ಇಂದು ಬೆಳಗಾವಿಯ ಹಿಂಡಲಗಾ ಜೈಲಿಗೆ ಬೆಳಗ್ಗೆ 9.30ಕ್ಕೆ ಸಚಿವರುಗಳಾದ ಅರಗ ಜ್ಞಾನೇಂದ್ರ, ಸಚಿರಾದ ನಾಗೇಶ್, ಸುನೀಲ್ ಕುಮಾರ್, ಹಾಲಪ್ಪ ಆಚಾರ್ ಜೈಲಿಗೆ ಭೇಟಿ ನೀಡಿದ್ದಾರೆ.
ನಂತರ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ವೀರ ಸಾವರ್ಕರ ಅವರು ಹಿಂಡಲಗಾ ಜೈಲಿನಲ್ಲಿ ಇದ್ದವರು, ಅದಕ್ಕಾಗಿ ಅವರ ಭಾವಚಿತ್ರ ಅಲ್ಲಿ ಇದ್ದರೇ ತಪ್ಪೇನು ಎಂದರು..
ಜೈಲಿಗೆ ಅನಿರೀಕ್ಷಿತ ಬೇಟಿ ನೀಡಿ, ಅಲ್ಲಿ ಇರುವಂತ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದ್ದೇವೆ, ಕೈದಿಗಳ ಜೊತೆ ಮಾತನಾಡಿ ಅವರ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ, ಸುಧಾರಿಸುವ ವಿಷಯಗಳಿದ್ದರೆ ಅದರ ಬಗ್ಗೆ ಕ್ರಮ ಕೈಗೊಂಡು ಸುಧಾರಣೆ ಮಾಡುತ್ತೇವೆ ಎಂದರು…
ಗೃಹ ಸಚಿವರು ಜೈಲಿನ ರಕ್ಷಣಾ ವ್ಯವಸ್ಥೆ, ಕೈದಿಗಳ ಜೊತೆ ಸಂವಾದ, ಜೈಲಿನಲ್ಲಿ ಮೊಬೈಲ್, ಗಾಂಜಾ, ಹಾಗೂ ಮಾದಕ ವಸ್ತುಗಳ ಸರಬರಾಜು ತಡೆಯಲು ಜೈಲು ಸಿಬ್ಬಂದಿಗಳು ಕೈಗೊಂಡ ಕ್ರಮಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದ್ದಾರೆ..
ವರದಿ ರವಿ ಬಿ ಕಾಂಬಳೆ ಬೆಳಗಾವಿ
