ವಿಜ್ಞಾನ ವಿಭಾಗದಲ್ಲಿ ನೂರಕ್ಕೆ ನೂರು ಫಲಿತಾಂಶ.

Share the Post Now

ವರದಿ: ರಾಜಶೇಖರ ಶೇಗುಣಸಿ

ಮುಗಳಖೋಡ: ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬ.ನೀ.ಕುಲಿಗೋಡ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದಿದ್ದು, ಕಾಲೇಜಿನ ವಿಜ್ಞಾನ ವಿಭಾಗದ ಫಲಿತಾಂಶ ನೂರಕ್ಕೆ ನೂರರಷ್ಟು ಆಗಿದೆ. ವಾಣಿಜ್ಯ ವಿಭಾಗದಲ್ಲಿ ಶೇ 96.7%, ಶಿಕ್ಷಣ ವಿಭಾಗದಲ್ಲಿ ಶೇ. 95.52, ಕಲಾ ವಿಭಾಗದಲ್ಲಿ ಶೇ 97.43 ಆಗಿದ್ದು ಮಹಾವಿದ್ಯಾಲಯದಿಂದ ಒಟ್ಟು 247 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆದು 240 ಜನ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಒಟ್ಟು ಕಾಲೇಜಿನ ಫಲಿತಾಂಶ 97. 16ರ ರಷ್ಟಾಗಿದೆ.

ವಿಜ್ಞಾನ ವಿಭಾಗದಲ್ಲಿ ಸರಸ್ವತಿ ರಾಯಣ್ಣವರ 600 ಕ್ಕೆ 580 ಅಂಕ ಪಡೆದು ಪ್ರಥಮ , ಗೌರಿ ಈರಯ್ಯ ಕಲ್ಮಠ 566 ಅಂಕ ಪಡೆದು ದ್ವಿತೀಯ  ಹಾಗೂ ಸೌಮ್ಯ  ಕುರಾಡೆ 562 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪೂಜಾ ಕಾಗವಾಡ ನೂರಕ್ಕೆ 588 ಅಂಕ ಪಡೆದು ಪ್ರಥಮ, ರಕ್ಷಿತಾ ಅಳಗೋಡಿ 587 ಅಂಕ ಪಡೆದು ದ್ವಿತೀಯ, ಪೂಜಾ ತುಪ್ಪದ್ 585 ಅಂಕ ಪಡೆದ ತೃತೀಯ ಹಾಗೂ ಕಲಾ ವಿಭಾಗದಲ್ಲಿ ಭರಮಪ್ಪ ದಳವಾಯಿ 571 ಅಂಕ ಪಡೆದು ಪ್ರಥಮ, ಚೃತ್ರಾ ಲಮಾಣಿ  567 ಅಂಕ ಪಡೆದು ದ್ವಿತೀಯ, ಚೈತ್ರಾ ಹುಕ್ಕೇರಿ 538 ಅಂಕ ಪಡೆದ ತೃತೀಯ ಸ್ಥಾನ ಮತ್ತು ಶಿಕ್ಷಣ ವಿಭಾಗದಲ್ಲಿ ಪಲ್ಲವಿ ಹೊಸೂರ್ 524 ಅಂಕ ಪಡೆದು ಪ್ರಥಮ, ಸೌಜನ್ಯ ಮುಧೋಳ್ 519 ಅಂಕ ಪಡೆದ ದ್ವಿತೀಯ, ಭೂಮಿಕಾ ಪತ್ತಾರ್ 505 ಅಂಕ ಪಡೆದು ತೃತೀಯ ಸ್ಥಾನ ಪಡೆದು ಕಾಲೇಜನ ಕೀರ್ತಿ ಹೆಚ್ಚಿಸಿದ್ದಾರೆ.

ಒಟ್ಟು 247 ಜನ ವಿದ್ಯಾರ್ಥಿಗಳಲ್ಲಿ 51 ಜನ ಶ್ರೇಷ್ಠತೆ, 129 ಜನ ಪ್ರಥಮ ದರ್ಜೆ 52 ಜನ ದ್ವಿತೀಯ ದರ್ಜೆ, 8 ಜನ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 

ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂಜಯ್ ಕುಲಿಗೋಡ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಡಾ. ಸಿ.ಬಿ. ಕುಲಿಗೋಡ, ಉಪಾಧ್ಯಕ್ಷರಾದ ಪ್ರಕಾಶ್ ಆದಪ್ಪಗೋಳ, ಕಾರ್ಯದರ್ಶಿ ಪರಪ್ಪ ಖೇತಗೌಡರ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದದವರು ಶುಭ ಹಾರೈಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!