ಬೆಳಗಾವಿ
ವರದಿ: ಸಂಜೀವ ಬ್ಯಾಕುಡೆ,
ಕುಡಚಿ :ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಹಾಗೂ ಕುಡಚಿ ಪಟ್ಟಣದ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಎರಡನೆ ಬಾರಿಗೆ 1640ನೇ ಮದ್ಯವರ್ಜನ ಶಿಬಿರ ಜರುಗುತ್ತಿದ್ದು,
ಜನೆವರಿ 13ರಿಂದ 20ರ ವರೆಗೆ ಜರುಗುತ್ತಿರುವ ಶಿಬಿರದಲ್ಲಿ ಸಮಿತಿ ಅಧ್ಯಕ್ಷ ಈಶ್ವರ್ ಗಿಣಿಮುಗೆ, ಯಲ್ಲಪ್ಪ ಶಿಂಗೆ, ಪುರಸಭೆ ಅಧ್ಯಕ್ಷ ದತ್ತಾ ಸಣ್ಣಕ್ಕಿ, ಉಪಾಧ್ಯಕ್ಷ ಹಮೀದ್ದೀನ ರೋಹಿಲೆ ಚಾಲನೆ ನೀಡಿದರು
5ನೇ ದಿನದ ಶಿಬಿರದಲ್ಲಿ ಕುಡಚಿ ಶಾಸಕ ಪಿ.ರಾಜೀವ, ಹಾಗೂ ಮತಕ್ಷೇತ್ರದ ಯುವ ಮುಖಂಡ ಮಹೇಂದ್ರ ತಮ್ಮಣ್ಣವರ ಭಾಗಿಯಾಗಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಮಹೇಂದ್ರ ತಮ್ಮಣ್ಣವರ ಮಾತನಾಡಿ ಸರಾಯಿ ಕುಡಿಯುವುದರಿಂದ ಎಷ್ಟೋ ಮನೆಗಳು ಬೀದಿ ಪಾಲಾಗಿವೆ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಒಂದು ಕುಟುಂಬ ಬೀದಿಗೆ ಬರಬಾರದು ಎನ್ನುವ ನಿಟ್ಟಿನಲ್ಲಿ ಮಧ್ಯವರ್ಜನ ಶಿಬಿರವನ್ನು ಆಯೋಜಿಸಿದ್ದು ಸರ್ಕಾರ ಮಾಡದ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಕುಡಿತದಿಂದ ಹಾಳಾಗಿ ಮಕ್ಕಳ ವಿದ್ಯಾಭ್ಯಾಸವನ್ನು ಬಿಡಿಸಬೇಡಿ ಇವತ್ತಿನ ದಿನಮಾನಗಳಲ್ಲಿ ಶಿಕ್ಷಣವೇ ಮುಖ್ಯ ನಿಮ್ಮ ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿ ತೊಂದರೆಗಳಿದ್ದರೆ ನನ್ನನ್ನು ನೇರವಾಗಿ ಸಂಪರ್ಕಿಸಿ ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಎಂದರು.
ಶಾಸಕ ಪಿ.ರಾಜೀವ ಮಾತನಾಡಿ ದೊಡ್ಡ ಮನೆಯಲ್ಲಿ ಇಲ್ಲದೆ ಇರಬಹುದು ಗುಡಿಸಿಲಿನಲ್ಲಿ ಚಾಪೆ ಮೇಲೆ ಮಲಗಿರುವ ಸುಖ ಯಾವುದರಲ್ಲಿ ಇಲ್ಲ ಇಲ್ಲಿಯವರೆಗೆ ನಿಮಗಾಗಿ ಬದುಕಿದಿರಿ ಇನ್ನೂ ನಿಮ್ಮ ತಂದೆ ತಾಯಿ ಮಕ್ಕಳಿಗಾಗಿ ಹೆಂಡತಿಗಾಗಿ, ಇನ್ನೊಬ್ಬರಿಗಾಗಿ ಬದುಕುವುದು ಖುಷಿ ಕೊಡುತ್ತದೆ ನಿಮ್ಮ ಹೆಂಡತಿ ಮಕ್ಕಳು ಎಷ್ಟು ಬಾರಿ ನೀವು ವಾಂತಿ ಮಾಡಿದಾಗ ಸ್ವಚ್ಛಗೊಳಿಸಿದ್ದಾರೆ ಅದನ್ನು ನೆನೆಯಿರಿ ಇನ್ನಾದರೂ ಬೇರೆಯವರಿಗಾಗಿ ಬದುಕಿ ಇನ್ನೊಬ್ಬರಿಗೆ ನೋವು ಮಾಡದೆ ಬದುಕತಿರಲ್ಲ ಅದು ಬದುಕು ಎಂದರು.
ಈ ಸಂದರ್ಭದಲ್ಲಿ ನಾಗರತ್ನ ಹೆಗಡೆ, ಕಿರಣ ಎಸ. ಉಮೇಶ ದೇಶನುರ, ಸಾಹಿತಿ ಟಿ.ಎಸ.ವಂಟಗೂಡೆ, ರಾಮು ಕಿಲಾರಿ, ಮಹಾವೀರ್ ಚಂಡಿಕೆ, ಡಾ.ಸಚೀನ ಮನಗುತ್ತಿ, ಶಿವಾನಂದ ಲಕ್ಕನಗಾಂವ, ಶ್ಯಾಮು ಮನಗುತ್ತಿ, ಶೇಖರ್ ದಳವಾಯಿ, ಸಂಜೀವ ಬ್ಯಾಕುಡೆ ಇತರರು ಭಾಗಿಯಾಗಿದ್ದರು