ಎನೂ ಬದಲಾಗಿಲ್ಲ ಕ್ಯಾಲೆಂಡರಿನ ಹೊರತು….
ಮೊಬೈಲಿನಲಿ ಮತ್ತದೆ ಶುಭಾಷಯದ ಸುರಿಮಳೆಯ ಸಾಲು
ಪಸರಿಕೊಂಡಿವೆ ರಾತ್ರಿಯ ಖಾಲಿ ಸೀಶೆಗಳು ಚದುರಿಬಿದ್ದಿವೆ ಯಾರೋ ಹೊಡೆದ ಪಟಾಕಿ ಚೂರುಗಳು…
ಬೆಳಕಾಗಿದೆಯಷ್ಟೇ ಮತ್ತದೆ ಸೂರ್ತ ಚಂದ್ರ ಬದಲಾಗದ ನಿರ್ಭಾವುಕ ಪರಿಚಯದ ಮುಖಗಳು
ಹೌದು ಬಿಡಿ ಏನೂ ಬದಲಾಗಿಲ್ಲ ಯಾರೂ ಬದಲಾಗಿಲ್ಲ ನೀವಾದರೂ ಸ್ವಲ್ಪ ಬದಲಾಗಿ ಸಾಕು…
ನಕ್ಕು ಬಿಡಿ ಒಮ್ಮೆ ಹರುಷ ಮೂಡಲಿ ಮನದಿ
ಹೊಸ ವರುಷ ಬಂದಿಹುದು ಮನೆ ಮನದ ಬಾಗಿಲಿಗೆ….
ಹಳೆ ನೋವುಗಳು ಮಾಯಲಿ ಹೊಸ ಹರುಷ ಮೂಡಲಿ
ನೊಂದ ಮುಖಗಳಲ್ಲಿ ಅನವರತ ನಗುವೊಮ್ಮೆ ಅರಳಲಿ…
ಮರೆತು ಬಿಡಿ ಹಳೆಯದನು
ಅಪ್ಪಿಕೊಳ್ಳಿ ಹೊಸದನ್ನು
ಕಣ್ಣ ಕಂಬನಿ ಕರಗಿ ಸುಖ ಶಾಂತಿ ನೆಲೆಸಲಿ…
ಹಳೆ ರಾಗ ದ್ವೇಷಗಳು
ಮುಗಿದು ಹೋಗಲಿ ಬೇಗ
ಯಾರೋ ಮಾಡಿದ ತಪ್ಪುಗಳ ಕ್ಷಮಿಸಿ ಬಿಡಿ ಒಮ್ಮೆ
ನಡೆಯುವವನಷ್ಟೇ
ಎಡವುವದು ಇಲ್ಲಿ
ನಂಬಿದವರಷ್ಟೇ ಕೆಡುವುದು ಇಲ್ಲಿ…
ಕೊಟ್ಟು ಬಿಡಿ ಒಲವನ್ನೆ ಮೊಗೆ ಮೊಗೆದು ಒಮ್ಮೆ
ಮೂಡುತಿರಲಿ ಶತ್ರುಗಳಲೂ ನಿಮ್ಮ ನೋಡಿದರೆ ಹೆಮ್ಮೆ…