ವರದಿ :ಶಾರುಖ್ ಖಾನ್,ಹನೂರು
ಹನೂರು: ತಾಲೂಕಿನ ಶೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಧ್ಯಾಹ್ನ 3 ಗಂಟೆ ಯಾದರು, ಪಿಡಿಓ ಸೇರಿದಂತೆ ಕೆಲವು ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗದೆ ಸರ್ಕಾರಿ ಕೆಲಸದಲ್ಲಿ ವಿಳಂಬ ನೀತಿ ಅನುಸರಿಸುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ
ಪ್ರತಿದಿನ ಗ್ರಾ ಪಂ ಗಳಲ್ಲಿ ಸರಿಯಾದ ಸಮಯಕ್ಕೆ ಪಿಡಿಒಗಳು ಬರುತ್ತಿಲ್ಲ ಇದರಿಂದ ಕೆಲಸ ಕಾರ್ಯಗಳು ಕುಂಠಿತ ಗೊಳ್ಳುತ್ತಿವೆ. ಸಾರ್ವಜನಿಕರು ಹೇಳಿದ ಕೆಲಸ ಕಾರ್ಯ ಸಮಯಕ್ಕೆ ಸರಿಯಾಗಿ ಮಾಡಿಕೊಡದೆ ಅಲೆದಾಡಿಸುತ್ತಿದ್ದಾರೆ ಸಮಯ ಮೂರು ಘಂಟೆ ಕಳೆದರು ಪಿಡಿಒರವರಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿದರೆ ಅವರು ಸ್ವೀಕರಿಸುವುದಿಲ್ಲ. ಇತ್ತ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ತಿಳಿಸಿದರು ಯಾವುದೇ ಪ್ರಯೋಜನವಿಲ್ಲ ಇಒ ರವರು ಪಿಡಿಒಗಳ ಮೇಲೆ ಅಧಿಕಾರದ ಹಿಡಿತ ಹೊಂದಿಲ್ಲ ಎಂದು ಸಾರ್ವಜನಿಕರಾದ ವೆಂಕಟೇಶ್ ಆರೋಪಿಸಿದ್ದಾರೆ. ಗ್ರಾ ಪಂ ನಲ್ಲಿ ಇಂದು 3 ಗಂಟೆಯಾದರೂ ಪಿಡಿಓ ಬರುವುದಿಲ್ಲ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಈ ಬಗ್ಗೆ ಇ ಓ ಗಮನಹರಿಸಬೇಕು ಎಂದು ಶೆಟ್ಟಳ್ಳಿ ವೆಂಕಟೇಶ್ ಒತ್ತಾಯಿಸಿದ್ದಾರೆ