ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ,ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

Share the Post Now

ವರದಿ:ಸಚಿನ ಕಾಂಬ್ಳೆ. ಕಾಗವಾಡ

ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಂಯುಕ್ತಾಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಶಾರದಾ ಶಾಲಾ ಆವರಣದಲ್ಲಿ ಜರುಗಿತು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಸಿದ್ದಾಪೂರದ ಪ.ಪೂ.ಶ್ರೀ. ಕಾಡಯ್ಯಾ ಸ್ವಾಮೀಜಿಯವರು ವಹಿಸಿಕೊಂಡು, ಮಕ್ಕಳಿಗೆ ಪಠ್ಯ ಪುಸ್ತಕಗಳ ಅಭ್ಯಾಸದ ಜೊತೆಗೆ ಪಂದ್ಯಾಟಗಳು ಹಾಗೂ ಸಾಂಸ್ಕೃತಿಕ ಚಟುವಟಕೆಗಳು ಮತ್ತು ದೈಹಿಕ ಬೆಳವಣಿಗೆ ಹಾಗೂ ಮಾನಸಿಕ ವಿಕಾಸಕ್ಕೆ ಬೇರೆ-ಬೇರೆ ಸ್ಪರ್ಧೆಗಳು ಇಂದಿನ ಶಿಕ್ಷಣ ಪದ್ಧತಿಯಲ್ಲಿ ಅತೀ ಅವಶ್ಯಕವಾಗಿ ಮಕ್ಕಳನ್ನು ತೊಡಗಿಸಬೇಕೆಂದು ಆಶೀರ್ವಚನದಲ್ಲಿ ತಿಳಿಸಿದರು.

ಸಮಾರಂಭದ ಘನ ಅಧ್ಯಕ್ಷತೆಯನ್ನು ಶ್ರೀ ಆರ್.ಎ.ಪಾಟೀಲರು ವಹಿಸಿಕೊಂಡು ಸಂಸ್ಥೆಯ ಏಳಿಗೆ ಬಗ್ಗೆ ಶ್ಲಾಘಿಸಿದರು. ಸಪ್ತಸಾಗರ ಪಿಕೆಪಿಎಸ್ ನ ಅಧ್ಯಕ್ಷರಾದ ಶ್ರೀ ಅಶೋಕ ಐಗಳಿಯವರು ಸಂಸ್ಥೆಗೆ ಅವಶ್ಯವಿರುವ ಸೌಲಭ್ಯಗಳನ್ನು ಅತೀ ಶೀಘ್ರದಲ್ಲಿ ಒದಗಿಸಲಾಗುವುದೆಂದರು.

ಸದರಿ ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷರಾದ ಪರಶುರಾಮ ಕೊಳೇಕಾರ ರವರು ಸಂಸ್ಥೆ ನಡೆದು ಬಂದ ದಾರಿ ಹಾಗೂ ಮಕ್ಕಳ ಬಗ್ಗೆ ಶಿಕ್ಷಕ/ಕಿಯರು ವಹಿಸುವ ಕಾಳಜಿ ಹಾಗೂ ವಿದ್ಯಾಭ್ಯಾಸದ ಬಗ್ಗೆ ಪ್ರಸಂಶಿಸಿದರು.

ಅತಿಥಿಗಳಾದ ಹಾರೂನ ಮುಲ್ಲಾರವರು ವಿದ್ಯಾರ್ಥಿಗಳಲ್ಲಿ ವಿವಿಧತೆ ಇದ್ದರೂ ಐಕ್ಯತೆಯೊಂದಿಗೆ ಇರಲು ಹಾಗೂ ತಮ್ಮಲ್ಲಿರುವ ಬೇರೆ-ಬೇರೆ ಸಾಮರ್ಥ್ಯವನ್ನು ಪ್ರದರ್ಶಿಸಬೇಕು ಮತ್ತು ಒಕ್ಕಟ್ಟಿನಲ್ಲಿ ಬಲವಿದೆ ಎಂದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಬಾಬಾಲಾಲ ನದಾಫ ರವರು ಇಂದಿನ ಶಿಕ್ಷಣದಲ್ಲಿ ನೈತಿಕತೆ ಹಾಗೂ ಅಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.

ಸಪ್ತಸಾಗರ ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ ಕಾಂಬಳೆ, ರಫೀಕ ಆವಟಿ, ಶಂಕರ ಕೊಳೇಕಾರ , ರಮಜಾನ ತರಾಳ ಹಾಗೂ ಪಿಕೆಪಿಎಸ್ ನ ನಿರ್ದೇಶಕರಾದ ಜಿನ್ನಪ್ಪ ಹಳ್ಳೂರ, ರಾವಸಾಬ ಚುನಾರ, ಹಸನ ನದಾಫ, ಹಾಗೂ ಹಿರಿಯರಾದ ಗಂಗಪ್ಪ ಮೋರೆ, ಪಾಯಪ್ಪಾ ಆಲಗೂರ, ಸುರೇಶ ಸವದಿ, ಬಸೀರ ಸತ್ತಿ, ಬಂದೇನವಾಜ ಕರಿಸಾಬು, ಭರತೇಶ ಕಲಕೇರಿ, ಹಾರೂನ ನದಾಫ, ‘ಮಹ್ಮದ ಹುಸೇನ ಜಮಾದಾರ, ರಸೂಲ ನದಾಫ, ಶ್ರೀಶೈಲ ತೇಲಿ ಹಾಗೂ ಸಮಸ್ತ ಸಿಬ್ಬಂದಿ ವೃಂದ ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಶಾರದಾ ಮಾತೆ ಪೂಜೆ ಹಾಗೂ ಶಾಲಾ ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಸಮಾರಂಭವನ್ನು ಪ್ರಾರಂಭಿಸಲಾಯಿತು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಮುಕುಂದ ತೀರ್ಥ ಕಾರ್ಯಕ್ರಮ ನಿರ್ವಹಿಸಿದರು, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಡಿ.ಬಿ.ನದಾಫ ಸ್ವಾಗತಿಸಿದರು, ಸಹ ಶಿಕ್ಷಕರಾದ ಸಂತೋಷ ಸಾಂವಗಾಂವ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!