ಬೆಳಗಾವಿ
ಅಥಣಿ: ರಾಜ್ಯದಲ್ಲಿ ಕೊಳಚೆ ಪ್ರದೇಶಾಭಿವೃದ್ಧಿ ಇಲಾಖೆಯಿಂದ ಅಥಣಿ ಪಟ್ಟಣದಲ್ಲಿ 798 ಮನೆಗಳು ಮಂಜೂರಾತಿ ಮಾಡಿ ಪ್ರತಿಯೊಂದು ವಾಸಿಸುವ ಮನೆಯನ್ನು ಮಹಿಳೆಯರ ಹೆಸರಿನಿಂದ ಉಪನೊಂದಣಿ ಕಛೇರಿಯಲ್ಲಿ ನೊಂದಾಯಿಸಿ ಅವರಿಗೆ ಹಕ್ಕುಪತ್ರ ನೀಡಲಾಗಿದೆ ಎಂದು ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.
ಅಥಣಿ ಪಟ್ಟಣದ ಲಿಡಕರ್ ಬಡಾವಣೆಯಲ್ಲಿ ಸ್ಲಂ ಮನೆಗಳ ಪರಿಶೀಲನೆ ಮಾಡಿ ಹಾಗೂ ಮಹಿಳೆಯರಿಗೆ ಸ್ವಯಂ ಉದ್ಯೋಗದ ತರಬೇತಿ ನೀಡಿ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿ ಅವರು, ರಾಜ್ಯದಲ್ಲಿ ಪಟ್ಟಣ ಪಂಚಾಯತ, ಮಹಾನಗರ ಪಾಲಿಕೆ,ಪುರಸಭೆ ವ್ಯಾಪ್ತಿಯಲ್ಲಿ ಬರುವ ಸ್ಲಂ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳನ್ನ ಆಯ್ಕೆ ಮಾಡಿ ಅವರಿಗೆ ಉಪನೊಂದಣಿ ಕಛೇರಿಯಲ್ಲಿ ಹೆಸರು ನೊಂದಾಯಿಸಿ ಹಕ್ಕು ಪತ್ರ ವಿತರಣೆ ಮಾಡಲಾಗಿದೆ.ಲಿಡಲರ್ ಕಾಲೋನಿಯಲ್ಲಿ ಇಲ್ಲಿಯವರೆಗೆ ೧೪ ಕೋಟಿ ರೂಪಾಯಿ ಅಭಿವೃದ್ಧಿ ಹಾಗೂ ಕೊಳಚೆ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಮನೆಕಟ್ಟಿಕೊಳ್ಳಲು ಒಟ್ಟು ೫೦ ಕೋಟಿ ರೂಪಾಯಿ ಅಂದರೆ ೬೪ ಕೋಟಿ ರೂಪಾಯಿ ಕಾಮಗಾರಿ ಮಾಡಿದ್ದೇನೆ ನಮ್ಮ ಅಭಿವೃದ್ಧಿ ಕಂಡು ಜನರು ನಮಗೆ ಬೆಂಬಲಿಸುತ್ತಿದ್ದಾರೆ.ಮುಂಬರುವ ಚುನಾವಣೆಯಲ್ಲಿ ನಮಗೆ ಭಾರಿ ಮತಗಳಿಂದ ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸವಿದೆ ಎಂದರು.
ಈ ವೇಳೆ ಪುರಸಭೆ ಮಾಜಿ ಸದಸ್ಯ ದಿಲೀಪ ಕಾಂಬ್ಳೆ, ಅನೀಲ ಸೌದಾಗರ,ಸುಂದರ ಸೌದಾಗರ,ಕುಮಾರ ರಾಯಬಾಗ,ಪುರಸಭೆ ಸದಸ್ಯ ಸಿದ್ದು ಪಾಟೀಲ್ ಅಥಣಿ ಪುರಸಭೆ ಮುಖ್ಯಾಧಿಕಾರಿ ದಡ್ಡಿ,ಸ್ಲಂ ಬೋರ್ಡ್ ಕಾರ್ಯನಿರ್ವಾಹಕ ಅಧಿಕಾರಿ ಶಂಭುಲಿಂಗ ,ವಿನಾಯಕ ಪಾಟೀಲ್, ಗುತ್ತಿಗೆದಾರರಾದ ರಾಜು ಅಲಬಾಳ ,ಶಶಿ ಸಾಳವೆ,ಅಬ್ದುಲ್ ಮುಲ್ಲಾ,ಶೇಖರ ಸೌದಾಗರ,ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು