ಕೋಟಬಾಗಿ ಗ್ರಾಮದಲ್ಲಿ 205ನೇ ಭೀಮಕೋರೇಗಾಂವ ವಿಜಯೋತ್ಸವ ಆಚರಿಸಲಾಯಿತು

Share the Post Now

ಬೆಳಗಾವಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಇಂದು ಬೀಮಾಕೋರೆಗಾಂವ 205ನೇ ವಿಜಯೋತ್ಸವನ್ನು ಆಚರಿಸಲಾಯಿತು

ಎಸ್ ಸಿ ಮತ್ತು ಎಸ್ ಟಿ ದೌರ್ಜನ್ಯ ತಡೆ ಸಮಿತಿ ಸದಸ್ಯರಾದ ಸುರೇಶ ತಳವಾರ ಹಾಗೂ ರಮೇಶ ಹುಂಜಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ನಮ್ಮ ಪೂರ್ವಜರು ಅಂದು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಪೇಶ್ವಿಗಳ ವಿರುದ್ಧ ಯುದ್ಧ ಮಾಡಿ ಗೆದ್ದಿರುವ ದಿನವನ್ನು ಭೀಮಾ ಕೋರೆಗಾಂವ ಎಂದು ನಾವು ಇಂದು ಆಚರಿಸುತ್ತಾ ಇದ್ದೇವೆ ಹಾಗಾಗಿ ನಮ್ಮ ಪೂರ್ವಜರು ಯಾವ ರೀತಿ ತಮ್ಮ ಪ್ರಾಣದ ಹಂಗವನ್ನು ಪಣಕ್ಕಿಟ್ಟು ಹೋರಾಡಿದರು ಅದೇ ರೀತಿ ಇಂದು ನಾವು ನಮ್ಮ ಸಮಾಜದ ಒಳಿತಿಗಾಗಿ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಶ್ರೀ ಬಸವಚೇತನ ದೇವರು ಹೆಬ್ಬಾಳ.ಸುರೇಶ ತಳವಾರ.ರಮೇಶ ಹುಂಜಿ.ಸಂತೋಷ ಘಸ್ತಿ.ದೀಪಕ ವಿರಮುಖ . ರಾಜೇಂದ್ರ ಮೋಸಿ.ಮಾರುತಿ ತಳವಾರ.ದಯಾನಂದ ತಳವಾರ.ಅಪ್ಪಣ್ಣಾ ಖಾತೇದಾರ.ಗ್ರಾಮದ ಎಲ್ಲಾ ದಲಿತ ಮುಖಂಡರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ ರವಿ ಬಿ ಕಾಂಬಳೆ ಹುಕ್ಕೇರಿ

Leave a Comment

Your email address will not be published. Required fields are marked *

error: Content is protected !!