ರಾಯಬಾಗ ರೈಲ್ವೆ ಸ್ಟೇಷನ್ ಬಳಿ ಚರಂಡಿ ಕಾಮಗಾರಿ ವೇಳೆಎತ್ತು (ಗೂಳಿ) ಒಂದು ಆಯಾ ತಪ್ಪಿ ಚರಂಡಿ ಒಳಗೆ ಬಿದ್ದು ಕಾಲು ಮುರಿದುಕೊಂಡಿದೆ ಯಾರೋ ಮಾಡಿದ ತಪ್ಪಿನಿಂದ ಈ ನರಕ ಯಾತನೆ ಅನುಭವಿಸುವಂತಾಗಿದೆ ಗುತ್ತಿಗೆದಾರರಾದವರು ಸುರಕ್ಷತಾ ಕ್ರಮಗಳನ್ನು ಸರಿಯಾದ ರೀತಿಯಲ್ಲಿ ಮಾಡದೆ ಇದ್ದದಕ್ಕೆ ಇಂತಹ ಅನಾನುಕುಲತೆಯಾಗಿದೇ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ ಒಟ್ಟಿನಲ್ಲಿಮುಖ ಪ್ರಾಣಿ ಇಂದು ಸಾವು ಬದುಕಿನ ನಡುವೆ ಪರದಾಡುವ ಪರಿಸ್ಥಿತಿ ಎದುರಾಗಿದೆ
ಇಲಾಖೆಯ ಬೇಜವಾಬ್ದಾರಿತನ:ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಇಲಾಖೆಯ ತಮ್ಮ ಜವಾಬ್ದಾರಿ ಮರೆತಂತೆ ಕಾಣಿಸಿಲುತ್ತಿದೆ ಏಕೆಂದರೆ ಕೆಲಸದ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಎಲ್ಲ ಕುರ್ಚಿಗಳು ಕಾಲಿಕಾಲಿ ಸಿಬ್ಬಂದಿ ಗಳ ಕೇಳಿದರೆ ಎಲ್ಲಿ ಹೋಗಿದ್ದಾರೆ ಎಂದು ನಮಗೇನು ಗೊತ್ತು ಎಂಬ ಹಾರಿಕೆ ಉತ್ತರ|
ಎತ್ತು ಸಾವು ಬದುಕಿನ ನಡುವಿನ ಜೊತೆ ನರಳಾಟ:ಮೈಯೆಲ್ಲಾ ಹುಳ ಬಿದ್ದು ಗೂಳಿ, ನರಳುತ್ತಿದ್ದು ಆಸ್ಪತ್ರೆಯ ಆವರಣದಲ್ಲಿ ಗಬ್ ಎದ್ದು ನಾರುತ್ತಿದ್ದರು ಮೂಗು ಮುಚ್ಚಿಕೊಂಡು ತಿರುಗಾಡುತ್ತಿರುವ ಸಿಂಬದಿಗಳು ಎತ್ತಿನ ಪಕ್ಕದಲ್ಲಿ ಕಾಲಿ ಬುಟ್ಟಿ ಇದ್ದು ಅದಕ್ಕೆ ತಿನ್ನಲು ಆಹಾರವಿಲ್ಲದೆ ಎದೆ ಉಸಿರು ಬಿಡುತ್ತಾ ಬಿದ್ದಿದೆ, ಮನುಷ್ಯನಿಗೆ ಆರೋಗ್ಯ ತಪ್ಪಿದರೆ ಔಷದೋಪಚಾರ ಮಾಡಿಕೊಳ್ಳುತ್ತಾನೆ ಆದರೆ ಮುಖ ಪ್ರಾಣಿ ಏನುಮಾಡುವುದು ಹೇಳಿ? ಒಟ್ಟಿನಲ್ಲಿ ಮೇಲಧಿಕಾರಿಗಳು ಇತ್ತ ಗಮನ ಹರಿಸಬೇಕು ಹೆಚ್ಚಿನ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಬೇಕು