*ಬೆಳಗಾವಿ* ಒಕ್ಕಲಿಗರ ಸಮುದಾಯದ ಮೀಸಲಾತಿಗಾಗಿ ನಮ್ಮ ಸಮುದಾಯದ ಸ್ವಾಮೀಜಿಗಳ ಬಹಳ ದಿನಗಳ ಹೋರಾಟ ಮಾಡುತ್ತಿದ್ದು, ಮುಖ್ಯಮಂತ್ರಿಗಳು ಕೂಡಾ ನಮ್ಮ ಬೇಡಿಕೆಗೆ ಉತ್ತಮ ಸ್ಪಂದನೆ ನೀಡಿದ್ದಾರೆ..
ಈಗಾಗಲೇ ವರದಿ ನೀಡುವಂತೆ ಸಿ ಎಂ ಅವರು ನೀಡಿದ ಪತ್ರವನ್ನು ಹಿಂದುಳಿದ ಆಯೋಗಕ್ಕೆ ಜಯಪ್ರಕಾಶ ಹೆಗಡೆ ಅವರಿಗೆ ಪತ್ರ ತಲುಪಿಸಿದ್ದೇವೆ ಎಂದರು.
ಗ್ರಾಮ ಮತ್ತು ನಗರ ಪ್ರದೇಶದ ಎಲ್ಲ ವಕ್ಕಲಿಗರುಗು ಸಮಾನವಾಗಿ ಅನುಕೂಲ ಆಗುವಂತೆ ಮೀಸಲಾತಿ ನೀಡುವಂತೆ ಬೇಡಿಕೆ ಇಟ್ಟಿದ್ದೇವೆ..
ಜನಸಂಖ್ಯಾ ಆಧಾರದಲ್ಲಿ ಈ ಸಮುದಾಯಕ್ಕೂ ಕೂಡಾ ನ್ಯಾಯ ಸಿಗಬೇಕು ಎಂಬ ಹೋರಾಟ ನಮ್ಮದು..
ನಮ್ಮ ಸರಳ, ಚಾಣಾಕ್ಷ, ಪರೋಪಕಾರಿ ಮುಖ್ಯಮಂತ್ರಿಗಳು ಎಲ್ಲಾ ಸಮುದಾಯಕ್ಕೂ ನೀಡಿದ ನ್ಯಾಯದಂತೆ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿಯ ನ್ಯಾಯ ನೀಡುವರು ಎಂದರು..
ವರದಿ :ರವಿ ಬಿ ಕಾಂಬಳೆ ಬೆಳಗಾವಿ
