ರಾಯಭಾಗ: ಪಟ್ಟಣದಲ್ಲಿ ರಾತ್ರಿ ಪೊಲೀಸರ ಕಾವಲು ಹೆಚ್ಚಾಗಿದೆ ರಾತ್ರಿ ಇಡಿ ಗಸ್ತ್ ತಿರುಗುವಲ್ಲಿ ನಿರತರಾದ ಸಿಪಿಐ ಎಚ್ ಡಿ ಮುಲ್ಲಾ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಖುದ್ದು ರಾತ್ರಿ ಇಡೀ ಪಹರೆ ನೀಡಿದರು ಕಳೆದ ಕೆಲ ದಿನಗಳಿಂದ ಪಕ್ಕದ ತಾಲೂಕಿನಲ್ಲಿ ಕಳ್ಳತನದ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ ಸಂಜವ್ ಪಾಟೀಲ ಆದೇಶದ ಮೇರೆಗೆ ಪಟ್ಟಣದಲ್ಲಿ ಪೊಲೀಸ್ ಪಹರೆಯನ್ನು ಹೆಚ್ಚಿಸಲಾಗಿದೆ
ರಾಯಬಾಗ ಪಟ್ಟಣದ ಎಲ್ಲಹೊರ ವಲಯದಲ್ಲಿರುವ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಏರಿಯಾಗಳಲ್ಲಿ ರಾತ್ರಿ ವೇಳೆಯಲ್ಲಿ ಪೊಲೀಸರ ಗಸ್ತನ್ನು ಹೆಚ್ಚಿಸಲಾಗಿದೆ ಕಳೆದ ಕೆಲವು ದಿನಗಳಿಂದ ಬೀಗ ಹಾಕಿದ ಒಂಟಿ ಮನೆಗಳ ಮೇಲೆ ಪೊಲೀಸ್ ಇಲಾಖೆ ನಿಗಾ ಇಟ್ಟಿದೆ ರೈಲ್ವೇ ಸ್ಟೇಷನ್ ಬಸ್ ಸ್ಟ್ಯಾಂಡ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿದ ಪೊಲೀಸ್ ಭದ್ರತೆ ಮುಂಜಾಗ್ರತಾ ಕ್ರಮವಾಗಿ ಸಂಶಯ ಬಂದ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ
ಹಗಲು ಮತ್ತು ರಾತ್ರಿ ಹೊತ್ತಿನಲ್ಲಿ ಸಂಶಯಸ್ಪದವಾಗಿ ಅನಾಮದೇಯ ಜನರು ಓಡಾಡುತ್ತಿದ್ದರೆ ಕೂಡಲೇ ಪೊಲೀಸ್ ಇಲಾಖೆಯ ದೂರವಾಣಿ 112 ಕರೆ ಮಾಡಿ ತಿಳಿಸಲು ಕೋರಲಾಗಿದೆ ಎಂದುರಾಯಬಾಗ ಪೊಲೀಸ್ ಠಾಣೆಯ ಸಿಪಿಐ ಎಚ್ ಡಿ ಮುಲ್ಲಾ ತಿಳಿಸಿದ್ದಾರೆ ಬೇರೆ ರಾಜ್ಯಗಳಿಂದ ಬೇರೆ ಭಾಷೆ ಮಾತನಾಡುವ ಜನರು ಕಂಡು ಬಂದರೆ ಅಥವಾ ಯಾವುದಾದರೂ ಗೃಹಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ನೆಪದಲ್ಲಿ ಮನೆಗಳಿಗೆ ಅಥವಾ ತಾವು ವಾಸಿಸುವ ಓಣಿಗಳಿಗೆ ಜನರು ಬಂದಲ್ಲಿ ತಾವು ಜಾಗರೂಕತೆಯಿಂದ ವ್ಯವಹರಿಸಬೇಕೆಂದು ಮತ್ತು ಅವರ ಮೇಲೆ ಸಂಶಯ ಬಂದರೆ ಕೂಡಲೇ ಪಕ್ಕದ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಬೇಕೆಂದು ತಿಳಿಸಿದ್ದಾರೆ