ವರದಿ:ಸಚಿನ ಕಾಂಬ್ಳೆ.
ಚಿಕ್ಕೋಡಿ: 9 ನೇಯ ದಿನದ ಚಿಕ್ಕೋಡಿ ಜಿಲ್ಲಾ ಹೋರಾಟ ಮುಂದೆವರಿದಿದ್ದು, ಚಿಕ್ಕೋಡಿಯ ಮಾಜಿ ಶಾಸಕರು ಆದ ಬಾಳಾಸಾಹೇಬ ವಡ್ಡರ ಇವರು ವೇದಿಕೆಗೆ ಬಂದು ಬೆಂಬಲ ಸೂಚಿಸಿದರು, ಇವರು ಮಾತನಾಡಿ, ಕಳೆದ ಹಲವಾರು ದಶಕಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ ನಡೆದ ಹೋರಾಟ ಮಾಡುತ್ತಲೇ ಇದ್ದೇವೆ, ನಾನೂ ಸಹ ಉಪವಾಸ ಸತ್ಯಾಗ್ರಹ ಮಾಡಿ ಆಯಿತು, ಈ ನಿಮ್ಮ ಹೋರಾಟದ ಕೂಗನ್ನು ಯಾರು ಕೇಳುತ್ತಿದ್ದಾರೆ, ಚಿಕ್ಕೋಡಿ ಜಿಲ್ಲೆಯಾಗಿ ಮಾಡಿದರೆ ಯಾರಿಗೆ ವೈಯಕ್ತಿಕ ಲಾಭವಿದೆ, ತಮ್ಮ ತಮ್ಮ ಸ್ವಂತ ಲಾಭಕ್ಕಾಗಿ ಜಟಪಡಿಸು ಜನರಲ್ಲಿ ನಿಮ್ಮ ಕೂಗು ಕೇಳುವುದಾದರೂ ಹೇಗೆ ? ಎಂದು ಹೋರಾಟಗಾರರಿಗೆ ಪ್ರಶ್ನಿಸಿದರು, ಇಡೀ ರಾಜ್ಯದಲ್ಲಿ ಅತೀ ದೊಡ್ಡ ಜಿಲ್ಲೆ ಬೆಳಗಾವಿ ಎಂಬುದೂ ಎಲ್ಲರಿಗೂ ಗೊತ್ತಿದೆ, ಆದರೆ ಇಚ್ಛಾಶಕ್ತಿಯ ಕೊರತೆಯಿಂದ ಚಿಕ್ಕೋಡಿ ಜಿಲ್ಲೆಯಾಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಸಂಜು ಬಡಿಗೇರ ಮಾತನಾಡಿ, ಎಷ್ಟೋ ಸಲ ಪ್ರತಿಭಟನೆ ಮಾಡಿದರೂ ಯಾವೊಬ್ಬ ಜನಪ್ರತಿನಿಧಿಯೂ ಚಿಕ್ಕೋಡಿ ಜಿಲ್ಲೆ ಮಾಡಲು ಮುಂದಾಗುತ್ತಿಲ್ಲ, ಇನ್ನು ಬರುವ ದಿನಗಳಲ್ಲಿ ಮತ್ತಷ್ಟು ಉಗ್ರವಾದ ಹೋರಾಟ ಮಾಡುತ್ತೇವೆ, ಕೂಡಲೇ ಚಿಕ್ಕೋಡಿ ಜಿಲ್ಲೆಯಾಗಿ ಘೋಷಣೆ ಮಾಡದಿದ್ದಲ್ಲಿ ಬರುವ ಚುನಾವಣೆಯಲ್ಲಿ ಪಾಠ ಕಲಿಸುವ ಮೂಲಕ ಪರ್ಯಾಯ ಸರಕಾರ ನಿರ್ಮಾಣ ಮಾಡುವ ಬಗ್ಗೆ ಚಿಕ್ಕೋಡಿ ಉಪವಿಭಾಗದ ಜನರಲ್ಲಿ ಬೇಡಿಕೊಳ್ಳುತ್ತೇವೆ, ಚುನಾವಣೆ ಬಂದಾಗ ಮಾತ್ರ ಚಿಕ್ಕೋಡಿ ಜಿಲ್ಲೆಯ ಬಗ್ಗೆ ನೆನಪಾಗುತ್ತದೆ, ತದನಂತರ ತಮ್ಮದೇ ಆದ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ರಾಜಕಾರಣಿಗಳು ನಿರತರಾಗುತ್ತಾರೆ, ರಾಜ್ಯದ ದಕ್ಷಿಣದಲ್ಲಿ ಹಲವಾರು ಸಣ್ಣ ಸಣ್ಣ ಜಿಲ್ಲೆಗಳನ್ನು ಮಾಡಿ ಹೋರಾಟವಿಲ್ಲದೇ ತಮ್ಮ ತಮ್ಮ ಭಾಗಗಳ ಅಭಿವೃದ್ಧಿಗೊಳಿಸುತ್ತಿದ್ದಾರೆ, ಎಂದು ಹೇಳಿದರು.
ಈ ಸಂಧರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಕಾಶಿನಾಥ ಕುರಣಿ, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ, ಹೋರಾಟಗಾರರಾದ ಬಸವರಾಜ ಸಾಜನೆ, ರಮೇಶ ಡಂಗೇರ, ಬಸವರಾಜ ಹುನ್ನೂರ, ಮಾಳಪ್ಪಾ ಕರೆಣ್ಣವರ, ರಫೀಕ್ ಪಠಾಣ,ಈರಗೌಡಾ ಕೆಳಗಿನಮನಿ, ಕುಮಾರ ಪಾಟೀಲ, ರಾಜು ಮುಂಡೆ, ಸಚೀನ ದೊಡ್ಡಮನಿ, ನಾಗೇಶ ಮಾಳಿ, ಚನ್ನಪ್ಪಾ ಬಡಿಗೇರ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.