ಹಳ್ಳೂರ
ವರದಿ ಮುರಿಗೆಪ್ಪ ಮಾಲಗಾರ
ಹಳ್ಳೂರ.
ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘದ ದಿ 22 ರಂದು ನಡೆಯಲಿರುವ ಪಂಚವಾರ್ಷಿಕ ಚುನಾವಣೆಯಲ್ಲಿ ಒಟ್ಟು 23 ಜನ ನಾಮಪತ್ರ ಸಲ್ಲಿಸಿದ್ದಾರೆ. ಪರಿಶಿಷ್ಟ ಜಾತಿಯ ವರ್ಗದಲ್ಲಿ ರಾಜು ತಳವಾರ ಅವಿರೋಧ ಆಯ್ಕೆಯಾಗಿದ್ದಾರೆ. ಮಂಗಳವಾರದಂದು ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದೇವಿಗೆ ಎರಡು ಪೆನಾಲದವರು ಪೂಜೆ ಸಲ್ಲಿಸಿ ಬ್ಯಾಲೆಡ ಪತ್ರಿಕೆ ಬಿಡುಗಡೆಗೊಳಿಸಿದರು. ನಂತರ ಎರಡು ಪೆನಲದವರು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ವರ್ಷಕ್ಕಿಂತ ಈ ವರ್ಷ ಬಾರಿ ತೀವ್ರ ಪೈಪೋಟಿ ನಡೆಯುವ ಸಾಧ್ಯತೆಯಿದೆ. ಒಳಒಳಗೆ ಗುಂಪು ಸಭೆ ನಡೆಸಿ ನಮ್ಮ ಪೆನಲದವರನ್ನು ಗೆಲ್ಲಿಸಬೇಕೆಂದು ಶತ ಪ್ರಯತ್ನ ನಡೆದಿದೆ ಇದರಲ್ಲಿ ಯಾರ ಪ್ರತಿಷ್ಠೆ ಜನ ಬೆಂಬಲ ಮತ್ತೇನೆನು ಅವಲಂಬಿಸಿ ಯಾರ ಕೈ ಹಿಡಿದು ಮೇಲುಗೈ ಸಾಧಿಸುತ್ತಾರೆಂದು ಕಾದು ನೋಡಬೇಕಾಗಿದೆ.
ಸಾಲಗಾರ ಸಾಮಾನ್ಯ ಸ್ಥಾನಕ್ಕೆ ಗಿರಮಲ್ಲಪ್ಪ ಕೌಜಲಗಿ. ಸುರೇಶ ಕತ್ತಿ. ಹನಮಂತ ತೇರದಾಳ.ಚಂದ್ರಶೇಖರ ಸಪ್ತಸಾಗರ. ಮಹೇಶ ಸಂತಿ. ಕಾಂತು ಲೋಕನ್ನವರ. ರಮೇಶ ಲೋಕನ್ನವರ. ಹೊಳೆಪ್ಪ ಪಾಲಬಾಂವಿ. ಗುರುನಾಥ ಬೋಳನ್ನವರ. ಯಾದಪ್ಪ ನಿಡೋಣಿ. ಮಹಾವೀರ ಛಬ್ಬಿ. ಸಾಲಗಾರ ಹಿಂದುಳಿದ ಅ ವರ್ಗ ಸ್ಥಾನಕ್ಕೆ ಬಸಪ್ಪ ದುರದುಂಡಿ. ತುಕಾರಾಮ ಕುರಬರ,ಸನದಿ. ಸಾಲಗಾರ ಹಿಂದುಳಿದ ಬ ವರ್ಗ ಸ್ಥಾನಕ್ಕೆ ಪುಂಡಲೀಕ ಹೊಸಟ್ಟಿ. ಬಾಳಪ್ಪ ನೆಸುರ. ಸಾಲಗಾರ ಮಹಿಳಾ ಮಹಿಳಾ ಸ್ಥಾನಕ್ಕೆ ರತ್ನವ್ವ ಕೌಜಲಗಿ. ಸುವರ್ಣಾ ಪಾಲಬಾಂವಿ. ನೀಲವ್ವ ಕೌಜಲಗಿ. ಕಲಾವತಿ ಲಿಂಗದ. ಸಾಲಗಾರ ಪರಿಶಿಷ್ಟ ಜಾತಿ ಚಂದ್ರಕಾಂತ ಮಾವರಕರ. ರೇವಪ್ಪ ಸಿಂಪಿಗೇರ.
ಬಿನ ಸಾಲಗಾರ ಸ್ಥಾನಕ್ಕೆ ಸುರೇಶ ಡಬ್ಬನ್ನವರ.ಬಾಳಪ್ಪ ಶಿವಾಪೂರ. ಒಟ್ಟು 23 ಜನ ಚುನಾವಣಾ ಕಣದಲ್ಲಿ ಉಳಿದು ಸ್ಪರ್ಧೆ ಮಾಡುತ್ತಿದ್ದಾರೆ. ಎಂದು ಚುಣಾವಣೆ ರಿಟರ್ನಿಂಗ ಅಧಿಕಾರಿ ಪಿ ವಾಯ್ ಕೌಜಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.