ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ 75ನೇ ಗಣರಾಜ್ಯೋತ್ಸವ.

Share the Post Now


ವರದಿ: ಸಂಗಮೇಶ ಹಿರೇಮಠ.

ರಾಯಬಾಗ.

ಮುಗಳಖೋಡ: ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಡಾ. ಸಿ. ಬಿ. ಕುಲಿಗೋಡ ಪದವಿ ಮಹಾವಿದ್ಯಾಲಯದ ಆವರಣದಲ್ಲಿ 75ರ ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ಬ. ನಿ. ಕುಲಿಗೋಡ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಬಾ.ಸಿ.ಮಠಪತಿ ಶಾಲೆ, ರೈನಬೋ ಸೇಂಟ್ರಲ್ ಸ್ಕೂಲ್ ಸೇರಿದಂತೆ ಡಾ. ಸಿ ಬಿ ಕುಲಿಗೋಡ ಪದವಿ ಮಹಾವಿದ್ಯಾಲಯದ ಹಲವಾರು ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಕುರಿತು ಭಾಷಣ ಮಾಡಿ ರಾಷ್ಟ್ರಭಕ್ತಿ ಗೀತೆಗಳನ್ನು ಸಾದರಪಡಿಸಿದರು.

ಸಂಘದ ಅಧ್ಯಕ್ಷ, ಪುರಸಭೆ ಸದಸ್ಯ ಶ್ರೀ ಸಂಜಯ್ ಕುಲಿಗೋಡ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷ ಸ್ಥಾನವನ್ನು ನಿಕಟಪೂರ್ವ ಅಧ್ಯಕ್ಷ ಡಾ. ಸಿ. ಬಿ. ಕುಲಿಗೋಡ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕುಡಚಿ ಯುತ್ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಪರಮಾನಂದ ಬೆಳಗಲಿ ಆಗಮಿಸಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಆದಪ್ಪಗೋಳ, ಕಾರ್ಯದರ್ಶಿ ಪಿ.ಬಿ. ಖೇತಗೌಡರ, ಶಿವನಿಂಗ ಯರಡತ್ತಿ, ಪಿ.ಎಂ. ಕುಲಿಗೋಡ, ಯಮನಪ್ಪ ಬಾಬಣ್ಣವರ ಫೋಟೋಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು.

ಕಾರ್ಯಕ್ರಮವನ್ನು ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ.ಸಿ. ಕಂಬಾರ ಸ್ವಾಗತಿಸಿ, ಆರ್. ಎಸ್. ಶೇಗುಣಸಿ ನಿರೂಪಿಸಿ, ಸಂಗಮೇಶ ಹಿರೇಮಠ ವಂದಿಸಿದರು.

ಈ ಸಂದರ್ಭದಲ್ಲಿ ಮಲ್ಲಪ್ಪ ಕಮತಗಿ, ಭೀಮಶಿ ತೇಗೂರ, ಪುರಸಭೆ ಸದಸ್ಯ ಪರಪ್ಪ ಖೇತಗೌಡ, ಮಹಾವೀರ ಕುರಾಡೆ, ಬಸಪ್ಪ ಬಾಬಣ್ಣವರ, ಲಕ್ಷ್ಮಣ ಗೋಕಾಕ, ವಿಜಯ ನಾಯಿಕ, ನೇಮಣ್ಣ ಹುಲ್ಲೋಳಿ, ನೇಮಣ್ಣ ಬಾಬಣ್ಣವರ, ರಮೇಶ ಮುಧೋಳ, ಬಸವರಾಜ ತೇರದಾಳ, ಗೋಪಾಲ ಕುಲಿಗೋಡ ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗ, ವಿದ್ಯಾರ್ಥಿ ವೃಂದ ಹಾಗೂ ವಾಹನ ಚಾಲಕರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!