ಮುಗಳಖೋಡದ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆಯ 18 ನೆಯ ವಾರ್ಷಿಕ ಸ್ನೇಹ ಸಮ್ಮೇಳನ

Share the Post Now

ಬೆಳಗಾವಿ

ಮುಗಳಖೋಡ :ಸನ 2022-23 ನೆಯ ಸಾಲಿನ ಹಿರಿಯ ಪ್ರಾಥಮಿಕ ಶಾಲೆ ಮುಗಳಖೋಡ ಇದರ 18 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 8 ನೆಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ. ಇವತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅದ್ದೂರಿಯಾಗಿ ನಡೆಯಿತು. ಮಕ್ಕಳ ಮನರಂಜನೆ ಕಾರ್ಯಕ್ರಮಗಳನ್ನು ನೋಡಿ ಎಲ್ಲಾ ಪಾಲಕರು ಮತ್ತು ಊರಿನ ನಾಗರಿಕರು ಕನ್ನುತುಂಬಿಕೊಂಡರು. ಇದರ ಅದಕ್ಷತೆಯನ್ನು ಸಂಸ್ಥೆಯ ಅದ್ಯಕ್ಷ ಶ್ರೀ ಸುರೇಶ್ ಜಿ ಜಂಬಗಿ ಅವರು ವಹಿಸಿದ್ದರು. ಮತ್ತು ಹಿಪ್ಪರಗಿಯ ಇಂಚಗೇರಿಯ ಪ್ರಭು ಬೆನ್ನಾಲಿ ಮಹಾರಾಜರು ಕೂಡ ಆಗಮಿಸಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಆಶೀರ್ವಚನ ಮಾಡಿದರು. ಮುಖ್ಯ ಅತಿಥಿಗಳಾಗಿ ವಡೆರಹಟ್ಟಿ ಪಿ ಯು ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ವಿಠ್ಠಲ ಜೋಡಟ್ಟಿ ಅವರು ಮಾತನಾಡಿ ಆದರ್ಶ ಶಾಲೆ ಹೆಸರಿಗೆ ತಕ್ಕ ಹಾಗೆ ಮಕ್ಕಳಲ್ಲಿ ಆದರ್ಶ ಗುಣಗಳನ್ನು ಬೆಳೆಸುವ ಸಂಸ್ಥೆ ಆಗಿದ್ದು ಮಕ್ಕಳಲ್ಲಿ ಸಂಸ್ಕಾರ ದೀಕ್ಷೆ ಬೆಳೆಸುವ ಏಕೈಕ ಸಂಸ್ಥೆ ಮತ್ತು ಮಕ್ಕಳಿಗೆ ಒಳ್ಳೆಯ ಕೌಶಲ್ಯ ಬೆಳೆಸುವ ಶಾಲೆ ಆದರ್ಶ ಶಾಲೆ ಎಂದು ತಿಳಿಸಿದರು.
ರಾಯಬಾಗ ಶಿಕ್ಷಣ ಸಂಯೋಜಕರಾದ ಶ್ರೀ ಶ್ರೀಕಾಂತ ಕಂಬಾರ ಅವರು ಮಾತನಾಡಿ ಅದ್ಬುತ ಕಾರ್ಯಕ್ರಮದ ಆಯೋಜನೆ ಮಾಡಿ ಮೂರು ಮಕ್ಕಳಿಂದ ಪ್ರಾರಂಭವಾದ ಶಾಲೆ ಇವತ್ತು 500 ಮಕ್ಕಳನ್ನು ಹೊಂದಿದೆ ಮತ್ತು ಮಕ್ಕಳಿಗೆ ಒಳ್ಳೆಯ ಆದರ್ಶ ಬೆಳೆಸಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಏಕೈಕ ಶಾಲೆ ಇದು ಆದರ್ಶ ಶಿಕ್ಷಣ ಸಂಸ್ಥೆ ಎಂದು ತಿಳಿಸಿದರು. ಮತ್ತು ಮುಗಳಖೋಡದ ಸಮೂಹ ಸಂಯೋಜಕರಾದ ಶ್ರೀ ಬೀರಪ್ಪ ಬಾಗೆನ್ನವರ್ ಕೂಡ ಬಾಗವಹಿಸಿದ್ದರು.
ಈ ಕಾರ್ಯಕ್ರಮದ ಆಯೋಜನೆಯನ್ನು ಶಿಕ್ಷಣ ಪ್ರೇಮಿ ಶ್ರೀಕಾಂತ ಖೆತಗೌಡರ ಹಾಗೂ ಅವರ ಬಳಗ ಕಣ್ಣು ಕುಕ್ಕುವಂತೆ ಮಾಡಿದ್ದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಅಶೋಕ್ ಕೊಣ್ಣೂರ ಅವರು ನಡೆಸಿಕೊಟ್ಟು ವಂದನಾರ್ಪಣೆ ಯನ್ನು ಶಾಂತಿನಾಥ ಮೇಕನಮರಡಿ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಊರಿನ ಗಣ್ಯರಾದ ಶಿವಲಿಂಗ ಯರದೆತ್ತಿ, ಕೆಂಪಣ್ಣ ಮುಶಿ,ಸಂಗಪ್ಪ ಜಂಬಗಿ, ಅಗ್ರಾನಿ ಶೇಗುಣಸಿ,ಗೌಡಪ್ಪ ಖೆತಗೌಡರ್, ಮಹಾಂತೇಶ್ ಯೇರದೇತ್ತಿ, ರಾಜು ನಾಯಿಕ,ಲಕ್ಷಣ ಮುನ್ಯಾಲ, ಶ್ರೀ ಶಿವವಸು ಕಾಪಶಿ,ಸದಾಶಿವ ಉಪಸ್ಥಿತರಿದ್ದರು.


ವರದಿ:- ರಾಜಶೇಖರ ಶೇಗುಣಸಿ.

Leave a Comment

Your email address will not be published. Required fields are marked *

error: Content is protected !!