ಭಾರತದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ. ನರೇಂದ್ರ ಮೋದಿಜಿ ಅವರು ರಾಷ್ಟçವ್ಯಾಪಿ ಅಭಿವೃದ್ಧಿ ಕಾರ್ಯಗಳಿಗೆ ದಿನಾಂಕ : 20-02-2024ರಂದು ಜಮ್ಮುವಿನಲ್ಲಿ 3,600 ಕೋಟಿ ರೂಪಾಯಿಗಳ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೂ ಉಚ್ಛತರ ಶಿಕ್ಷಾ ಅಭಿಯಾನ ಯೋಜನೆಯಡಿಯಲ್ಲಿ ಶತಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವರು.
ರಾಷ್ಟçವ್ಯಾಪಿ ನಡೆದ ಈ ಕಾರ್ಯಕ್ರಮದಲ್ಲಿ ಈ ಯೋಜನೆಯ ಫಲಾನುಭವಿ ಸಂಸ್ಥೆಗಳೆಲ್ಲವೂ ಆನ್‌ಲೈನ್ ಮೂಲಕ ಸಮಾವೇಶಗೊಂಡಿದ್ದವು. ಜಮ್ಮುವಿನಿಂದ ನೇರ ಪ್ರಸಾರಗೊಂಡ ಈ ಕಾರ್ಯಕ್ರಮವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ಅವುಗಳ ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ಏಕಕಾಲಕ್ಕೆ ಪ್ರಸಾರ ಮಾಡಲಾಯಿತು. ಇದರ ಪ್ರಮುಖ ಸಮಾರಂಭವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಸಮಾವೇಶಗೊಂಡಿತ್ತು.
ಕೇAದ್ರ ಕಲ್ಲಿದ್ದಲು ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಸನ್ಮಾನ್ಯ ಶ್ರೀ.ಪ್ರಹ್ಲಾದ ಜೋಶಿ ಅವರು ಭಾಗವಹಿಸುವುದರ ಮೂಲಕ ವಿಶ್ವವಿದ್ಯಾಲಯದ ಬಹುದೊಡ್ಡ ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದ ಮಹತ್ವದ ಶೈಕ್ಷಣಿಕ ಕೇಂದ್ರವಾಗಲಿದ್ದು, ಅದಕ್ಕಾಗಿ ಶತಕೋಟಿ ರೂಪಾಯಿಗಳನ್ನು ವಿಶ್ವವಿದ್ಯಾಲಯಕ್ಕೆ ಮಂಜೂರು ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು. ಯುವಜನರೇ ಅಧಿಕವಾಗಿರುವ ಭಾರತದಲ್ಲಿ ಉನ್ನತ ಶಿಕ್ಷಣವನ್ನು ರಚನಾತ್ಮಕವಾಗಿ ಕಟ್ಟುವುದು ಭಾರತ ಸರ್ಕಾರದ ಆಲೋಚನೆಯಾಗಿದೆ ಎಂದರು.
ಪ್ರಧಾನಿಯವರ ಅಭಿವೃದ್ಧಿ ಸೂತ್ರವಾದ ‘ಇದೇ ಸಮಯ, ಸರಿಯಾದ ಸಮಯ, ಭಾರತದ ಅತ್ಯಮೂಲ್ಯ ಸಮಯ’, ಈ ಸಂದರ್ಭದಲ್ಲಿಯೇ ನಮ್ಮ ಯುವ ಜನತೆಗೆ ಭಾರತದ ಭವಿಷ್ಯದ ಕಲ್ಪನೆಯು ಉತ್ಕೃಷ್ಟತೆಯ ಉತ್ತುಂಗದ ಕನಸನ್ನು ನನಸಾಗಿಸುವುದು ಭಾರತದ ಸರ್ಕಾರದ ಸತ್ಸಂಸಕಲ್ಪವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಹಾಜರಿದ್ದ ಬೆಳಗಾವಿಯ ಸಂಸದರಾದ ಸನ್ಮಾನ್ಯ ಶ್ರೀಮತಿ. ಮಂಗಳಾ ಸುರೇಶ ಅಂಗಡಿ ಅವರು ಮಾತನಾಡಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ನಮ್ಮ ನಾಡಿನ ಯುವಕರ ಭವಿಷ್ಯವನ್ನು ನಿರ್ಮಿಸಲು ಹಾಗೂ ಜ್ಞಾನಕ್ಷೇತ್ರವನ್ನು ಸಂವರ್ಧನೆಗೊಳಿಸಲು ಪ್ರಧಾನ ಮಂತ್ರಿಗಳು ಶತಕೋಟಿ ಅನುದಾನವನ್ನು ನೀಡಿರುವುದು ಸಮಯೋಚಿತವಾಗಿದೆ ಎಂದರು. ಚಿಕ್ಕೋಡಿ ಮತಕ್ಷೇತ್ರದ ಸಂಸತ ಸದಸ್ಯರಾದ ಸನ್ಮಾನ್ಯ ಶ್ರೀ. ಅಣ್ಣಾಸಾಹೇಬ ಜೊಲ್ಲೆ ಉಪಸ್ಥಿತರಿದ್ದರು.
ವಿಶ್ವವಿದ್ಯಾಲಯದ ಸುಮಾರು ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳ ಸಂಯೋಜಿತ ಕಾಲೇಜುಗಳಿಂದ ನೇರ ಪ್ರಸಾರದಲ್ಲಿ ಭಾಗಿಯಾಗಿದ್ದರು. ವಿಶ್ವವಿದ್ಯಾಲಯದ ಈ ಕಾರ್ಯಕ್ರಮವನ್ನು ವೀಕ್ಷಿಸಿದ ಕುಲಪತಿಗಳಾದ ಪ್ರೊ. ವಿ.ಎಫ್. ನಾಗಣ್ಣವರ, ಕುಲಸಚಿವರಾದ ಶ್ರೀಮತಿ. ರಾಜಶ್ರೀ ಜೈನಾಪೂರ, ಕುಲಸಚಿವರು(ಮೌಲ್ಯಮಾಪನ) ಪ್ರೊ. ರವೀಂದ್ರನಾಥ ಕದಂ, ಹಣಕಾಸು ಅಧಿಕಾರಿಗಳಾದ ಪ್ರೊ. ಎಸ್. ಬಿ.ಆಕಾಶ ಮಾತ್ರವಲ್ಲ ಸಾರ್ವಜನಿಕರು ಮತ್ತು ಹಲವು ಸ್ಥಾನಿಕ ಸಂಸ್ಥೆಗಳ ಜನಪ್ರತಿನಿಧಿಗಳು ವಿಶ್ವವಿದ್ಯಾಲಯದಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ವಿಶ್ವವಿದ್ಯಾಲಯದ ಪರವಾಗಿ ಕೇಂದ್ರ ಸಚಿವರನ್ನು ಹಾಗೂ ಬೆಳಗಾವಿಯ ಸಂಸದರನ್ನು ಸನ್ಮಾನಿಸಲಾಯಿತು. ಪ್ರಮುಖ ವೇದಿಕೆಯೊಂದಿಗೆ ಮೂರು ಎಲ್.ಸಿ.ಡಿ.ಗಳನ್ನು ಅಳವಡಿಸಿ ಕಾರ್ಯಕ್ರಮದ ನೇರಪ್ರಸಾರದ ವೀಕ್ಷಣೆಗೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಅವಕಾಶ ಮಾಡಿಕೊಡಲಾಗಿತ್ತು.