ಹುಕ್ಕೇರಿಯಲ್ಲಿ 11ಅಡಿ ಎತ್ತರದ ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆ ಅನಾವರಣ

Share the Post Now

ಬೆಳಗಾವಿ. ಹುಕ್ಕೇರಿ

ವರದಿ -ರವಿ ಬಿ ಕಾಂಬಳೆ

ಹುಕ್ಕೇರಿ: ತಾಲೂಕಿನ ದಲಿತ ಸಮಾಜದ ಬಹುದಿನಗಳ ಬೇಡಿಕೆ ಮತ್ತು ಕನಸಾಗಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಗೊಂಡಿತು

ಪ್ರತಿಮೆ ಸ್ಥಾಪಿಸಬೇಕುಬೇಕೆಂದು ಹಲವು ವರ್ಷಗಳ ತಾಲೂಕಿನ ದಲಿತ ಮುಖಂಡರು ಹಾಗೂ ಮಾಜಿ ಸಚಿವಾರದ ದಿವಂಗತ ಶ್ರೀ ಉಮೇಶ ಕತ್ತಿ ಇವರ ಕನಸು ಕೂಡ ಆಗಿತ್ತು

ಇಂದು ಹುಕ್ಕೇರಿಯ ಹಳೆ ದಂಡಾಧಿಕಾರಿಗಳ ಕಚೇರಿಯ ಮುಂಭಾಗದ ಆವರಣದಲ್ಲಿ 11 ಅಡಿ ಎತ್ತರದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ನೆಡೆಯಿತು

25 ಲಕ್ಷ ರೂಪಾಯಿ ವೆಚ್ಚದಲ್ಲಿ ಉದ್ಯಾನವನದ ಕಾಮಗಾರಿಯಗೆ ಮಾಜಿ ಸಂಸದ ರಮೇಶ್ ಕತ್ತಿಗುದ್ದಲಿ ಪೂಜೆಯನ್ನು ಮಾಡಿದರು

ನಂತರ ಮಾತನಾಡಿ ಹುಕ್ಕೇರಿ ಪಟ್ಟಣದಲ್ಲಿ ನಾನು ಕೇಳುತ್ತಿದ್ದೇನೆ ಒಂದು ಡಾ. ಬಾಬಾ ಸಾಹೇಬ್ ರ ಪುತ್ತಳಿ ನಿರ್ಮಾಣವಗಬೇಕೆಂದು ನನ್ನ ಸಹೋದರಾದ ದಿವಂಗತ ಉಮೇಶ್ ಕತ್ತಿಯವರ ಸತತ ಪ್ರಯತ್ನದಿಂದ ಹುಕ್ಕೇರಿ ಪಟ್ಟಣದಲ್ಲಿ ವಿವಿಧ ಮಹಾನುಭಾವರ ಪುತ್ತಳಿಗಳು ಅನಾವರಣವಾಗುತ್ತಿವೆ ಆದರೆ ಇದಕ್ಕೆ ಮೂಲ ಕಾರಣಕರ್ತರಾದ ಉಮೇಶ್ ಕತ್ತಿ ಇಂದು ನಮ್ಮೊಂದಿಗೆ ಇಲ್ಲ ಆದರೂ ಕೂಡ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ನಡೆಯೋಣ ಮತ್ತು ಚುನಾವಣೆಯ ನಂತರ ಎಲ್ಲಾ ಮಹಾನುಭಾವರ ಪುತ್ತಳಿಗಳನ್ನು ಅತಿ ವಿಜೃಂಭಣೆಯಿಂದ ಎಲ್ಲ ಸಮುದಾಯದ ಮುಖಂಡರುಗಳನ್ನು ಗಮನದಲ್ಲಿ ತೆಗೆದುಕೊಂಡು ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಎಲ್ಲ ಜನ ಸಾಮಾನ್ಯರು ಸೇರಿ ಎಲ್ಲಾ ಮಹಾನುಭಾವರ ಪುತ್ಥಳಿಗಳನ್ನು ಅನಾವರಣ ಮಾಡೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಸಮಿತಿ ಸದಸ್ಯರಾದ ಶ್ರೀ ಸುರೇಶ ತಳವಾರ.ಬಸವರಾಜ ಮಟಗಾರ.ಉದಯ ಹುಕ್ಕೇರಿ.ಮಲ್ಲಿಕಾರ್ಜನ ರಾಶಿಂಗೆ.ರಮೇಶ ಹುಂಜಿ.ಸದಾಶಿವ ಕಾಂಬಳೆ.ರಮೇಶ ತಳವಾರ.ಅಪ್ಪಣ್ಣಾ ಖಾತೇದಾರ.ಮುಂತಾದ ಗಣ್ಯ ಮಾನ್ಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!