ವರದಿ : ಪ್ರಕಾಶ ಚ ಕಂಬಾರ ಮುಗಳಖೋಡ
ರಾಯಬಾಗ.
ಮುಗಳಖೋಡ: ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ನಿಕಟಪೂರ್ವ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಾ ಸಿ ಬಿ ಕುಲಿಗೋಡ ಅವರು ತಮ್ಮ 79 ನೇ ಹುಟ್ಟು ಹಬ್ಬವನ್ನು ಸೋಮವಾರ ದಿ 15 ರಂದು ಉಡುಪಿಯ ಶ್ರೀಕೃಷ್ಣ ಸನ್ನಿಧಿಯಲ್ಲಿ (ಮಠದಲ್ಲಿ ) ಆಚರಿಸಿಕೋಳ್ಳುತ್ತಿದ್ದು, ಅವರ ಜನ್ಮದಿನದ ನಿಮಿತ್ಯ ಶ್ರೀ ಮಠದಲ್ಲಿ ಒಂದು ದಿನದ ಅನ್ನದಾಸೋಹವನ್ನು ಏರ್ಪಡಿಸಲಾಗಿದೆ. ಅದರೊಂದಿಗೆ ರವಿವಾರ ದಿ 14 ರಂದು ಮುಗಳಖೋಡ ಪಟ್ಟಣದ ನೂರಾರು ಬಡಜನರಿಗೆ ಬಟ್ಟೆ ಹಾಗೂ ದವಸ ಧಾನ್ಯಗಳು ವಿತರಣೆ ಮಾಡಲಾಯಿತು. ಇವರಿಗೆ ಆ ದೇವರು ಆರೋಗ್ಯ ಮತ್ತು ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಸಂಜಯ ಕುಲಿಗೋಡ ಹಾಗೂ ಆಡಳಿತ ಮಂಡಳಿ ಸರ್ವ ಸದಸ್ಯರು ಮತ್ತು ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶುಭ ಕೋರಿದ್ದಾರೆ.