ಬೆಳಗಾವಿ.
ರಾಯಬಾಗ ತಾಲೂಕೀನ ಪರಮಾನಂದವಾಡಿ ಗ್ರಾಮದಲ್ಲಿ ದಿನಾಂಕ 01/04/2024ರಿಂದ 09/04/2024 ರವರೆಗೆ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ನಡೆಯುವ ಯುಗಾದಿ ಮಹೋತ್ಸವ 2024 ಹಾಗೂ ಶ್ರೀ ಗುರುದೇವ ಬ್ರಹ್ಮಾನಂದ ಮಹಾಶಿವಯೋಗಿಗಳರವರ 48 ನೇಯ ಹಾಗೂ ಶ್ರೀ ಗುರುದೇವ ಸಿದ್ದೇಶ್ವರ ಮಹಾಶಿವಯೋಗಿಗಳರವರ 18 ನೇಯ ಮಹಾಸಮಾಧಿ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಸುದ್ದಿಗೋಷ್ಠಿಯನ್ನು ಶ್ರೀ ಮಠದ ಪಿಠಾಧಿಪತಿ ಡಾ. ಅಭಿನವ ಬ್ರಹ್ಮಾನಂದ ಸ್ವಾಮೀಜಿ ನಡೆಸಿದರು
ಸೋಮವಾರ ದಿನಾಂಕ 01/04/2024ರಂದು ಬೆಳಗ್ಗೆ 6ಗಂಟೆಗೆ ಪರಮಪೂಜ್ಯ ಶ್ರೀ ಗುರುದೇವರ ಕತೃಗದ್ದುಗೆಗೆ, ಮಹಾಲಕ್ಷ್ಮಿ ದೇವಿ ಹಾಗೂ ಪರಮಾನಂದ ದೇವರಿಗೆ ಪಂಚಾಮೃತ ಅಭಿಷೇಕ್ ಮಹಾಪೂಜೆ ಮಂಗಳಾರತಿ ಕಾರ್ಯಕ್ರಮ ಜರುಗುವುದು ಪ್ರತಿ ದಿನ ಬೆಳಗ್ಗೆ 7ರಿಂದ ಎಂಟು ಗಂಟೆಯವರೆಗೆ ಧ್ಯಾನ ಯೋಗದ ಕುರಿತು ಆಶ್ರಮದ ಪೂಜ್ಯರು ಹಾಗೂ ಪಿಎಸ್ಎಸ್ಎಮ್ ಧ್ಯಾನ ಬಂದುಗಳಿಂದ ಪ್ರವಚನ ಕಾರ್ಯಕ್ರಮ ನಡೆಯುವುದು ಹಾಗೆಯೇ ಪ್ರತಿದಿನ ಸಾಯಂಕಾಲ 6 ಗಂಟೆಯಿಂದ ಏಳು ಗಂಟೆವರೆಗೆ ಬಜನಾ ಸಂಗೀತ ಕಾರ್ಯಕ್ರಮ ಇರುವುದು ಮತ್ತು ಪ್ರತಿ ದಿನ ಸಾಯಂಕಾಲ 7ರಿಂದ 9ರವರೆಗೆ ಶರಣರ ಜೀವನ ದರ್ಶನ ಕುರಿತು ಆಶ್ರಮದ ಪೂಜ್ಯರ ಹಾಗೂ ಚಿಂತನ ಶೀಲ ಶರಣರಿಂದ ವಿಚಾರಗೋಷ್ಠಿ ನಡೆಯುವುದು ಇನ್ನು ಜಾತ್ರೆಯ ಅಂತಿಮ ದಿನವಾದ 9.4.2024 ಮಂಗಳವಾರ ಬೆಳಗ್ಗೆ 9:00 ರಿಂದ 12.30ವರೆಗೆ ಪ್ರವಚನ ಇರುತ್ತದೆ ಅಂದು ಸಾಯಂಕಾಲ 4:30ಕ್ಕೆ ಪರಮಪೂಜ್ಯ ಶ್ರೀ ಗುರುದೇವರ ಭಾವಚಿತ್ರದ ಪಲ್ಲಕ್ಕಿ ಮಹೋತ್ಸವವು ಸುಮಂಗಲರಿಂದ ಕುಂಭ ಆರತಿ ಜಾನಪದ ಸಾಂಸ್ಕೃತಿಕ ಕಲಾತಂಡಗಳ ಸಕಲ ವಾದ್ಯ ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಬರುವುದು ನಂತರ ಸಾಯಂಕಾಲ 6:30 ರಿಂದ 7:30ರ ವರೆಗೆ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜಗುರುದಿರುವುದು ಸಾಯಂಕಾಲ 7:30 ರಿಂದ ರಾತ್ರಿ 10.30 ರವರೆಗೆ ಪ್ರವಚನ ಕಾರ್ಯಕ್ರಮ ನಂತರ ಮಹಾಮಂಗಳಾರತಿ ಯೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸುವುದು
ಈ ಕಾರ್ಯಕ್ರಮ ದಲ್ಲಿ ದಿವ್ಯ ಸಾನಿಧ್ಯ ವನ್ನು ಗದಗ ಶ್ರೀ ಜಗದ್ಗುರು ಶಿವಾನಂದ ಬ್ರಹ್ಮನ್ಮಠ ಪ. ಪೂಜ್ಯ ಶ್ರೀ ಮಜ್ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ ಇನ್ನೂ ಕಾರ್ಯಕ್ರಮಕ್ಕೆ ಹಲವಾರು ಸ್ವಾಮಿಜಿಗಳು ಗಣ್ಯರು,ಸ್ಥಳಿಯರು ಉಪಸ್ಥಿತರಿರುವರು ಎಂದುರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಪದ್ಮಣ್ಣಾ ಮಿರ್ಜೆ ಸದಸ್ಯ ದೀಲಿಪ್ ಗಂಡೂಶಿ ,ಸ್ಥಳಿಯರಾದ ಸದಾಶಿವ ವಾಳಕೆ,ಇನ್ನೂ ಹಲವಾರು ಜನರು ಕಾರ್ಯಮದಲ್ಲಿ ಭಾಗಿಯಾಗಿದ್ದರು