ಹಳ್ಳೂರ.
ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಹಾಗೂ ರಥೋತ್ಸವವು ಸೋಮವಾರದಂದು ಅತೀ ವಿಜೃಂಭಣೆಯಿಂದ ಜರುಗುವುದು. ಜಾತ್ರಾಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ತೃತೀಯ ಬಾರಿಗೆ ದಿ,22 ಗುರುವಾರದಂದು 55 ಎಚ್ ಪಿ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ನಡೆಯುವುದು.ರವಿವಾರ ದಿ 25 ರಂದು ಒಂದು ನಿಮಿಷದ ಜೋಡೆತ್ತಿನ ಚಕ್ಕಡಿ ಬಂಡಿ ಶರ್ತು ಜರುಗುವುದು.ಸೋಮವಾರ ದಿ 26 ರಂದು ಶ್ರೀ ಬಸವೇಶ್ವರ ವಿಶೇಷ ಪೂಜೆ ಅಭಿಷೇಕ ನೈವೇದ್ಯ,ಸಾಯಂಕಾಲ ರಥೋತ್ಸವ ನಡೆದು ಅದೇ ದಿನ ರಾತ್ರಿ 8 ಗಂಟೆಗೆ ಗೀ,ಗೀ ಪದಗಳು ಜರುಗುತ್ತವೆ ಎಂದು ಜಾತ್ರಾ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.