ಶಿವಾನಂದ ಮಹಾವಿದ್ಯಾಲಯದಲ್ಲಿ ಒಂದು ದಿನದ “ಬುದ್ದಿಮತ್ತೆ ಕೌಶಲ್ಯತೆ”ಕಾರ್ಯಾಗಾರ

Share the Post Now

ವರದಿ:ಸಚಿನ ಕಾಂಬ್ಳೆ.

ಕಾಗವಾಡ: ಶಿವಾನಂದ ಮಹಾವಿದ್ಯಾಲಯ ಕಾಗವಾಡದಲ್ಲಿ
ವಿದ್ಯಾರ್ಥಿಗಳಿಗಾಗಿ ಆಯ್.ಕ್ಯು.ಎ.ಸಿ. ಅಡಿಯಲ್ಲಿ ಪ್ಲೇಸ್‌ಮೆಂಟ್ ಸೇಲ್, ಕರೀಯರ್ ಅಕಾಡೇಮಿ ಮತ್ತು ಸಮಾಜವಿಜ್ಞಾನ ಸಂಘದ ಅಡಿಯಲ್ಲಿ ಆಯೋಜಿಸಿದ ಒಂದು ದಿನದ ‘ಬುದ್ಧಿಮತ್ತೆ ಕೌಶಲ್ಯತೆಯ’ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅರ್ಜುನ ಕೋಳಿ, (ಎಂ.ಎ.) ಬಸ್ತವಾಡ, ಜಿಲ್ಲೆ ಕೊಲ್ಲಾಪೂರ ಮಹಾರಾಷ್ಟ್ರ ರಾಜ್ಯದ ಮಾಜಿ ಸೈನಿಕರು ಹಾಗೂ ವಿದ್ಯಾರ್ಥಿಮಾರ್ಗದರ್ಶಿ ಸಂಪನ್ಮೂಲವ್ಯಕ್ತಿ, ಆಗಮಿಸಿ ವಿದ್ಯಾರ್ಥಿಗಳಿಗೆ ಸಾಧನೆಯ ಸಿದ್ಧತೆ ಹೇಗಿರಬೇಕು, ಸಾಧನೆಗಾಗಿ ಪೂರ್ವ ತಯಾರಿ ಹೇಗಿರಬೇಕು ಹಾಗೂ ಸಾಧನೆಯ ಮಾರ್ಗಗಳನ್ನು ಆಯ್ದುಕೊಳ್ಳುವ ರೀತಿ ಹಾಗೂ ಸಾಧನಾ ಪಥಧ ಹಲವಾರು ಮಾರ್ಗಗಳನ್ನು ತಿಳಿ ಹೇಳಿದರು.

ಕಾರ್ಯಕ್ರಮದ ಅದ್ಯಕ್ಷ ಸ್ಥಾನವನ್ನು ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಡಾ. ಎಸ್.ಪಿ. ತಳವಾರ ವಹಿಸಿದರು. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಕಲಿಕಾ ಉತ್ಸುಕತೆ ಹಾಗೂ ಭಾವಿ ಜೀವನದ ನೈಜ ಸತ್ಯಗಳನ್ನು ಮನಗೊಂಡು ಸತತವಾಗಿ ಪರಿಶ್ರಮಪಟ್ಟು ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ತಿಳಿ ಹೇಳಿದರು.

ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯರಾದ ಡಾ. ಎಸ್.ಎ. ಕರ್ಕಿ ವಿದ್ಯಾರ್ಥಿಗಳಲ್ಲಿ ಸ್ಫರ್ಧಾತ್ಮಕ ಮನೊಭಾವ ಹಾಗೂ ಕೌಶಲ್ಯ ಹೆಚ್ಚಿಸುವ ಸಾಮರ್ಥ್ಯ ಇರಬೇಕು ಎಂದು ಹೇಳಿದರು. ಈ ಕಾರ್ಯಾಗಾರದಲ್ಲಿ ಸುಮಾರು ೨೦೦ಕ್ಕು ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಇದರ ಸಂಪೂರ್ಣ ಪ್ರಯೋಜನೆ ಪಡೆದುಕೊಂಡರು.

ಪ್ಲೇಸ್‌ಮೆಂಟ್ ಸೇಲ್ ಹಾಗೂ ಕರೀಯರ್ ಅಕಾಡೆಮಿ ಸಂಯೊಜಕರಾದ ಪ್ರೊ. ಜೆ.ಕೆ. ಪಾಟೀಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ವೀಣಾ ಭತಗೆ ಸ್ವಾಗತಗೀತೆ ಹೇಳಿದರು. ಆಯ್.ಕ್ಯು.ಎ.ಸಿ. ಸಂಯೋಜಕರಾದ ಪ್ರೊ. ಬಿ.ಡಿ. ಧಾಮಣ್ಣವರ ವಂದಿಸಿದರು. ಪ್ರೊ. ವ್ಹಿ.ಬಿ. ಬುರ್ಲೆ ಮತ್ತು ಪ್ರೊ. ಎ.ಟಿ. ಪಾಟೀಲ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!