ಹಾರೂಗೇರಿ:ಸನ್ 2021-22 ನೇ ಸಾಲಿನ 15ನೇ ಹಣಕಾಸು ಯೋಜನೆಯಡಿಯಲ್ಲಿ ಪುರಸಭೆ
ವ್ಯಾಪಿಯ ಹಾರೂಗೇರಿ ಕ್ರಾಸ್ ನ ವಾರ್ಡ, ನಂ:23 ರಲ್ಲಿ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಪುರಸಭೆ ಸದಸ್ಯ ವಸಂತ ಲಾಳಿ ಹಾಗೂ ಮುಖ್ಯಾಧಿಕಾರಿ ಜೆ ವಿ ಹಣ್ಣಿಕೇರಿ ಅವರು ರಿಬ್ಬನ ಕತ್ತರಿಸುವ ಮೂಲಕ ಚಾಲನೆ ನೀಡಿದರು

ನಂತರ ಪುರಸಭೆ ಮುಖ್ಯಾಧಿಕಾರಿ ಗಳು ಮಾತನಾಡಿ ಅಂದಾಜು ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ರೈತರು, ಸಾರ್ವಜನಿಕ ರು ಸದುಪಯೋಗ ಮಾಡಿಕೊಳ್ಳಬೇಕು ಎಂದರು ಮತ್ತು 5.ರೂ 20 ಲೀಟರ್ ಹಾಗೂ ದಾರಿಹೋಕರಿಗೆ ಅನುಕಲವಾಗಲೆಂದು 1ರೂಪಾಯಿಗೆ 1ಲೀಟರ್ ಶುದ್ಧ ಕುಡಿಯುವ ನೀರು ಸಿಗುತ್ತದೆ ಎಂದು ಮಾಹಿತಿ ನೀಡಿದರು
ಈ ಸಂದರ್ಭದಲ್ಲಿ ಕೃಷ್ಣಾ ಕಲ್ಲೋಲಿಕರ ಶ್ರೀನಿವಾಸ್ ಕುಲಕರ್ಣಿ ಪರಪ್ಪ ಅವರಾದಿ ಬುಜಬಲಿ ಹರವಿ ರಾಘವೇಂದ್ರ ದೇಶಪಾಂಡೆ ಶ್ರೀಕಾಂತ್ ಚೌಗಲಾ, ವಸಂತ್ ಚೌಗಲ ಮದುಕರ ಕುಲಕರ್ಣಿ ಮಲಕಪ್ಪ ಮೂಡಸಿ ಬರತೇಶ್ ಶೇಡಬಾಳ ಶ್ರೀಶೈಲ್ ಅವರಾದಿ ಮುದಕ್ ಬಾಲರೆಡ್ಡಿ ಕುಮಾರ ಕಾಂಬ್ಳೆ ಜಯವಂತ್ ಕಲ್ಲೋಳಿಕರ ಮತ್ತಿತರು ಉಪಸ್ಥಿತರಿದ್ದರು