ಬೆಳಗಾವಿ. ರಾಯಬಾಗ
ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಸಮೀಪ ಬೆಳಗ್ಗೆ 10=30 ನಿಮಿಷಕ್ಕೆ ಕುಡಚಿ- ಹಾರೂಗೇರಿ ಮುಖ್ಯ ರಸ್ತೆಯ ಹಾಲಶಿರಗೂರ ಕ್ರಾಸ್ ಬಳಿ ಬಸ್ ಹಾಗೂ ಸೈಕಲ್ ಮೋಟಾರ್ ನಡುವೆ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ರಾಯಬಾಗ ತಾಲೂಕಿನ ಹಾಲಶಿರಗೂರ ಗ್ರಾಮದವರಾದ ಭಗವಂತ ಶಿವರಾಯಿ ಕಾಂಬಳೆ (39), ವಿಶ್ವನಾಥ ಶ್ರೀಪತಿ ಕಾಂಬಳೆ (24,) ಹಾಗೂ ಕುಮಾರ ಬಹುಸಾಬ ಕಾಂಬಳೆ (24) ಎಂಬ ಮೂವರು ವ್ಯಕ್ತಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಕುರಿತು ಪ್ರಕರಣ ಕುಡಚಿ ಪೋಲೀಸ್ ಠಾಣೆಯಲ್ಲಿ ನಡೆದಿದ್ದು ತನಿಖೆ ನಡೆಯುತ್ತಿದೆ.
ವರದಿ: ಸಂಜೀವ ಬ್ಯಾಕುಡೆ ಕುಡಚಿ