ಸಮೀರವಾಡಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ 3000 ದರ ಘೋಷಣೆ

Share the Post Now

ಬಾಗಲಕೋಟ.ಸಮೀರವಾಡಿ ಗೋದಾವರಿ ಬಯೋರಿಪೈನರೀಜ್ ಲಿಮಿಟೆಡ್, ಸಕ್ಕರೆ ಕಾರ್ಖಾನೆಯ ಪ್ರಸಕ್ತ 2024-25 ನೇ ಸಾಲಿನ ಕಬ್ಬು ನುರಿಸುವ  ಹಂಗಾಮಿನ ಪ್ರಾರಂಭೋತ್ಸವ ಸಮಾರಂಭವು ಶನಿವಾರ ಮುಂಜಾನೆ ಶುಭ ಮುಹೂರ್ತದಲ್ಲಿ ಹೋಮ ಹವನ ವಿಶೇಷ ಪೂಜೆ ಶಾಸ್ತ್ರೋಕ್ತವಾಗಿ  ನೆರವೇರಿಸಿ ಕೇನ್ ಕ್ಯಾರಿಯರ್ ದಲ್ಲಿ ಕಬ್ಬು ಹಾಕಿ ರೈತ ಬಾಂಧವರು, ಆಡಳಿತ ಮಂಡಳಿಯ ಯವರು ಚಾಲನೆ ನೀಡಿದರು. ಕಾರ್ಖಾನೆಯ ನಿರ್ದೇಶಕರಾದ ಬಿ ಆರ್ ಬಕ್ಷಿ ಮಾತನಾಡಿ ರೈತ ಬಾಂಧವರು ಪ್ರಸಕ್ತ ಸಾಲಿನಲ್ಲಿ ಅತೀ ಹೆಚ್ಚು ಹಾಗೂ ಒಳ್ಳೆಯ ಗುಣಮಟ್ಟದ ಕಬ್ಬು ಕಾರ್ಖಾನೆಗೆ ಪೂರೈಸಿಸುತ್ತಿರಿ ಎಂಬ ನಂಬಿಕೆ ಇದೆ. ರೈತರ ವಿಶ್ವಾಸವುಳ್ಳ ಕಾರ್ಖಾನೆ ಇದಾಗಿದ್ದು ರೈತರ ಸಹಕಾರದಿಂದ ಉತ್ತಮವಾಗಿ ನಡೆಯುತ್ತಿದ್ದು ಈ ಹಂಗಾಮಿಗೆ  28 ಲಕ್ಷ ಟನ್ ಕಬ್ಬು ನುರಿಸುವ ಗುರಿಯನ್ನು ಹೊಂದಿದ್ದೇವೆ. ಪ್ರಸಕ್ತ ಸಾಲಿನ ಪ್ರತಿ ಟನ್ ಕಬ್ಬಿಗೆ ಬೆಲೆ 3000/-  ನೀಡುತ್ತೇವೆ ಎಂದು ಘೋಷಣೆ ಮಾಡಿದರು. ರೈತರು ಬೆಳೆದ ಕಬ್ಬಿಗೆ ಯಾವುದೆ ರೀತಿಯ ಲಗಾನಿ ಇನ್ನಿತರ ತೊಂದರೆ ಆಗದಂತೆ ಸಿಬ್ಬಂದಿಗಳು ಜಾಗೃತ ವಹಿಸಬೇಕೆಂದು ಹೇಳಿದರು.    

                  2024-25 ನೇ ಹಂಗಾಮಿನಲ್ಲಿ ನಿವೃತ್ತಿ ಆಗುತ್ತಿರುವ 18 ಕಾರ್ಮಿಕರಿಗೆ ಸವಿನೆನಪು ಕಾಣಿಕೆ ನೀಡಿ ಸನ್ಮಾನ ನೆರವೇರಿಸಿದರು. ಈ ಸಮಯದಲ್ಲಿ ಕಾರ್ಖಾನೆಯ ಮುಖ್ಯ ತಾಂತ್ರಿಕ ಅಧಿಕಾರಿ ದಿನೇಶ ಶರ್ಮಾ. ಇಂಜಿನಿಯರ ಜಿ ಎಂ ವಿ ಕೆ ಕಿಲಾರಿ. ಕೇನ ಜಿ ಎಂ ವಿ ಎನ್ ಕಣಬೂರ. ಡಿ ಜಿ ಎಂ ಅಮಿತ್ ತ್ರಿಪಾಠಿ. ಕೆ ಐ ಎ ಎ ಆರ್, ಕುಂಚಗೆ, ಎ ಜಿ ಎಂ ಪಿ ಎ ಮತ್ತು ಐ ಆರ್ ಎಂ ರಾಮಚಂದ್ರ. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ.ಕಾರ್ಯದರ್ಶಿ  ರಂಗನಗೌಡ ಪಾಟೀಲ. ಕಿಶೋರ್ ಮಸೂರಕರ್, ಡಾ.ಮಾಧವ್ ಬಕ್ಷಿ.  ಮಜದೂರ ಯುನಿಯನ್ ಅಧ್ಯಕ್ಷ ಬಸವರಾಜ ಪೂಜೇರಿ.  ಬಸವರಾಜ್ ಬದ್ರಶೇಟ್ಟಿ. ಆರ್  ವಿ ಸೋನವಾಲ್ಕರ.  ಆನಂದ ಕೋಟಬಾಗಿ, ತಮ್ಮಣ್ಣ ನಾಯಿಕ. ಶಿವನಗೌಡ ಪಾಟೀಲ. ಮಹಾಲಿಂಗ ಸನದಿ. ಲಕ್ಷ್ಮಣ ಕೂಡಲಗಿ.ವಿ ಪಿ ಕಣವಿ. ಕೆ ವಿ ಗೌಡರ. ಬಸು ಮೇಲಪ್ಪಗೋಳ. ನಾಗಪ್ಪ ಮಾಳಿ. ಮನೋಹರ ಬಡಿವಾಳ. ಚನ್ನಪ್ಪ ಅಥಣಿ.ಭೀಮಶಿ ಮಗದುಮ.ಹನಮಂತ ತೇರದಾಳ ವಿನೋದ ಕಮತೆ. ರವಿ ಕೂರಬರ ಮುರಿಗೆಪ್ಪ ಮಾಲಗಾರ.ಸಂಗನಗೌಡ ಪಾಟೀಲ.ಕಲ್ಲಪ್ಪ ವಾಜೆಂತ್ರಿ.ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು, ಮಹಿಳಾ ಮಂಡಳ ಹಾಗೂ ಕಾರ್ಮಿಕ ಬಾಂಧವರಿದ್ದರು. ಹೋಮ ಹವನ ಪೂಜಾ ಕಾರ್ಯಕ್ರಮದಲ್ಲಿ ನಿರ್ಮಲಕುಮಾರ ಜಾ. ಪುಂಡಲೀಕ ಬಾಗೇವಾಡಿ.ದಂಪತಿಗಳು ಭಾಗಿಯಾಗಿದ್ದರು.

Leave a Comment

Your email address will not be published. Required fields are marked *

error: Content is protected !!