ಪ್ರತಿಮಾ ಹಾಸನ್ ರವರ “ಮನದಾಳದ ಪ್ರತಿಬಿಂಬ” ಕೃತಿಯು ಲೋಕಾರ್ಪಣೆಗೊಂಡಿತು
ಬೆಂಗಳೂರು : ಇತ್ತೀಚೆಗೆ ನಡೆದ ಸ್ನೇಹಜೀವಿ ಗೆಳೆಯರ ಬಳಗ ಸಾಹಿತ್ಯ ಘಟಕ ಬೆಂಗಳೂರು. ಕಾರ್ಯಕ್ರಮವು ರಂಗ ಮಂದಿರ, ಬಾಗಲಕುಂಟೆ ಬೆಂಗಳೂರಿನಲ್ಲಿ ನಡೆಯಿತು. ಸಂಕ್ರಾಂತಿ ಸಂಭ್ರಮ 2024 ,ಕವಿಗೋಷ್ಠಿಯಲ್ಲಿ ಹಾಸನ ನಗರದ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರು ಭಾಗವಹಿಸಿ ಕವನ ವಚನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಪ್ರತಿಮಾ ಹಾಸನ್ ರವರನ್ನು ಗೌರವಪೂರ್ಣವಾಗಿ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಶಶಿಧರ್ ರವರು ಶ್ರೀಯುತ ಎಸ್ ಮುನಿರಾಜು ದಾಸರಹಳ್ಳಿ ವಿಧಾನಸಭಾ ಕ್ಷೇತ್ರ, ಇನ್ನು ಹಲವಾರು ಸಾಹಿತಿಗಳು ಕವಿಗಳು ಉಪಸ್ಥಿತರಿದ್ದರು. ನಂತರ ಮಧ್ಯಾಹ್ನ ರವೀಂದ್ರ ಕಲಾಕ್ಷೇತ್ರ ಬೆಂಗಳೂರಿನಲ್ಲಿ ನಡೆದ ಕಥಾ ಬಿಂದು ಸಾಹಿತ್ಯ ಸಮ್ಮೇಳನದಲ್ಲಿ ಹಾಸನ ನಗರದ ಸಮಾಜ ಸೇವಕಿ, ಶಿಕ್ಷಕಿ, ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರ “ಮನದಾಳದ ಪ್ರತಿಬಿಂಬ” ಪುಸ್ತಕವು ಲೋಕಾರ್ಪಣೆಗೊಂಡಿತು. ನಂತರ ಅವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಮತ್ತು ಪುಸ್ತಕಗಳ ಲೋಕಾರ್ಪಣೆ ನಡೆಯಿದ್ದು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಿನೋದಿನಿ ಆನಂದವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ ವಿ ಲಕ್ಷ್ಮಣಮೂರ್ತಿ, ಡಾಕ್ಟರ್ ಕೋಳ ಚಪ್ಪೇ ಗೋವಿಂದ ಭಟ್, ಕುಮಾರ ಚಲವಾದಿ ಹಾಸನ, ಇನ್ನು ಹಲವಾರು, ಸಾಹಿತಿಗಳು, ಕವಿಗಳು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವು ಸಂಸ್ಥಾಪಕ ಅಧ್ಯಕ್ಷರಾದಂತಹ ಶ್ರೀ ಪಿ ವಿ ಪ್ರದೀಪ್ ಕುಮಾರ್ ರವರ ಆಯೋಜನೆಯಲ್ಲಿ ಯಶಸ್ವಿಗೊಂಡಿತು.