಮಾಲಗಾರ,ವ್ಹಿ ಎಸ್ ಮಾಳಿ, ಸಂತೋಷ ಬಡಕಂಬಿ, ಸದಾಶಿವ ಹೊಸಮನಿ, ಮಹಾಂತೇಶ ಮಾಳಿ,ಕಿರಣ ಮಾಳಿ, ಮಹಾದೇವ ತೆರದಾಳ,ನಿಲಪ್ಪಾ ಕಿವಟೆ, ಸಂಜು ಅಥಣಿ, ಶಂಕರ ಕಿವಟೆ,ಭೂಪಾಲ ಸೇರಿದಂತೆ ಮಾಳಿ ಮಾಲಗಾರ ಸಮಾಜದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.