Share the Post Now

ಶ್ರೀ ಸಿದ್ಧರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭ
                 ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಆಂಗ್ಲ ಭಾಷಾ ಕಲಿಕೆಯು ಅವಶ್ಯ ಮಾತ್ರವಲ್ಲದೇ ಅನಿವಾರ್ಯವಾಗಿದೆ. ವಿವಿಧ ದೇಶಗಳಿಗೆ ಕೆಲಸವನ್ನು ಅರಸಿಕೊಂಡೋ, ವ್ಯಾಪಾವ-ಉದ್ದಿಮೆ ಮಾಡಲೆಂದೋ, ಉನ್ನತ ಶಿಕ್ಷಣ ಪಡೆಯಲೆಂದೋ ಹೋಗುತ್ತಿರುವ ನಮ್ಮ ಮಕ್ಕಳು ಆಂಗ್ಲ ಭಾಷಾ ಸಂವಹನ ಕೌಶಲ್ಯವನ್ನು ಪಡೆಯುವುದು ಅಪೇಕ್ಷಣಿಯ ಎಂದು ಶ್ರೀ ಸಿದ್ಧರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯು ಆಂಗ್ಲ ಮಾಧ್ಯಮದಲ್ಲಿ ಉತ್ತಮ ಶಿಕ್ಷಣ ನೀಡುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಶ್ರೀ ಸಿದ್ಧರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿಗಳು ಹಾಗೂ ವಿಶ್ರಾಂತ ಆಂಗ್ಲ ಪ್ರಾಧ್ಯಾಪಕಿಯರಾದ ಡಾ.ಗುರುದೇವಿ ಹುಲೆಪ್ಪನವರಮಠ ರವರು ಅಭಿಪ್ರಾಯಪಟ್ಟರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ.ರಶ್ಮಿ ಜೈನ್ ಅವರು ಪ್ರತಿ ಮಗುವಿನಲ್ಲಿ ಅವರದೇ ಆದ ಪ್ರತಿಭೆ, ಸೃಜನಶೀಲತೆ ಇದೆ. ಅದನ್ನು ಪಾಲಕರು ಮತ್ತು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕೇ ವಿನಃ ಒಂದು ಮಗುವಿನ ಕಲಿಕಾ ಸಾಮರ್ಥಯ್ವನ್ನು ಇನ್ನೊಂದು ಮಗುವಿನ ಸಾಮರ್ಥ್ಯದೊಂದಿಗೆ ಹೋಲಿಸಬಾರದು ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ನಗರದ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎ.ಎಲ್.ಪಾಟೀಲ ರವರು ವಹಿಸಿದ್ದರು. ಅವರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಪಾಲಕರ ಪಾತ್ರ ಮಹತ್ವದ್ದು. ಪಾಲಕತ್ವವು ಒಂದು ದೊಡ್ಡ ಕಲೆ ಮತ್ತು ಸವಾಲಾಗಿದೆ ಹಾಗೂ ಪಾಲಕರು ತಮ್ಮ ದೈನಂದಿನ ಕೆಲಸ-ಕಾರ್ಯಗಳ ನಡುವೆ ಬಿಡುವು ಮಾಡಿಕೊಂಡು ಮಕ್ಕಳ ಚಲನ-ವಲನ, ಆಟ-ಪಾಠಗಳ ಮೇಲೆ ನಿಗಾ ಇಡುವುದು ಅತ್ಯವಶ್ಯವಾಗಿದೆ ಎಂದು ಸಲಹೆ ನೀಡಿದರು.  ವಿದ್ಯಾರ್ಥಿಗಳ ಹಾಡು ಹಾಗೂ ನೃತ್ಯ ಪ್ರದರ್ಶನಗಳು ಎಲ್ಲಾ ಸಭಿಕರ ಕಣ್ಮನ ಸೆಳೆದವು.
ಇದೇ ಸಂದರ್ಭದಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭೆ ತೋರಿದ ವಿದ್ಯಾರ್ಥಿಗಳಿಗೆ ಅತಿಥಿ ಅಭ್ಯಾಗತರು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಶಾಲೆಯ ಪ್ರಾಚಾರ್ಯರಾದ ಡಾ.ಪ್ರೇಮಾನಂದ ಜಾಧವ ರವರು ಸ್ವಾಗತಿಸಿದರು, ಶಿಕ್ಷಕಿಯರಾದ .ಸುನೀತಾ ಚೌಗಲೆ ಸೀಮಾ ಚಿಟ್ನಿಸ್ ಪ್ರಾರ್ಥಿಸಿದರು. ಶಿಕ್ಷಕಿಯರಾದ.ಸ್ನೇಹಾ ಗುಂಡೆ ವಾರ್ಷಿಕ ವರದಿ ವಾಚನವನ್ನು ಮಂಡಿಸಿದರು. ಶಿಕ್ಷಕಿಯರಾದ .ಸರಿತಾ ಪಾಟೀಲ ಹಾಗೂ. ಸವಿತಾ ಇಳಿಗೇರ ರವರು ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶಿಕ್ಷಕಿಯರಾದ ಶ್ರೀಮತಿ.ಗೀತಾ ತಿಪ್ಪಿಮಠ, ಮೀನಾಕ್ಷಿ ಯರಗಾಂವಿ ಹಾಗೂ.ಅಮೃತಾ ಬೈಲೂರ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಿಕ್ಷಕಿಯರಾದ ಶ್ರೀಮತಿ.ಸುನೀತಾ ಚೌಗಲೆ ಹಾಗೂ .ರೋಹಿಣಿ ಚಾಜಗೌಡ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಶಿಕ್ಷಕಿಯರಾದ.ರಂಜನಾ ಕಾಳೆ ವಂದಿಸಿದರು

Leave a Comment

Your email address will not be published. Required fields are marked *

error: Content is protected !!