ಶ್ರೀ ಗುಡ್ಡಾಪುರ ದಾನಮ್ಮಾದೇವಿ ಮಹಾಪುರಾಣ
10,000 ತಾಯಂದಿರಿಂದ ಸದ್ಗುರುವಿಗೆ ತನಾರತಿ,
ಮುಗಳಖೋಡ : ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರರ ಮುಕ್ತಿ ಮಂದಿರದಲ್ಲಿ ಶ್ರೀ ಯಲ್ಲಾಲಿಂಗೇಶ್ವರರ 39ನೆಯ ಪುಣ್ಯಾರಾಧನೆ ಕಾರ್ಯಕ್ರಮವು ಜನವರಿ 13 ರಿಂದ 27ರವರೆಗೆ ಅದ್ದೂರಿಯಾಗಿ ನಡೆಯಲಿದೆ.
ಸೋಮವಾರ 13ರಂದು ಬೆಳಗ್ಗೆ 10 ಗಂಟೆಗೆ ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಶ್ರೀ ಸಿದ್ದಲಿಂಗೇಶ್ವರ ಶ್ರೀ ಯಲ್ಲಾಲಿಂಗೇಶ್ವರ ಕರ್ತೃ ಗದ್ದುಗೆ , ಮಹಾ ರುದ್ರಾಭಿಷೇಕ,ವಿಶೇಷ ಪೂಜೆ, ಪುಷ್ಪವೃಷ್ಟಿ, ನಂತರ
ಯಲ್ಲಾಲಿಂಗೇಶ್ವರರ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕುವುದರ ಮೂಲಕ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಪ್ರತಿದಿನ ಸಂಜೆ 7 ಗಂಟೆಯಿಂದ 10 ಗಂಟೆಯವರೆಗೆ ಸುಕ್ಷೇತ್ರ ಗುಡ್ಡಾಪುರದ ಮಹಾಸರಣಿ ಶ್ರೀ ದಾನಮ್ಮಾದೇವಿ ಮಹಾಪುರಾಣ ನಡೆಯಲಿದೆ. ಶುಕ್ರವಾರ 17ರಂದು 10000 ತಾಯಂದಿರು ಏಕಕಾಲಕ್ಕೆ ಸದ್ಗುರುವಿಗೆ ತನಾರತಿ ಮಾಡುವ ಮೂಖೇನ ಶ್ರೀ ಯಲ್ಲಾಲಿಂಗ ಮಹಾಪ್ರಭುಗಳವರ ಬೆಳ್ಳಿ ತೊಟ್ಟಿಲು ಉತ್ಸವಕ್ಕೆ ನಮನಗಳನ್ನು ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರವಿವಾರ 26ರಂದು ಬೆಳಿಗ್ಗೆ 7:00ಗೆ ಓಂಕಾರ ನಾಮಸ್ಮರಣೆ ಮನೆಯ ಇರುವುದು ನಂತರ 8:00 ಗಂಟೆಗೆ ಕೋಳಿ ಗುಡ್ಡ ಶ್ರೀಮಠದಿಂದ ಬೆಳ್ಳಿ ಪಲ್ಲಕ್ಕಿಯೊಂದಿಗೆ ಪಾದಯಾತ್ರೆ ಮಧ್ಯಾಹ್ನ 2 ಗಂಟೆಗೆ ಮಹಾದ್ವಾರಕ್ಕೆ ತಲುಪುವುದು ನಂತರ ಮಹಾದ್ವಾರದಿಂದ ಶ್ರೀಮಠದವರೆಗೆ ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಬೆಳ್ಳಿರಥದಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ಸೋಮವಾರ 27ರಂದು ಬೆಳಗ್ಗೆ ಓಂಕಾರ ನಾಮಸ್ಮರಣೆ ಮುಕ್ತಾಯ ನಂತರ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಸುವರ್ಣ ಕಿರೀಟ ಧಾರಣೆ ಪಾದಪೂಜೆ ಸಕಲ ಸದ್ಭಕ್ತರಿಂದ ನೆರವೇರಲಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.
ವರದಿ : ಸಂತೋಷ ಮುಗಳಿ