ವರದಿ :ರವಿ ಬಿ ಕಾಂಬಳೆ. ಬೆಳಗಾವ
ಬೆಳಗಾವಿ ಸುವರ್ಣ ಸೌಧದ ಪ್ರವೇಶ ದ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಆರೋಗ್ಯ ಸಚಿವ ಸುಧಾಕರ ಅವರು ಕರೋನಾ ಹೊಸ ಅಲೆಯ ಹರಡುವಿಕೆಯ ಬಗ್ಗೆ ಮಾತನಾಡಿದರು…
ಚೀನಾ ಹಾಗೂ ಮತ್ತಿತರ ದೇಶಗಳಲ್ಲಿ ಕೋವಿಡ್ಡಿನ್ ಹೊಸ ತಳಿಯಾದ ಒಮಿಕ್ರಾನ್ ಬಿಎಪ್7 ಎಂಬ ಸೋಂಕು ಹರಡುತ್ತಿದ್ದು ರಾಜ್ಯದಲ್ಲಿಯೂ ಅದರ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
3 ಗಂಟೆಗೆ ಸರ್ವ ಪಕ್ಷಗಳ ಸಭೆ ಮಾಡಿ ಕೋವಿಡ್ ಮಾರ್ಗಸೂಚಿ ಹೊರಡಿಸುತ್ತವೆ ಎಂದರು..
ಒಮಿಕ್ರಾನ್ ಬಿಎಪ್7 ಇದೊಂದು ಅಪಾಯಕಾರಿ ಸೋಂಕು ಆಗಿದ್ದು, ಮುಂದಿನ ದಿನಗಳಲ್ಲಿ ಹಲವಾರು ಹಬ್ಬಗಳು ಹೊಸ ವರ್ಷಾಚರಣೆ ಬರುವದರ ಹಿನ್ನೆಲೆಯಲ್ಲಿ ಸ್ವಲ್ಪ್ ಮಾರ್ಗಸೂಚಿಗಳು ಅವಶ್ಯಕ ಎಂದು ಹೇಳಿದರು …